ಕನ್ನಡಿಗನಿಗೆ ಬಿಗ್​ ಶಾಕ್​​; ನಂಬಿಸಿ KL ರಾಹುಲ್​​ ಬೆನ್ನಿಗೆ ಚೂರಿ ಹಾಕಿದ ಲಕ್ನೋ; ಸ್ಟಾರ್​ ಆಟಗಾರರೇ ಔಟ್​​

author-image
Ganesh Nachikethu
Updated On
ಕನ್ನಡಿಗ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ; ಗೆದ್ದು ಬೀಗಿದ ರಾಜಸ್ತಾನ್​​​!
Advertisment
  • ನಂಬಿಸಿ ಸ್ಟಾರ್​​ ಆಟಗಾರನ ಬೆನ್ನಿಗೆ ಚೂರಿ ಹಾಕಿದ ಲಕ್ನೋ ತಂಡ!
  • ಕನ್ನಡಿಗ ಕೆ.ಎಲ್​ ರಾಹುಲ್​ ಜತೆಗೆ ಮೂವರು ಆಟಗಾರರಿಗೆ ಚೂರಿ
  • ಲಕ್ನೋ ತಂಡದ ಮಾಲೀಕ ಸಂಜೀವ್​​ ಗೋಯೆಂಕಾ ಪ್ಲಾನ್​ ಏನು?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಸೀಸನ್​​ ಕ್ರೇಜ್​​ ಹೆಚ್ಚುತ್ತಲೇ ಇದೆ. ಈ ಬಾರಿ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು? ಯಾರನ್ನು ರಿಲೀಸ್​ ಮಾಡಬೇಕು? ಅನ್ನೋ ಚರ್ಚೆ ಜೋರಾಗಿದೆ. ಎಲ್ಲಾ ಐಪಿಎಲ್​ ತಂಡಗಳು ರಿಲೀಸ್​ ಮತ್ತು ರೀಟೈನ್​ ಲಿಸ್ಟ್​​ ರೆಡಿ ಮಾಡಿಕೊಂಡಿವೆ. ಈ ಪೈಕಿ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಕೂಡ ಒಂದು.

ಲಕ್ನೋ ಸೂಪರ್ ಜೈಂಟ್ಸ್‌ ಐಪಿಎಲ್​ ಮೆಗಾ ಹರಾಜಿಗಾಗಿ ಭಾರೀ ತಯಾರಿ ನಡೆಸಿಕೊಂಡಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಕೈ ಬಿಟ್ಟು ತಮಗೆ ಬೇಕಾದ ಬ್ಯಾಟರ್​​​ ಖರೀದಿಗೆ ಲಕ್ನೋ ಪ್ಲಾನ್​ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ತಂಡವು ಹೊಸ ನಾಯಕನಿಗಾಗಿ ಹುಡುಕಾಟದಲ್ಲಿದೆ.

ಮೂರು ಜನರಿಗೆ ಗೇಟ್‌ ಪಾಸ್‌!

ಲಕ್ನೋ ತಂಡವು ಈ ಬಾರಿ ಐಪಿಎಲ್‌ ಮೆಗಾ ಹರಾಜಿಗೆ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡಾ ಅವರನ್ನು ಕೈಬಿಡಬಹುದು ಎಂದು ಹೇಳಲಾಗುತ್ತದೆ. ಈ ಪಟ್ಟಿಯಲ್ಲಿ ನವೀನ್ ಉಲ್ ಹಕ್ ಹೆಸರು ಕೂಡ ಇದೆ. ಹೀಗಾಗಿ ಈ ಆಟಗಾರರನ್ನು ರಿಲೀಸ್ ಮಾಡಿ ಭರವಸೆ ಹುಟ್ಟಿಸಿರುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಇನ್ನು, ಈ ಬಗ್ಗೆ ಲಕ್ನೋ ತಂಡದ ಮಾಲೀಕರು ಅಧಿಕೃತ ಮಾಹಿತಿ ನೀಡಿಲ್ಲ. ಯಾರನ್ನು ರಿಲೀಸ್‌ ಮಾಡಲಿದ್ದಾರೆ ಎಂಬ ಕುತೂಹಲ ಮಾತ್ರ ಮನೆ ಮಾಡಿರುವುದು ನಿಜ. ಆದರೆ, ಕೆ.ಎಲ್​ ರಾಹುಲ್​ ಅವರನ್ನು ಲಕ್ನೋ ಕೈ ಬಿಡುವುದು ಪಕ್ಕಾ ಆಗಿದೆ. ಇತ್ತೀಚೆಗಷ್ಟೇ ಲಕ್ನೋ ತಂಡದ ಮಾಲೀಕ ಸಂಜೀವ್​ ಗೋಯೆಂಕಾ ಕೆ.ಎಲ್​ ರಾಹುಲ್​ ನಮ್ಮ ಫ್ಯಾಮಿಲಿ ಎಂದಿದ್ದರು. ಇದರ ಬೆನ್ನಲ್ಲೇ ಈ ರೀತಿ ಒಂದು ಹರಿದಾಡುತ್ತಿದೆ.

ಇದನ್ನೂ ಓದಿ:ಪಂತ್​​ಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ಕೆ.ಎಲ್​ ರಾಹುಲ್​ಗೆ ಭರ್ಜರಿ ಆಫರ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment