/newsfirstlive-kannada/media/post_attachments/wp-content/uploads/2025/03/Nicholas_Pooran_2.jpg)
ತವರಿನ ಮೈದಾನದಲ್ಲಿ ನಡೆದ ಐಪಿಎಲ್ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಜೊತೆ ಸನ್ರೈಸರ್ಸ್ ಹೈದ್ರಾಬಾದ್ ಟೀಮ್ ಸೋಲೊಪ್ಪಿಕೊಂಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಿಯಮದಂತೆ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ ಹೈದ್ರಾಬಾದ್ ಓಪನರ್ಸ್ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ 6 ರನ್ ಗಳಿಸಿ ಆಡುವಾಗ ಪೂರನ್ಗೆ ಕ್ಯಾಚ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ನಿತೀಶ್ ಕುಮಾರ್ 32, ಕ್ಲಾಸೆನ್ 26, ಅಂಕಿತ್ 36, ನಾಯಕ ಕಮಿನ್ಸ್ 18 ರನ್ಗಳ ನೆರವಿನಿಂದ ಹೈದ್ರಾಬಾದ್ 190 ರನ್ ಗುರಿ ನೀಡಿತ್ತು. ಇನ್ನು ಲಕ್ನೋ ಪರ ಬಿರುಸಿನ ಬೌಲಿಂಗ್ ನಡೆಸಿ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಬೌಲರ್ಗಳು ಯಶಸ್ವಿಯಾದರು. ಶಾರ್ದುಲ್ ಠಾಕೂರ್ ಅವರ ಬೌಲಿಂಗ್ ಪರಾಕ್ರಮದ ಮುಂದೆ ಅಭಿಷೇಕ್ ಶರ್ಮಾ, ಕಿಶನ್, ಮನೋಹರ, ಶಮಿ ವಿಕೆಟ್ ಒಪ್ಪಿಸಿದರು.
191 ರನ್ಗಳ ಟಾರ್ಗೆಟ್ ಅನ್ನು ಬೆನ್ನು ಹತ್ತಿದ್ದ ಲಕ್ನೋ 5 ವಿಕೆಟ್ಗಳಿಂದ ಅಮೋಘ ಗೆಲುವು ಪಡೆದಿದೆ. ಲಕ್ನೋ ಪರ ಬ್ಯಾಟಿಂಗ್ಗೆ ಇಳಿದ ಮಿಚೆಲ್ ಮಾರ್ಷ್ ಹಾಗೂ ಮಾರ್ಕರಮ್ ಅಂತಹ ಆರಂಭ ಏನು ಪಡೆಯಲಿಲ್ಲ. ಮಾರ್ಕರಮ್ ಕೇವಲ 1 ರನ್ಗೆ ಔಟ್ ಆಗಿ ಪೆವಿಲಿಯನ್ಗೆ ನಡೆದರು. ಇವರ ಬಳಿಕ ಕ್ರೀಸ್ಗೆ ಆಗಮಿಸಿದ ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ಗೆ ಜೊತೆಯಾದರು. ಅಬ್ಬರದ ಬ್ಯಾಟಿಂಗ್ಗೆ ಮುಂದಾದ ಪೂರನ್, ಮಿಚೆಲ್ ಮಾರ್ಷ್ ಬೌಲರ್ಗಳ ಮೇಲೆ ಎರಗಿದರು.
ಇದನ್ನೂ ಓದಿ: 6, 6, 6, 6, 6, 6; ಸಿಡಿಲಬ್ಬರದ ಬ್ಯಾಟಿಂಗ್.. ಕೇವಲ 18 ಬಾಲ್ಗೆ ಅರ್ಧಶತಕ ಸಿಡಿಸಿದ ಪೂರನ್
ನಿಕೋಲಸ್ ಪೂರನ್ ಅವರು ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಮೇತ ಅರ್ಧ ಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕವೂ ಬ್ಯಾಟಿಂಗ್ ಮುಂದುವರೆಸಿದ ಪೂರಾನ್, ಕೇವಲ 26 ಎಸೆತಗಳಲ್ಲಿ 6 ಬೌಂಡರಿ, 6 ಅಮೋಘವಾದ ಸಿಕ್ಸರ್ನಿಂದ 70 ರನ್ ಗಳಿಸಿ ಆಡುವಾಗ ಎಲ್ಬಿಗೆ ಬಲಿಯಾದರು. ಇನ್ನು ಮಾರ್ಷ್ ಹಾಫ್ಸೆಂಚುರಿ ಬಾರಿಸಿದರು. 16.1 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಗಳಿಸುವ ಮೂಲಕ ಲಕ್ನೋ ಗೆಲುವು ಪಡೆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ