ಕೈ ಬಿಟ್ಟ ಬೆನ್ನಲ್ಲೇ KL ರಾಹುಲ್​​ ವಿರುದ್ಧ ಆಕ್ರೋಶ ಹೊರಹಾಕಿದ LSG ಮಾಲೀಕ; ಏನಂದ್ರು ಗೊತ್ತಾ?

author-image
Ganesh Nachikethu
Updated On
ಕನ್ನಡಿಗನಿಗೆ ಮತ್ತೊಂದು ಶಾಕ್​​; KL ರಾಹುಲ್​​ ಬಗ್ಗೆ ಮಹತ್ವದ ಅಪ್ಡೇಟ್​ ಕೊಟ್ಟ ಲಕ್ನೋ ತಂಡದ ಮಾಲೀಕ
Advertisment
  • ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್
  • ನಾಯಕ ಕೆಎಲ್ ರಾಹುಲ್ ಅವರನ್ನೇ ಕೈ ಬಿಟ್ಟ ಲಕ್ನೋ ಸೂಪರ್ ಜೈಂಟ್ಸ್​
  • ಕೈ ಬಿಟ್ಟ ಬೆನ್ನಲ್ಲೇ ರಾಹುಲ್​ ವಿರುದ್ಧ ಲಕ್ನೋ ತಂಡದ ಮಾಲೀಕ ಆಕ್ರೋಶ

2025ರ IPL ಟೂರ್ನಿಗಾಗಿ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ರಿಲೀಸ್​ ಮಾಡಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ರೀಟೈನ್​ ಲಿಸ್ಟ್​ ರಿಲೀಸ್​ ಮಾಡಿದ್ದು, ನಾಯಕ ಕೆಎಲ್ ರಾಹುಲ್ ಅವರನ್ನೇ ಕೈ ಬಿಟ್ಟಿದೆ.

ಐಪಿಎಲ್ 2025ರ ಮೆಗಾ ಹರಾಜಿಗೆ ಕೆಎಲ್ ರಾಹುಲ್ ಬಂದಿದ್ದು, ಭಾರೀ ಕುತೂಹಲ ಮೂಡಿಸಿದೆ. ಇವರ ಬದಲಿಗೆ ಲಕ್ನೋ ತಂಡದ ಮೊದಲ ಆಟಗಾರನಾಗಿ ವೆಸ್ಟ್‌ ಇಂಡೀಸ್ ಸ್ಪೋಟಕ ಬ್ಯಾಟರ್-ವಿಕೆಟ್‌ ಕೀಪರ್ ನಿಕೋಲಸ್ ಪುರನ್ ಅವರನ್ನು ರೀಟೈನ್​ ಮಾಡಿಕೊಂಡಿದೆ. ಪೂರನ್​ಗೆ ಬರೋಬ್ಬರಿ 21 ಕೋಟಿ ನೀಡಲಾಗಿದೆ.

ಇನ್ನು, 2ನೇ ಆಟಗಾರನಾಗಿ ಮಾಯಾಂಕ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರನ್ನು ರೀಟೈನ್​ ಮಾಡಿಕೊಳ್ಳಲಾಗಿದೆ. ಮಯಾಂಕ್​​, ರವಿ ಬಿಷ್ಣೋಯ್ ಇಬ್ಬರಿಗೂ ತಲಾ 11 ಕೋಟಿ ಕೊಟ್ಟು ಉಳಿಸಿಕೊಳ್ಳಲಾಗಿದೆ. ಅನ್‌ಕ್ಯಾಪ್ಡ್ ಪ್ಲೇಯರ್ಸ್​ ಆದ ಆಯುಷ್ ಬದೋನಿ ಮತ್ತು ಮೋಸಿನ್​ ಖಾನ್​​ ಅವರಿಗೆ ತಲಾ 4 ಕೋಟಿ ನೀಡಿ ಉಳಿಸಿಕೊಂಡಿದೆ.

ಕೆ.ಎಲ್​​ ರಾಹುಲ್​ ವಿರುದ್ಧ ಆಕ್ರೋಶ

ರೀಟೆನ್ಷನ್​​​ ಬಳಿಕ ಕೆ.ಎಲ್​ ರಾಹುಲ್​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಾಲಿಗೆ ಹರಿಬಿಟ್ಟಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಆಡೋರು ನಮಗೆ ಬೇಕಿಲ್ಲ. ತಂಡದ ಗೆಲುವಿಗೆ ಆಡೋ ಆಟಗಾರರನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ. ಎಲ್ಲೂ ಕೆ.ಎಲ್​ ರಾಹುಲ್​ ಹೆಸರು ಹೇಳದೆ ಆಕ್ರೋಶ ಹೊರಹಾಕಿದ್ದಾರೆ. ಇವರ ಹೇಳಿಕೆ ಎಲ್ಲೆಡೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರಾಹುಲ್​ ಕೈ ಬಿಡಲು ಕಾರಣವೇನು?

ಮೆಗಾ ಆಕ್ಷನ್​ಗೆ ಮುನ್ನವೇ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೆ.ಎಲ್​ ರಾಹುಲ್​ ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಮುಂದಾಗಿತ್ತು. ಆದರೆ, ಇವರು ಪರ್ಸನಲ್​​ ಮತ್ತು ಪ್ರೊಫೆಷನಲ್​ ಕಾರಣಕ್ಕೆ ತಂಡ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೆಗಾ ಹರಾಜಿಗೆ ಮುನ್ನ ಲಕ್ನೋ ತಂಡ ಕೆ.ಎಲ್​ ರಾಹುಲ್​ ಅವರನ್ನು 18 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಯಾವುದೇ ತಂಡ ಕೆ.ಎಲ್​ ರಾಹುಲ್​ ಅವರನ್ನು ಖರೀದಿ ಮಾಡಬೇಕು ಅನ್ನೋದಾದ್ರೆ ಕನಿಷ್ಠ 18 ಕೋಟಿಯಿಂದ ಗರಿಷ್ಠ 20 ಕೋಟಿ ಬೇಕು. ಆರ್​​ಸಿಬಿ, ಗುಜರಾತ್​ ಟೈಟನ್ಸ್​​, ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ರಾಹುಲ್​ ಖರೀದಿಗೆ ಆಸಕ್ತಿ ತೋರಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment