/newsfirstlive-kannada/media/post_attachments/wp-content/uploads/2025/04/PANDYA.jpg)
2025ರ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲವು ಪಡೆದಿದೆ. 12 ರನ್ಗಳ ಅಂತದಿಂದ ಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಪಡೆಯಿತು.
ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಪಾಂಡ್ಯ ಟಾಸ್ ಗೆದ್ದು, ಲಕ್ನೋ ಟೀಮ್ ಅನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕರಮ್ ಉತ್ತಮ ಆರಂಭ ಪಡೆದುಕೊಂಡರು. ಮಿಚೆಲ್ ಮಾರ್ಷ್ ಕೇವಲ 31 ಎಸೆತಗಳಲ್ಲಿ 60 ರನ್ ಗಳಿಸಿ ಔಟ್ ಆದ್ರೆ, ಮಾರ್ಕರಮ್ 53 ರನ್ಗಳನ್ನ ಬಾರಿಸಿದರು. ಈ ಮೂಲಕ ಓಪನರ್ ಇಬ್ಬರು ಅರ್ಧ ಶತಕ ಸಿಡಿಸಿದರು.
ಇವರ ನಂತರ ಬಂದ ನಿಕೋಲಸ್ ಪೂರನ್ ಕೇವಲ 12 ರನ್ಗೆ ಪಾಂಡ್ಯ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಹೋದರು. ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಮತ್ತೆ ವಿಫಲ ಬ್ಯಾಟಿಂಗ್ನಿಂದ 2 ರನ್ಗೆ ಔಟ್ ಆದರು. ಆಯುಷ್ಯ ಬದೊನಿ 30 ಹಾಗೂ ಮಿಲ್ಲರ್ 27 ಕೆಲ ಸಮಯ ಮುಂಬೈ ಬೌಲರ್ಗಳನ್ನ ಕಾಡಿದರು. ಹೀಗಾಗಿ ಲಕ್ನೋ 20 ಓವರ್ಗಳಲ್ಲಿ 8 ವಿಕೆಟ್ಗೆ 204 ರನ್ಗಳ ಟಾರ್ಗೆಟ್ ಅನ್ನು ನೀಡಿತ್ತು.
ಇದನ್ನೂ ಓದಿ:4, 4, 4, 4, 4, 4, 4, 6, 6; ಮುಂಬೈ ಬೌಲರ್ಗಳನ್ನ ಚಚ್ಚಿದ ಓಪನರ್ ಮಿಚೆಲ್ ಮಾರ್ಷ್, ಅರ್ಧ ಶತಕ
ಈ ಗುರಿ ಬೆನ್ನು ಹತ್ತಿದ್ದ ಮುಂಬೈ ಆರಂಭದಲ್ಲೇ ದೊಡ್ಡ ನಷ್ಟ ಅನುಭವಿಸಿತು. ಓಪನರ್ಸ್ ವಿಲ್ ಜಾಕ್ಸ್ 05, ರಾಯನ್ 10 ರನ್ಗೆ ವಿಕೆಟ್ ಕಳೆದುಕೊಂಡರು. 3ನೇ ಕ್ರಮಾಂಕದಲ್ಲಿ ಕಣಕ್ಕೆ ಬಂದ ನಮನ್ ಧೀರ್ ಭರ್ಜರಿ ಬ್ಯಾಟಿಂಗ್ ಮಾಡಿ ಕೇವಲ 24 ಬಾಲ್ಗಳಲ್ಲಿ 4 ಫೋರ್, 3 ಭರ್ಜರಿ ಸಿಕ್ಸರ್ನಿಂದ 46 ರನ್ಗಳಿಸಿ ಔಟ್ ಆದರು. ಕೊಂಚದರಲ್ಲೇ ಅರ್ಧ ಶತಕ ಮಿಸ್ ಮಾಡಿಕೊಂಡರು.
ಸೂರ್ಯಕುಮಾರ್ ಮುಂಬೈಗೆ ಉತ್ತಮ ರನ್ಗಳ ಹೊಳೆ ಹರಿಸಿದರು. ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ 31 ಬಾಲ್ಗಳಲ್ಲಿ 1 ಸಿಕ್ಸ್, 7 ಅದ್ಭುತವಾದ ಬೌಂಡರಿಯಿಂದ ಹಾಫ್ಸೆಂಚುರಿ ಬಾರಿಸಿದರು. ಹಾಗೇ ಬ್ಯಾಟಿಂಗ್ ಮುಂದುವರೆಸಿದ ಸೂರ್ಯ 67 ರನ್ಗಳಿಂದ ಆಡುವಾಗ ಬಿಗ್ ಶಾಟ್ ಹೊಡೆದು ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿದರು. ಸೂರ್ಯಗೆ ತಿಲಕ್ ವರ್ಮಾ ಉತ್ತಮ ಸಾಥ್ ನೀಡಿದರು. ಆದರೆ 25 ರನ್ ಗಳಿಸಿದಾಗ ರಿಟೈರ್ಡ್ ಕೊಟ್ಟು ಪೆವಿಲಿಯನ್ಗೆ ನಡೆದರು.
ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 16 ಬಾಲ್ಗಳಲ್ಲಿ 28 ರನ್ ಗಳಿಸಿದರು. 20 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳನ್ನು ಕಳೆದುಕೊಂಡು 191 ರನ್ಗಳನ್ನು ಗಳಿಸಿತು. ಕೇವಲ 12 ರನ್ಗಳಿಂದ ಮಾತ್ರ ಹಾರ್ದಿಕ್ ಪಾಂಡ್ಯ ಪಡೆ ಸೋಲೋಪ್ಪಿಕೊಂಡಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ