/newsfirstlive-kannada/media/post_attachments/wp-content/uploads/2025/04/Nicholas_Pooran.jpg)
ಕಳೆದ 4 ಪಂದ್ಯಗಳಿಂದ ಸತತ ಗೆಲುವಿನ ಓಟ ಆರಂಭಿಸಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಬ್ರೇಕ್​​​ ಹಾಕಿದೆ. ತವರಿನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಲಕ್ನೋ ಟೀಮ್ ಅಮೋಘವಾದ ಗೆಲುವು ಪಡೆದಿದೆ.
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಕ್ಯಾಪ್ಟನ್​ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿ ಗುಜರಾತ್​ ತಂಡದವರನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಗುಜರಾತ್ ಪರ ನಾಯಕ ಶುಭ್​ಮನ್​ ಗಿಲ್​ ಹಾಗೂ ಸಾಯಿ ಸುದರ್ಶನ್​ ಅತ್ಯದ್ಭುತ ಇನ್ನಿಂಗ್ಸ್​ ಕಟ್ಟಿದರು.
/newsfirstlive-kannada/media/post_attachments/wp-content/uploads/2025/04/GILL_SAI_SUDARSHAN.jpg)
ಇದರಿಂದ ತಂಡದ ಮೊತ್ತ 120 ಆಗಿದ್ದಾಗ ಗಿಲ್​ ಹಾಫ್​​ ಸೆಂಚುರಿ ಸಿಡಿಸಿದ ಬಳಿಕ ಪೂರನ್​ಗೆ ಕ್ಯಾಚ್ ಕೊಟ್ಟರು. ನಾಯಕನ ಬೆನ್ನಲ್ಲೇ ಸುದರ್ಶನ್​ ಕೂಡ 60 ರನ್​ ಗಳಿಸಿ ಆಡುವಾಗ ಆವೇಶ್​ಖಾನ್​ ಬೌಲಿಂಗ್​ನಲ್ಲಿ ಔಟ್​ ಆಗಿ ನಡೆದರು. ಜೋಶ್​ ಬಟ್ಲರ್​ 16, ಸುಂದರ್ 2 ಬೇಗನೇ ಕ್ರೀಸ್​ ಖಾಲಿ ಮಾಡಿದರು. ಶೆರ್ಫೇನ್ ರುದರ್ಫೋರ್ಡ್ 22 ಹಾಗೂ ಶಾರುಖ್​ ಖಾನ್ ಅವರ 11 ರನ್​ಗಳಿಂದ ಗುಜರಾತ್ ತಂಡ 181 ರನ್​ಗಳ ಗುರಿಯನ್ನ ಲಕ್ನೋಗೆ ನೀಡಿತ್ತು.
ತವರಲ್ಲಿ ಈ ಟಾರ್ಗೆಟ್​ ಚೇಸ್ ಮಾಡಲು ಶುರು ಮಾಡಿದ ಲಕ್ನೋ ಆರಂಭದಲ್ಲೇ ಬಲಿಷ್ಠ ಬ್ಯಾಟಿಂಗ್ ಮಾಡಿತು. ತಂಡದ ಮೊತ್ತ 65 ಆಗಿದ್ದಾಗ ಕ್ಯಾಪ್ಟನ್​ ಪಂತ್, ಸುಂದರ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಮಿಚೆಲ್​ ಮಾರ್ಷ್​ ಅನುಪಸ್ಥಿತಿಯಲ್ಲಿ ಪಂತ್ ಆರಂಭಿಕರಾಗಿ ಕಣಕ್ಕೆ ಇಳಿದು ಬ್ಯಾಟಿಂಗ್​ನಲ್ಲಿ ಕೊಂಚ ಸುಧಾರಣೆ ಕಂಡರು. ಪಂತ್ ಬಳಿಕ ಕ್ರೀಸ್​ಗೆ ನಿಕೋಲಸ್​ ಪೂರನ್​ ಆಗಮಿಸಿದರು.
/newsfirstlive-kannada/media/post_attachments/wp-content/uploads/2025/03/Nicholas_Pooran_1.jpg)
ಆದರೆ ಪಂತ್ ಜೊತೆ ಓಪನರ್​ ಆಗಿ ಬಂದಿದ್ದ ಮಾರ್ಕ್ರಾಮ್ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ್ದರು. ಹೀಗಾಗಿಯೇ 31 ಎಸೆತದಲ್ಲಿ ಮಾರ್ಕ್ರಾಮ್ 9 ಬೌಂಡರಿ, 1 ಸಿಕ್ಸರ್​ನಿಂದ ಭರ್ಜರಿ ಅರ್ಧಶತಕ ಸಿಡಿಸಿ ಬ್ಯಾಟ್​ ಮೇಲೆತ್ತಿದರು. 58 ರನ್​ಗಳಿಸಿ ಆಡುವಾಗ ಗಿಲ್​ಗೆ ಕ್ಯಾಚ್ ಕೊಟ್ಟು ನಡೆದರು. ಒಬ್ಬರು ಹೋದರು ಎನ್ನುವಷ್ಟರಲ್ಲಿ ಹೊಡಿಬಡಿ ಬ್ಯಾಟಿಂಗ್ ಅನ್ನು ಪೂರನ್ ಆಗಲೇ ಆರಂಭಿಸಿದ್ದರು.
ಈ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿರುವ ನಿಕೋಲಸ್ ಪೂರನ್ ಕೇವಲ 24 ಎಸೆತಗಳಲ್ಲಿ 1 ಫೋರ್ 6 ಸಿಕ್ಸರ್ ಸಮೇತ ಅದ್ಭುತವಾದ ಅರ್ಧಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಇದು ಪೂರನ್ ಅವರ 4ನೇ ಅರ್ಧಶತಕವಾಗಿದೆ. 61 ರನ್​ ಗಳಿಸಿರುವಾಗ ರಶೀದ್​ ಖಾನ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿ ಬೇಸರದಲ್ಲೇ ಹೆಜ್ಜೆ ಹಾಕಿದರು. ಬಳಿಕ ಬ್ಯಾಟಿಂಗ್​ಗೆ ಬಂದ ಆಯುಷ್​ ಬದೋನಿ ತಂಡ ಗೆಲ್ಲುವವರೆಗೆ ತಾಳ್ಮೆಯ ಆಟ ಆಡಿದರು. ಆಯುಷ್​ ಬದೋನಿ 20 ಎಸೆತಕ್ಕೆ 28 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 19.3 ಓವರ್​ನಲ್ಲಿ ಲಕ್ನೋ ತಂಡ 4 ವಿಕೆಟ್​ಗೆ 186 ರನ್​ ಗಳಿಸುವ ಮೂಲಕ ವಿಜಯ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us