17 ಲಕ್ಷ ಸಾವುಗಳಿಗೆ ಶ್ವಾಸಕೋಶ ಕ್ಯಾನ್ಸರ್ ಕಾರಣವಾಗಿವೆ
ಭಾರತದಲ್ಲಿ ವರ್ಷಕ್ಕೆ 72,510 ಪ್ರಕರಣಗಳು ಬೆಳಕಿಗೆ ಬಂದಿವೆ
ಧೂಮಪಾನ ಮಾಡದಿದ್ರೂ ಶ್ವಾಸಕೋಶದ ಕ್ಯಾನ್ಸರ್ ಹೇಗೆ ಬರುತ್ತೆ?
ಕ್ಯಾನ್ಯರ್ ಮಾರಕ ಕಾಯಿಲೆಗಳಲ್ಲಿ ಒಂದು. ಅದೆಷ್ಟೋ ಜನರು ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಪ್ರಾರಂಭದ ಹಂತದಲ್ಲೇ ಕಾಯಿಲೆ ಬಗ್ಗೆ ತಿಳಿದು ಚಿಕಿತ್ಸೆ ಪಡೆದು ಹುಷಾರಾದವರು ಇದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಕ್ಕರೆ ಎಂಥವರು ಕೂಡ ಈ ಕಾಯಿಲೆಯಿಂದ ಹೊರಬರಬಹುದಾಗಿದೆ.
ಕ್ಯಾನ್ಸರ್ಗಳಲ್ಲಿ ನಾನಾ ವಿಧಗಳಿವೆ. ಅದರಲ್ಲೊಂದು ಶ್ವಾಸಕೋಶದ ಕ್ಯಾನ್ಸರ್. ಅಚ್ಚರಿ ಸಂಗತಿ ಎಂದರೆ ಧೂಮಪಾನ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎಂಬುದು ಬಹುತೇಕರಿಗೆ ತಿಳಿದಿದೆ. ಆದರೀಗ ವೈದ್ಯಲೋಕ ಶ್ವಾಸಕೋಶದ ಕ್ಯಾನ್ಸರ್ನಲ್ಲಿ ತುತ್ತಾತ ಶೇ.50 ರಷ್ಟು ಮಂದಿ ಧೂಮಪಾನ ಮಾಡದವರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತ.. ಅಕ್ಕ ಅಪರ್ಣಾರನ್ನು ಕಳೆದುಕೊಂಡು ಶ್ವೇತಾ ಚೆಂಗಪ್ಪ ಭಾವುಕ
ಮುಂಬೈ ಟಾಟಾ ಮೆಮೋರಿಯಲ್ ಸೆಂಟರ್ನ ವೈದ್ಯರ ತಂಡ ಪ್ರಕಟಿಸಿದಂತೆ, ಲಂಗ್ ಕ್ಯಾನ್ಸರ್ 3ನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿ ಪತ್ತೆಯಾಗಿದೆ. 2020ರಲ್ಲಿ ಸುಮಾರು 18.5 ಲಕ್ಷ ಹೊಸ ಪ್ರಕರಣಗಳು (7.8%) ಪತ್ತೆಯಾಗಿವೆ. ಇದರಿಂದಾಗಿ 16.6 ಲಕ್ಷ ಅಥವಾ 10.9% ಸಾವುಗಳಿಗೆ ಕಾರಣವಾಗುತ್ತದೆ. ಇನ್ನು ಜಾಗತಿಕ ಅಂಕಿ ಅಂಶಗಳಿಗೆ ಅನುಗುಣವಾಗಿ 22 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ (11.6%). 17 ಲಕ್ಷ ಸಾವುಗಳಿಗೆ ಶ್ವಾಸಕೋಶ ಕ್ಯಾನ್ಸರ್ ಕಾರಣವಾಗಿವೆ. ಭಾರತದಲ್ಲಿ ವರ್ಷಕ್ಕೆ 72,510 ಪ್ರಕರಣಗಳು (5.8%) ಮತ್ತು 66,279 ಸಾವುಗಳು (7.8%) ಸಂಭವಿಸಿವೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್ ಮತ್ತು ಗಣಪತಿ ಡಿಲಕ್ಸ್ ಬಸ್.. 65 ಮಂದಿ ನಾಪತ್ತೆ!
ಟಾಟಾ ಮೆಡಿಕಲ್ ಸೆಂಟರ್ನ ವೈದ್ಯಕೀಯ ಆಂಕೊಲಾಜಿ ವಿಭಾಗದ ಡಾ ಕುಮಾರ್ ಪ್ರಭಾಶ್ ಹೇಳಿದಂತೆ ‘‘ಶ್ವಾಸಕೋಶದ ಕ್ಯಾನ್ಸರ್ಗೆ ಒಳಗಾದ ಶೇ.50 ರಷ್ಟು ಮಂದಿ ಧೂಮಪಾನಿಗಳಲ್ಲ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?
ವಾಯುಮಾಲಿನ್ಯವು ಶ್ವಾಸಕೋಶ ಕ್ಯಾನ್ಸರ್ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಧೂಮಪಾನ ಮಾಡದಿರುವವರು ಇದಕ್ಕೆ ತುತ್ತಾಗುತ್ತಾರೆ. ಕಲ್ನಾರಿನ, ಕ್ರೋಮಿಯಂ, ಕ್ಯಾಡಿಯಂ, ಆರ್ಸೆನಿಕ್ ಮತ್ತು ಕಲ್ಲಿದ್ದಲು, ಮನೆಯ ಹೊಗೆ ಇವೆಲ್ಲವು ಶ್ವಾಸಕೋಶ ಕ್ಯಾನರ್ಗೆ ಕಾರಣವಾಗಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಇದರ ಪ್ರಮಾಣ ಏರಿಕೆಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ