newsfirstkannada.com

ಜಸ್ಟ್​ ಕಾರಿಗೆ ಬೈಕ್​ ಡಿಕ್ಕಿ, ವ್ಯಕ್ತಿಯ ಎದೆ ಮೇಲಿನ ಶರ್ಟ್​ ಹಿಡಿದ ಯುವತಿ.. ಮುಂದೇನಾಯ್ತು?

Share :

Published April 15, 2024 at 10:35am

  ಕೈಯಲ್ಲಿ ಲಾಠಿ ಹಿಡಿದು ಮಹಿಳಾ ಪೊಲೀಸ್​ನಂತೆ ಯುವತಿ ವರ್ತನೆ

  ಸ್ಥಳಕ್ಕೆ ಪೊಲೀಸರು ಬಂದು ಇಬ್ಬರಿಗೂ ಏನು ಮಾಡಿದರು ಗೊತ್ತಾ?

  ಪೊಲೀಸ್​ ಠಾಣೆಗೆ ಹೋಗೋಣ ಬಾ ಅಂತ ಯುವತಿ ರಾದ್ದಾಂತ

ಲಕ್ನೋ: ಜಸ್ಟ್ ತನ್ನ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಯುವತಿಯೊಬ್ಬರು ನಡು ರಸ್ತೆಯಲ್ಲೇ ವ್ಯಕ್ತಿಯ ಎದೆ ಮೇಲಿನ ಅಂಗಿ ಹಿಡಿದು ಪೊಲೀಸ್ ಠಾಣೆಗೆ ಬಾ ಅಂತ ಹಿಡಿದು ಎಳೆದಾಡಿ ರಾದ್ದಾಂತ ಮಾಡಿದ್ದಾಳೆ. ಈ ಘಟನೆಯು ಉತ್ತರ ಪ್ರದೇಶದ ಲಕ್ನೋ ನಗರದ ಪಾಲಿಕಾ ಬಜಾರ್‌ನಲ್ಲಿ ನಡೆದಿದೆ.

ಪಾಲಿಕಾ ಬಜಾರ್‌ನಲ್ಲಿ ಹೋಗುವಾಗ ಯುವತಿಯ ಕಾರಿಗೆ ಬೈಕ್​ ಚಿಕ್ಕದಾಗಿ ಡಿಕ್ಕಿಯಾಗಿದೆ. ಕಾರಿಗೂ, ಮನುಷ್ಯರಿಗೂ ಏನು ಆಗಿಲ್ಲ. ಆದರೆ ಇಷ್ಟಕ್ಕೆ ಯುವತಿ ಕಾರು ನಿಲ್ಲಿಸಿ ಬೈಕ್ ಸವಾರನ ಮೇಲೆ ಕೆಂಡಾಮಂಡಲವಾಗಿದ್ದಾಳೆ. ನಡು ರಸ್ತೆಯಲ್ಲೇ ವ್ಯಕ್ತಿಗೆ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಕೈಯಲ್ಲಿ ಲಾಠಿ ಹಿಡಿದು ಹೊಡೆಯಲು ಹೋಗಿದ್ದಾಳೆ. ಬಳಿಕ ವ್ಯಕ್ತಿಯ ಎದೆ ಮೇಲಿನ ಶರ್ಟ್ ಹಿಡಿದು ಬಾ ಪೊಲೀಸ್ ಠಾಣೆಗೆ ಹೋಗೋಣ ಎಂದು ಅವಾಜ್​ ಮೇಲೆ ಅವಾಜ್ ಹಾಕಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 2013ರಲ್ಲಿ ಪಾಕ್​ ಜೈಲಿನಲ್ಲಿ ಭಾರತದ ರೈತನ ಕೊಲೆ; ಹತ್ಯೆಗೈದಿದ್ದ ಭೂಗತ ಪಾತಕಿ ಇಂದು ಅದೇ ಜೈಲಿನಲ್ಲಿ ಫಿನಿಶ್..!

ಇದನ್ನೂ ಓದಿ: ನಾವು ದಾಳಿ ಮಾಡಿದ್ರೆ ಸುಮ್ಮನಿರಬೇಕು, ಪ್ರತೀಕಾರಕ್ಕೆ ಬರಬಾರ್ದು -ಇಸ್ರೇಲ್​ಗೆ ವಾರ್ನ್ ಮಾಡಿದ ಇರಾನ್​

ಸುತ್ತ ನಿಂತಿದ್ದ ಜನರು ಜಗಳ ಬೇಡ, ಚಿಕ್ಕದಾಗಿ ಡಿಕ್ಕಿಯಾಗಿದೆ ಬಿಡು ಎಂದು ಹೇಳಿದ್ರೂ, ಕಾರಿಗೆ ಏನಾದ್ರು ಆದರೆ ನೀನು ಮಾಡಿಸಿಕೊಡ್ತಿಯಾ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಾಳೆ. ವ್ಯಕ್ತಿ ಬೇಡ ಎಂದರೂ ಯುವತಿ ನಿಂದಿಸುತ್ತಲೇ ಇದ್ದಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗಳವನ್ನು ಶಾಂತ ಮಾಡಿ, ಯಾವುದೇ ಕಾನೂನು ಕ್ರಮಕೈಗೊಳ್ಳದೇ ಇಬ್ಬರ ನಡುವೆ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್​ ಕಾರಿಗೆ ಬೈಕ್​ ಡಿಕ್ಕಿ, ವ್ಯಕ್ತಿಯ ಎದೆ ಮೇಲಿನ ಶರ್ಟ್​ ಹಿಡಿದ ಯುವತಿ.. ಮುಂದೇನಾಯ್ತು?

https://newsfirstlive.com/wp-content/uploads/2024/04/UP_GIRL-1.jpg

Load More