11 ಬಾಲ್​​ನಲ್ಲಿ 26 ರನ್​ ಚಚ್ಚಿದ ಧೋನಿ, ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್..!

author-image
Ganesh
Updated On
11 ಬಾಲ್​​ನಲ್ಲಿ 26 ರನ್​ ಚಚ್ಚಿದ ಧೋನಿ, ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್..!
Advertisment
  • ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ CSKಗೆ ಗೆಲುವು
  • ಐದು ವಿಕೆಟ್​ಗಳಿಂದ ಗೆಲುವು ಕಂಡ ಧೋನಿ ಟೀಂ
  • ರಿಷಬ್ ಪಂತ್ ಬ್ಯಾಟ್​ನಿಂದ ಅಂತೂ ಬಂತು ರನ್ಸ್

ಸತತ ಸೋಲಿನ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್,​​ ಲಕ್ನೋ ವಿರುದ್ಧ ಗೆಲುವು ಸಾಧಿಸಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್​ನಲ್ಲಿ ಎರಡನೇ ಗೆಲುವು ದಾಖಲಿಸಿದೆ.

ಲಕ್ನೋ ನೀಡಿದ 167 ರನ್​​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ಕೊನೆಯ ಓವರ್‌ನಲ್ಲಿ ಲಕ್ನೋ ತಂಡವನ್ನು ಮಣಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು.

ಇದನ್ನೂ ಓದಿ: RCB ನೆಕ್ಸ್ಟ್​ ಮ್ಯಾಚ್ ಯಾವಾಗ, ಎಲ್ಲಿ..? ಬಲಿಷ್ಠ ಟೀಮ್ ಜೊತೆ ಹೋರಾಡಲಿರೋ ರಜತ್ ಸೇನೆ

ಶಿವಂ ದುಬೆ 37 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ರಚಿನ್ ರವೀಂದ್ರ 37 ರನ್ ಮತ್ತು ಶೇಖ್ ರಶೀದ್ 27 ರನ್​ಗಳ ಕಾಣಿಕೆ ನೀಡಿದರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಎಲ್​ಎಸ್​ಜಿ 7 ವಿಕೆಟ್ ಕಳೆದುಕೊಂಡು 166 ರನ್​ಗಳಿಸಿತ್ತು. ವಿಶೇಷ ಅಂದ್ರೆ ನಾಯಕ ರಿಷಬ್ ಪಂತ್ ಅವರು ಸ್ಫೋಟಕ ಬ್ಯಾಟಿಂಗ್ ಆಡಿದರು. 49 ಬಾಲ್​ನಲ್ಲಿ ನಾಲ್ಕು ಸಿಕ್ಸ್, ನಾಲ್ಕು ಬೌಂಡರಿ ಬಾರಿಸಿ ಬರೋಬ್ಬರಿ 63 ರನ್​ಗಳಿಸಿದರು. ಮಿಚೆಲ್ ಮಾರ್ಷ್ ಎಲ್​ಎಸ್​ಜಿ ಪರ 30 ರನ್​ಗಳ ಕಾಣಿಕೆ ನೀಡಿದರು.

ಇದನ್ನೂ ಓದಿ: ಲವ್ವರ್​ ಜೊತೆ AC ಲಾಡ್ಜ್​ನಲ್ಲಿ​ದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment