/newsfirstlive-kannada/media/post_attachments/wp-content/uploads/2024/07/aprana.jpg)
ಅಪರ್ಣಾ ಅಚ್ಚ, ಸ್ವಚ್ಛ, ಸುಮಧುರ ಕನ್ನಡದ ಮೂಲಕ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದ ಸ್ವರ ಶಾರದೆ. ಆದರೆ ನಟಿ, ನಿರೂಪಕಿ ಅಪರ್ಣಾ ಅಕಾಲಿಕ ಅಗಲಿಕೆ ಅವರ ಧ್ವನಿಯನ್ನ ಪ್ರೀತಿಸ್ತಿದ್ದ ಎಷ್ಟೋ ಮನಸ್ಸುಗಳಲ್ಲಿ ನೋವು ತುಂಬಿಕೊಳ್ಳುವಂತೆ ಮಾಡಿದೆ.
/newsfirstlive-kannada/media/post_attachments/wp-content/uploads/2024/07/aparana14.jpg)
ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
ಎಂದೂ ತುಂಬಲಾಗದ ಒಂದು ಖಾಲಿ ಜಾಗವನ್ನ ಸೃಷ್ಟಿ ಮಾಡಿದೆ. ಮಾಧುರ್ಯ ಬರಿತ ಕನ್ನಡದ ಮೂಲಕವೇ ಕನ್ನಡಿಗರ ಹೃದಯವನ್ನ 3 ದಶಕಕ್ಕೂ ಹೆಚ್ಚು ಕಾಲ ಆಳಿದ್ದ ಅಪರ್ಣಾ ಅವರನ್ನು ಕಿತ್ತುಕೊಂಡಿದ್ದು ಶ್ವಾಸಕೋಶದ ಕ್ಯಾನ್ಸರ್. ಎರಡು ವರ್ಷಗಳ ಹಿಂದೆಯೇ ಅವರ ದೇಹದಲ್ಲಿ ಈ ಮಾರಿ ಪತ್ತೆಯಾಗಿತ್ತು. ಅದರ ವಿರುದ್ಧ ಹೋರಾಟವನ್ನೂ ಮಾಡಿದ್ರು ಅಪರ್ಣಾ. ಆದ್ರೆ ಗೊತ್ತಾಗಿದ್ದೇ 4ನೇ ಸ್ಟೇಜ್‌ನಲ್ಲಿ. ಆದ್ರೂ 2 ವರ್ಷ ಅದರ ವಿರುದ್ಧ ಸೆಣಸಾಡುವಲ್ಲಿ ಸಕ್ಸಸ್ ಆಗಿದ್ರು. ಕೊನೆಗೆ ಸೋತು ಉಸಿರು ಚೆಲ್ಲಿದ್ರು. ಆದ್ರೆ ಅಪರ್ಣಾರ ಸಾವು ಶ್ವಾಸಕೋಶ ಕ್ಯಾನ್ಸರ್ ಬಗ್ಗೆ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
/newsfirstlive-kannada/media/post_attachments/wp-content/uploads/2024/07/Lung-Cancer-Make-UP-1.jpg)
ಎಲ್ಲಾ ಕ್ಯಾನ್ಸರ್‌ಗಳಿಗಿಂತಲೂ ಲಂಗ್ ಕ್ಯಾನ್ಸರ್ ತುಂಬಾ ಡೆಡ್ಲಿನಾ? ಅಪರ್ಣಾ ಅವರ ಸಾವಿನ ಬಳಿಕವಂತೂ ತುಂಬಾ ಜನ ಈ ಬಗ್ಗೆ ಸರ್ಚ್ ಮಾಡಿ ನೋಡ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ಇದು ಪ್ರಾಣವನ್ನೇ ತೆಗೆಯುವಷ್ಟು ಅಪಾಯಕಾರೀನಾ? ಲಂಗ್ ಕ್ಯಾನ್ಸರ್ ಕಾಣಿಸಿಕೊಳ್ಳೋಕೆ ಕಾರಣ ಏನು? ಯಾವುದರಿಂದ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ? ಯಾವ್ಯಾವ ಕಾರಣದಿಂದ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಎಂಬುವುದರ ಬಗ್ಗೆ ಸೀನಿಯರ್ ಆಂಕಾಲಜಿಸ್ಟ್ ಡಾ.ಸಂಪತ್ ಕುಮಾರ್ ನ್ಯೂಸ್‌ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/cancer.jpg)
ಸಾಕಷ್ಟು ವಿಧಗಳಲ್ಲಿ ಮನುಷ್ಯರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಾಯು ಮಾಲಿನ್ಯ, ಧೂಮಪಾನ, ಆಹಾರ ಸೇವನೆಯಲ್ಲಿ ಬದಲಾವಣೆ, ಅವರಿಗಾಗಿ ಅವರು ಸಮಯ ಕೊಡದಿರುವುದು, ಒತ್ತಡ ಇನ್ನಿತರ ಅಂಶಗಳಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ. ದಿನಕ್ಕೆ 10ಕ್ಕೂ ಹೆಚ್ಚು ಜನರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಐದರಿಂದ ಆರು ಮಹಿಳೆಯರಲ್ಲಿ ಲಂಗ್​​ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಏಕೆಂದರೆ ಹೆಣ್ಣು ಮಕ್ಕಳ ಮನೆಯಲ್ಲಿ ಪತಿ, ತಂದೆ, ಮಗ ಹೀಗೆ ಯಾರಾದರೂ ಧೂಮಪಾನ ಮಾಡಿದ್ರೆ, ಧೂಮಪಾನ ಮಾಡುವವರ ಪಕ್ಕದಲ್ಲಿ ನಿಂತುಕೊಂಡರೇ ಅದರಿಂದ ಕೂಡ ಈ ಎಫೆಕ್ಟ್​ ಉಂಟಾಗುತ್ತದೆ. ಮುಖ್ಯವಾಗಿ ಒತ್ತಡ, ಡಯಟ್, ಮೇಕಪ್​ ವಿಧಾನ, ಫ್ಯಾಮಿಲಿಯಿಂದ ಕಿರಿಕಿರಿ ಆದಾಗಲೂ ಬಹುತೇಕವಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us