newsfirstkannada.com

ಪೋಷಕರೇ ಎಚ್ಚರ! ಚಾಕೊಲೇಟ್ ತಿಂದು ರಕ್ತ ವಾಂತಿ ಮಾಡಿದ ಒಂದೂವರೆ ವರ್ಷದ ಮಗು; ಆಗಿದ್ದೇನು?

Share :

Published April 21, 2024 at 8:06am

Update April 22, 2024 at 9:43am

    ಅಂಗಡಿಯಲ್ಲಿನ ವಸ್ತುಗಳನ್ನು ವಶಕ್ಕೆ ಪಡೆದಿರುವ ಆರೋಗ್ಯ ಇಲಾಖೆ

    ಕೆಲ ದಿನಗಳ ಹಿಂದಷ್ಟೇ ಕೇಕ್ ತಿಂದು ಸಾವನ್ನಪ್ಪಿದ್ದ 10 ವರ್ಷದ ಬಾಲಕಿ

    ಶಾಪ್​ ಅನ್ನು ಸೀಜ್ ಮಾಡುವಂತೆ ಇಲಾಖೆಗೆ ಒತ್ತಾಯಿಸಿದ ಪೋಷಕರು

ಕೆಲವು ದಿನಗಳ ಹಿಂದಷ್ಟೇ ಪಂಜಾಬ್‌ನ ಲೂಧಿಯಾನದಲ್ಲಿ ಕೇಕ್ ತಿಂದು 10 ವರ್ಷದ ಬಾಲಕಿ ಸಾವನ್ನಪ್ಪಿತ್ತು. ಸದ್ಯ ಇದರ ಬೆನ್ನಲ್ಲೇ ಮತ್ತೊಂದು ಅತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಅವಧಿ ಮುಗಿದಿದ್ದ ಚಾಕೊಲೇಟ್ ತಿಂದ ಒಂದೂವರೆ ವರ್ಷದ ಮಗು ರಕ್ತ ವಾಂತಿ ಮಾಡಿಕೊಂಡಿರುವುದು ಭಾರೀ ಆತಂಕ ಉಂಟುಮಾಡಿದೆ ಎಂದು ಹೇಳಲಾಗಿದೆ.

ಒಂದೂವರೆ ವರ್ಷದ ಮಗು ಪಂಜಾಬ್​ನ ಲುಧಿಯಾನ ಮೂಲದ್ದು ಆಗಿದ್ದು ಪೋಷಕರೊಂದಿಗೆ ಪಟಿಯಾಲ ನಗರಕ್ಕೆ ಬಂದಿತ್ತು. ಈ ವೇಳೆ ಅಂಗಡಿಯೊಂದರಲ್ಲಿ ಚಾಕೊಲೇಟ್ ಖರೀದಿಸಿ ಮಗುವಿಗೆ ಕೊಡಲಾಗಿತ್ತು. ಇದನ್ನು ತಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿದ್ದು ಬಾಯಿಯಿಂದ ರಕ್ತವನ್ನು ವಾಂತಿ ಮಾಡಿಕೊಂಡಿದೆ. ಇನ್ನೊಂದು ಮಗು ಕೂಡ ಅನಾರೋಗ್ಯಕ್ಕೆ ತುತ್ತಾಗಿದೆ. ಸದ್ಯ ಎರಡು ಮಕ್ಕಳನ್ನ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವಧಿ ಮೀರಿದ ಚಾಕೊಲೇಟ್ ತಿಂದಿದ್ದರಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪೋಷಕರು ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳು ಅಂಗಡಿಯಲ್ಲಿನ ಅವಧಿ ಮೀರಿದ ಚಾಕೊಲೇಟ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅಂಗಡಿಯಲ್ಲಿದ್ದ ಇನ್ನು ಹಲವಾರು ವಸ್ತುಗಳ ಅವಧಿ ಮೀರಿದ್ದರಿಂದ ಅವುಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಪೋಷಕರು ಅಂಗಡಿಯನ್ನು ಸೀಜ್ ಮಾಡಿ ಎಂದು ಆಗ್ರಹಿಸಿದ್ದಾರೆ. ಅಂಗಡಿಯಲ್ಲಿ ಹಳೆಯ ಸ್ಟಾಕ್ ಅನ್ನು ಗಮನಿಸಲಾಗಿದೆ. ಶೇಕಡಾ 90 ರಷ್ಟು ವಸ್ತುಗಳು ಹಳೆಯದಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ವಿಕಾಸ್ ಜಿಂದಾಲ್ ತಿಳಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ! ಚಾಕೊಲೇಟ್ ತಿಂದು ರಕ್ತ ವಾಂತಿ ಮಾಡಿದ ಒಂದೂವರೆ ವರ್ಷದ ಮಗು; ಆಗಿದ್ದೇನು?

https://newsfirstlive.com/wp-content/uploads/2024/04/PANJAB_Chocolate.jpg

Load More