ಕ್ಯಾಪ್ಟನ್​​​ ಕೆ.ಎಲ್​​ ರಾಹುಲ್​ಗೆ ಬಿಗ್​ ಶಾಕ್​ ಕೊಟ್ಟ ಲಕ್ನೋ ತಂಡ.. ಅಸಲಿಗೆ ಆಗಿದ್ದೇನು?

author-image
Ganesh Nachikethu
Updated On
ಚೆನ್ನೈ ವಿರುದ್ಧ RCB ಗೆದ್ರೆ ಕೆಎಲ್​ ರಾಹುಲ್ ಟೀಮ್​ ಪ್ಲೇ ಆಫ್​​ಗೆ ಹೋಗೋ ಚಾನ್ಸ್​ ಇದೆ.. ಹೇಗೆ?
Advertisment
  • ಕ್ಯಾಪ್ಟನ್ ಕೆ.ಎಲ್​​​ ರಾಹುಲ್​ಗೆ ಬಿಗ್​ ಶಾಕ್​​ ಕೊಟ್ಟ ಲಕ್ನೋ ತಂಡ
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮುನ್ನವೇ ಆಘಾತ
  • ಸ್ಫೋಟಕ ಸುಳಿವು ನೀಡಿದ ಲಕ್ನೋ ತಂಡದ ಅಮಿತ್​ ಮಿಶ್ರಾ!

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಐಪಿಎಲ್​ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ವರ್ಷದ ಕೊನೆಗೆ ಡಿಸೆಂಬರ್​​ನಲ್ಲಿ 2025ರ ಮೆಗಾ ಐಪಿಎಲ್​​ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಂಡು ಉಳಿದ ಎಲ್ಲರನ್ನು ಐಪಿಎಲ್​ ಹರಾಜಿಗೆ ಬಿಡಬೇಕಾಗುತ್ತದೆ. ಒಳ್ಳೆ ಆಟಗಾರರ ಖರೀದಿಗಾಗಿ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಪ್ಲಾನ್​ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಕ್ಯಾಪ್ಟನ್​ ಕೆ.ಎಲ್​ ರಾಹುಲ್​ಗೆ ಲಕ್ನೋ ತಂಡ ಬಿಗ್​ ಶಾಕ್​ ನೀಡಿದೆ.

ಅಮಿತ್​ ಮಿಶ್ರಾ ಹೇಳಿದ್ದೇನು ಗೊತ್ತಾ?

ಇನ್ನು, ಈ ಬಗ್ಗೆ ಮಾತಾಡಿರೋ ಲಕ್ನೋ ತಂಡದ ಆಟಗಾರ ಅಮಿತ್​ ಮಿಶ್ರಾ, ಕೆ.ಎಲ್​​ ರಾಹುಲ್​​ಗಿಂತ ಉತ್ತಮ ಕ್ಯಾಪ್ಟನ್​ಗಾಗಿ ಲಕ್ನೋ ತಂಡ ಕಾಯುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಕೆ.ಎಲ್​ ರಾಹುಲ್​​ ಲಕ್ನೋ ಟೀಮ್​ ತೊರೆಯೋ ಸುಳಿವು ನೀಡಿದ್ದಾರೆ.

ಮೂರು ತಿಂಗಳ ಹಿಂದೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2024ರ ಐಪಿಎಲ್​​ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​​​ ಹೀನಾಯವಾಗಿ ಸೋಲನ್ನಪ್ಪಿತ್ತು.

ರಾಹುಲ್​ಗೆ ಅವಮಾನ ಮಾಡಿದ್ದ ಲಕ್ನೋ ತಂಡದ ಮಾಲೀಕ

ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್​ ರೂಮ್​ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್​​ ಕೆ.ಎಲ್​​ ರಾಹುಲ್​ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ‌ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್​​ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ರು.

publive-image

ಇನ್ನು, ಮಾಜಿ ಕ್ರಿಕೆಟರ್ಸ್​​ ಮತ್ತು ಫ್ಯಾನ್ಸ್​ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಎಚ್ಚೆತ್ತ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್​ ರಾಹುಲ್​ ಕ್ಷಮೆ ಕೇಳಿದ್ರು. ನನ್ನಿಂದ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ಅಭಿಮಾನಿಗಳು, ಸಪೋರ್ಟಿಂಗ್​ ಸ್ಟ್ಯಾಫ್​​ ಮತ್ತು ಕೆ.ಎಲ್​ ರಾಹುಲ್​ಗೆ ಕ್ಷಮೆ ಕೇಳುತ್ತೇನೆ ಎಂದು ವಿಡಿಯೋ ಮಾಡಿದ್ರು. ಅದರಲ್ಲೂ ರಾಹುಲ್​ ಲಕ್ನೋ ತೊರೆದು ಆರ್​ಸಿಬಿ ಸೇರಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿತ್ತು.

ಇದನ್ನೂ ಓದಿ:‘ಕೊಹ್ಲಿ ಕೆಟ್ಟೋನು, ರೋಹಿತ್​​ ಒಳ್ಳೆಯವ್ನು’- ವಿರಾಟ್​​ ಜತೆ ಯಾರು ಇರಕ್ಕಾಗಲ್ಲ ಎಂದ ಮಾಜಿ ಕ್ರಿಕೆಟರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment