/newsfirstlive-kannada/media/post_attachments/wp-content/uploads/2025/04/Markram.jpg)
ಆಯುಷ್ ಬದೋನಿ ಹಾಗೂ ಐಡೆನ್ ಮಾರ್ಕ್ರಾಮ್ ಅವರ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ಗೆ 181 ರನ್ಗಳ ಗುರಿ ನೀಡಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಟಾಸ್ ಗೆದ್ದುಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಆರಂಭದಲ್ಲೇ ಆಘಾತಕ್ಕೆ ಒಳಗಾದರು. ಮಿಚೆಲ್ ಮಾರ್ಷ್ ಕೇವಲ 4 ರನ್ಗೆ ಕ್ಯಾಚ್ ನೀಡಿ ಹೊರ ನಡೆದರು.
ಇನ್ನೊಂದೆಡೆ ಬ್ಯಾಟಿಂಗ್ ಮುಂದುವರೆಸಿದ್ದ ಮಾರ್ಕ್ರಾಮ್ ತಂಡವನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರವಹಿಸಿದರು. 45 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ನಿಂದ 66 ರನ್ ಗಳಿಸಿ ರಿಯಾನ್ ಪರಾಗ್ಗೆ ಕ್ಯಾಚ್ ಕೊಟ್ಟರು. ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಪೂರನ್ ಈ ಪಂದ್ಯದಲ್ಲಿ 11 ರನ್ಗೆ ಎಲ್ಬಿ ಬಲೆಗೆ ಬಿದ್ದರು.
ಇದನ್ನೂ ಓದಿ:IPL ಪಾಯಿಂಟ್ ಟೇಬಲ್ನಲ್ಲಿ ಭಾರೀ ಬದಲಾವಣೆ.. ಗುಜರಾತ್ಗೆ ಗೆಲುವು, ಕುಸಿದ ಡೆಲ್ಲಿ
ಈ ಪಂದ್ಯದಲ್ಲಿ ಆದರೂ ಬ್ಯಾಟಿಂಗ್ ಮಾಡುತ್ತಾರೆ ಎಂದು ರಿಷಭ್ ಪಂತ್ ಮೇಲೆ ಭರವಸೆ ಇಡಲಾಗಿತ್ತು. ಆದರೆ ಭರವಸೆಗೆ ತಣ್ಣೀರು ಎರೆಚಿರುವ ಪಂತ್ 9 ಬಾಲ್ಗಳಲ್ಲಿ ಕೇವಲ 3 ರನ್ಗೆ ಕ್ಯಾಚ್ ಕೊಟ್ಟಿದ್ದಾರೆ. ಆಯುಷ್ ಬದೋನಿ ತಂಡಕ್ಕೆ ಅತ್ಯುತ್ತಮ ರನ್ಗಳ ಕೊಡುಗೆ ನೀಡಿದರು ಎನ್ನಬಹುದು. ಸಂಕಷ್ಟದಲ್ಲಿದ್ದ ಟೀಮ್ಗೆ ಆಶ್ರಯವಾದರು.
ಆಯುಷ್ ಬದೋನಿ ಕೇವಲ 34 ಎಸೆತದಲ್ಲಿ 5 ಬೌಂಡರಿ 1 ಸಿಕ್ಸರ್ನಿಂದ ಅರ್ಧಶತಕ ಬಾರಿಸಿದರು. ಅಬ್ದುಲ್ ಸಮದ್ 10 ಎಸೆತದಲ್ಲಿ 4 ಸಿಕ್ಸರ್ಗಳಿಂದ 30 ರನ್ಗಳ ಕಾಣಿಕೆ ನೀಡಿದರು. ಇದರಿಂದ ಲಕ್ನೋ ಟೀಮ್ 20 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ಗಳ ಗುರಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ