ಇಂದು ಬಲಿಷ್ಠ ಮುಂಬೈಗೆ ಲಕ್ನೋ ಸವಾಲ್​! ಉಭಯ ತಂಡಗಳಿಗೆ ಆರಂಭಿಕ ಆಟಗಾರರದ್ದೇ ಸಮಸ್ಯೆ!

author-image
Gopal Kulkarni
Updated On
ಇಂದು ಬಲಿಷ್ಠ ಮುಂಬೈಗೆ ಲಕ್ನೋ ಸವಾಲ್​! ಉಭಯ ತಂಡಗಳಿಗೆ ಆರಂಭಿಕ ಆಟಗಾರರದ್ದೇ ಸಮಸ್ಯೆ!
Advertisment
  • ಲಕ್ನೋ, ಮುಂಬೈ ಬ್ಯಾಟಲ್​.. ಯಾರಿಗೆ ಲಕ್..?
  • ಮುಂಬೈಗೆ ರೋಹಿತ್.. ಲಕ್ನೋಗೆ ಪಂತ್ ಕಾಟ​..!
  • ಲಕ್ನೋ ಹಿಟ್ಟರ್ಸ್​, ಮುಂಬೈ ಬೌಲರ್ಸ್ ಬ್ಯಾಟಲ್

ಐಪಿಎಲ್​ನಲ್ಲಿ ಇಂದು ಬಿಗ್ ಹಿಟ್ಟರ್​ಗಳ ಬ್ಯಾಟಲ್​ ನಡೆಯಲಿದೆ. ಸೂಪರ್​ ಸ್ಟಾರ್​ಗಳ ಬ್ಯಾಟಿಂಗ್ ನೋಡೋಕೆ ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ, ಸಿಕ್ಸರ್​ಗಳ ಸುನಾಮಿ ಸೃಷ್ಟಿಸಲು ಸಜ್ಜಾಗಿರುವ ಬ್ಯಾಟರ್​​ಗಳ ಪಾಲಿಗೆ ಇಂದಿನ ಪಂದ್ಯ ಅಗ್ನಿ ಪರೀಕ್ಷೆಯ ಕಣವಾಗಿದೆ.

ಸ್ಪೋಟಕ ಓಪನರ್ಸ್​, ಕ್ಷಣಾರ್ಧದಲ್ಲೇ ಪಂದ್ಯದ ಗತಿ ಬದಲಿಸುವ ಗೇಮ್ ಚೇಂಜರ್ಸ್. ಸಿಡಿದೆದ್ದು ನಿಂತ್ರೆ, ಸಿಕ್ಸರ್​ಗಳ ಮಳೆ ಸುರಿಸುವ ಮಷಿನ್ಸ್​. ಇವರ ಮುಖಾಮುಖಿಯಲ್ಲಿ ಬೌಲರ್​ಗಳ ಮಾರಣಹೋಮವೇ ನಡೆಯುತ್ತೆ. ಇವರು ಆನ್​ಫೀಲ್ಡ್​ನಲ್ಲಿ ಸೃಷ್ಟಿಸುವುದೇ ಸುನಾಮಿ. ರನ್​​ ಸುನಾಮಿ.! ಈ ಬಿಗ್​​ ಹಿಟ್ಟರ್​​ಗಳ ಬ್ಯಾಟಲ್​ಗೆ ವೇದಿಕೆ ಲಕ್ನೋದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ:ಸಿಕ್ಸರ್​ ಮೂಲಕವೇ ಡೀಲ್ ಮಾಡಿದ ಅಯ್ಯರ್, ರಿಂಕು ಸಿಂಗ್.. SRH ಪಡೆಯನ್ನು ಖೆಡ್ಡಾಗೆ ಬೀಳಿಸಿದ್ದು ಹೇಗೆ..?

ಇವತ್ತಿನ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​, ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗ್ತಿವೆ. ತವರಿನಲ್ಲಿ ಮೊದಲ ಪಂದ್ಯ ಸೋತಿರೋ ಲಕ್ನೋ, ಇವತ್ತು ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿದೆ. ಸತತ 2 ಸೋಲಿನ ಬಳಿಕ ಟೂರ್ನಿಯಲ್ಲಿ ಗೆಲುವಿನ ರುಚಿ ಕಂಡಿರುವ ಮುಂಬೈ ಇಂಡಿಯನ್ಸ್​ ದರ್ಬಾರ್​​ ನಡೆಸೋಕೆ ಸಜ್ಜಾಗಿವೆ. ಆದ್ರೆ, ಗೆಲುವಿನ ಕನವರಿಕೆಯಲ್ಲಿರುವ ಉಭಯ ತಂಡಗಳಿಗೂ ಪ್ರಮುಖ ಆಟಗಾರರೇ ವಿಲನ್​ಗಳಾಗಿದ್ದಾರೆ.

publive-image

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಬಲಿಷ್ಠ ಕೊಲ್ಕತ್ತಾ ಎದುರು ಗೆದ್ದು ಬೀಗಿದೆ. ಆದ್ರೆ, ಮುಂಬೈಗೆ ಮಾತ್ರ ರೋಹಿತ್ ಶರ್ಮಾರ ಬ್ಯಾಡ್ ಫಾರ್ಮ್ ಇನ್ನಿಲ್ಲದೆ ಕಾಡ್ತಿದೆ. ಕಳೆದ 3 ಪಂದ್ಯಗಳಿಂದ ಜಸ್ಟ್​ 21 ರನ್​ ಗಳಿಸಿರುವ ಹಿಟ್​ಮ್ಯಾನ್​, ಲಕ್ನೋ ಎದುರು ಸಿಡಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

publive-image

ಮುಂಬೈಗೆ ಮಾಜಿ ನಾಯಕ ರೋಹಿತ್ ಟೆನ್ಶನ್​ ತಂದಿಟ್ಟಿದ್ರೆ, ಲಕ್ನೋ ತಂಡದ ನಾಯಕ ರಿಷಭ್​ ಪಂತ್ ತಲೆನೋವಾಗಿದ್ದಾರೆ. ಸತತ ವೈಫಲ್ಯದಿಂದ ಬಳಲುತ್ತಿರುವ ಪಂತ್, 3 ಪಂದ್ಯಗಳಿಂದ 17 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದಾರೆ. ಇವರಿಬ್ಬರಲ್ಲಿ ಯಾರು ಫಾರ್ಮ್​ಗೆ ಮರಳ್ತಾರೆ ಅನ್ನೋದು ಪಂದ್ಯದ ರಿಸಲ್ಟ್​ಗಿಂತ ಹೆಚ್ಚಿನ ಕುತೂಹಲವನ್ನ ಅಭಿಮಾನಿಗಳಲ್ಲಿ ಹುಟ್ಟು ಹಾಕಿದೆ.

ಇದನ್ನೂ ಓದಿ:ಅಬ್​ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!

publive-image

ಸೂರ್ಯನ ಜೊತೆ ಪಾಂಡ್ಯ ತೋರಬೇಕು ಪವರ್..!
ಕಳೆದ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ ಫಾರ್ಮ್​ಗೆ ಮರಳಿದ್ದಾರೆ. ಆದ್ರೂ, ರಿಕಲ್ಟನ್​​ಗೆ ಲಕ್ನೋದಂತ ಸ್ಪಿನ್ ಟ್ರ್ಯಾಕ್​ನಲ್ಲಿ ಬಿಗ್ ಚಾಲೆಂಜ್ ಎದುರಾಗಲಿದೆ. ಹೀಗಾಗಿ ತಿಲಕ್ ವರ್ಮ, ಸೂರ್ಯಕುಮಾರ್​ ಬಿಗ್ ರೋಲ್ ಪ್ಲೇ ಮಾಡಬೇಕಿದೆ. ಇವರ ಜೊತೆಗೆ ರಾಬಿನ್ ಮಿನ್ಜ್​, ವಿಲ್ ಜಾಕ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​ನಲ್ಲಿ ಧಮ್ ತೋರಿಸಬೇಕಿದೆ. ಆಗ ಮಾತ್ರ ಬಿಗ್​ಸ್ಕೋರ್​ ಕಲೆ ಹಾಕೋಕೆ ಸಾಧ್ಯ

publive-image

ಲಕ್ನೋ ಬಿಗ್​ ಹಿಟ್ಟರ್ಸ್​ V/S ಮುಂಬೈ ಬೌಲರ್ಸ್ ಬ್ಯಾಟಲ್.!
ಇವತ್ತು ಲಕ್ನೋ ಬಿಗ್ ಹಿಟ್ಟರ್ಸ್ ವರ್ಸಸ್ ಮುಂಬೈ ಬೌಲರ್​ಗಳ ಕಾಳಗ ಅಂದ್ರೆ, ತಪ್ಪಿಲ್ಲ. ಯಾಕಂದ್ರೆ, ಲಕ್ನೋ ಪಡೆಯಲ್ಲಿ ಮಿಚೆಲ್ ಮಾರ್ಶ್​, ನಿಕೋಲಸ್ ಪೂರನ್, ಡೆವಿಡ್ ಮಿಲ್ಲರ್​​​ರಂಥ ಡೆಡ್ಲಿ ಬ್ಯಾಟರ್​ಗಳ ಪಡೆ ಇದೆ. ಇವರಿಗೆ ಸಿಂಗಲ್ ಹ್ಯಾಂಡ್​ ಆಗಿ ಪಂದ್ಯ ಗೆಲ್ಲಿಸೋ ತಾಕತ್ತಿದೆ. ಲಕ್ನೋ ಇವತ್ತು ತವರಿನಲ್ಲಿ ಗೆಲ್ಲಬೇಕಾದ್ರೆ. ಈ ತ್ರಿವಳಿಗಳ ಆಟವೇ ಇಂಪಾರ್ಟೆಂಟ್.!

publive-image

ಲಕ್ನೋನ ಈ ಡೇಂಜರಸ್ ಬ್ಯಾಟರ್​ಗಳಿಗೆ ಮೂಗುದಾರ ಹಾಕಲು ಮುಂಬೈ ಬೌಲರ್ಸ್​ ರೆಡಿಯಾಗಿದ್ದಾರೆ. ಅನುಭವಿ ಟ್ರೆಂಟ್ ಬೋಲ್ಟ್, ದೀಪಕ್ ಚಹರ್ ಜೊತೆಗೆ ಯಂಗ್ ಪೇಸರ್​ ಅಶ್ವನಿ ಕುಮಾರ್, ಚೈನಾಮನ್ ಸ್ಪಿನ್ನರ್​ ವಿಘ್ನೇಶ್ ಪುತ್ತೂರ್, ಮುಜೀಬ್ ರೆಹಮಾನ್, ಮಿಚೆಲ್ ಸ್ಯಾಂಟ್ನರ್​ರಂಥ ಸಾಲಿಡ್ ಬೌಲಿಂಗ್ ಪಡೆಯ ಬಲ ಮುಂಬೈಗಿದೆ. ಅದ್ರಲ್ಲೂ ಸ್ಪಿನ್ನರ್​ಗಳಿಗೆ ನೆರವಾಗುವ ಈ ಪಿಚ್​ನಲ್ಲಿ ಲಕ್ನೋ ಬ್ಯಾಟಿಂಗ್​​ಗಿಂತ ಮುಂಬೈ ಬೌಲಿಂಗ್​ ಬಲಿಷ್ಟವಾಗಿ ಕಾಣ್ತಿದೆ.

publive-image

ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ಬೌಲಿಂಗ್​ ಸ್ವಲ್ಪ ವೀಕ್​ ಅನ್ನಿಸ್ತಾ ಇದ್ರೂ, ಬ್ಯಾಟಿಂಗ್ ಸಾಲಿಡ್ ಆಗಿದೆ. ಹೋಮ್​ ಅಡ್ವಾಂಟೇಜ್​ ಕೂಡ ತಂಡಕ್ಕಿದೆ. ಆದ್ರೆ, ಲಕ್ನೋಗಿಂತ ಮುಂಬೈ ಬ್ಯಾಲೆನ್ಸಿಂಗ್ ಆಗಿ ಕಾಣ್ತಿದೆ. ಹೀಗಾಗಿ ಮುಂಬೈ ಇಂಡಿಯನ್ಸ್​, ಗೆಲ್ಲೋ ಹಾಟ್​ ಫೇವರಿಟ್ ಅನಿಸಿದೆ. ಆದ್ರೆ, ಟಿ20ಯೆಂಬ ಅದೃಷ್ಟದಾಟದಲ್ಲೂ ಯಾವ ಕ್ಷಣದಲ್ಲಿ, ಏನು​ ಬೇಕಾದರೂ ಆಗಬಹುದು. ಹೀಗಾಗಿ ಇಂದು ಲಕ್ನೋಗೆ ಲಕ್​ ಹೊಡೆಯುತ್ತಾ.? ಮುಂಬೈ ಗೆಲುವಿನ ಓಟ ಮುಂದುವರೆಸುತ್ತಾ.? ಅನ್ನೋದೆ ಕ್ಯೂರಿಯಾಸಿಟಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment