/newsfirstlive-kannada/media/post_attachments/wp-content/uploads/2025/05/lugi.jpg)
ಪ್ಲೇ-ಆಫ್ನಲ್ಲಿ ಗೆದ್ದು ಫೈನಲ್ಗೆ ಹೋಗಲು ಪ್ಲಾನ್ ಮಾಡ್ತಿರುವ ಆರ್ಸಿಬಿಗೆ ಆಘಾತ ಆಗಿದೆ. ಜೊಕೆಬ್ ಬೆಥಲ್ ಮತ್ತು ಲುಂಗಿ ಎನ್ಗಿಡಿ ಆರ್ಸಿಬಿ ಕ್ಯಾಂಪ್ ತೊರೆದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆಡಿದ್ದ ಲುಂಗಿ ಎನ್ಗಿಡಿ ಅವರು, ಆರ್ಸಿಬಿ ಕ್ಯಾಂಪ್ ತೊರೆದಿದ್ದಾರೆ. ದೇಶಕ್ಕಾಗಿ ಆಡುವ ಉದ್ದೇಶದಿಂದ ಆರ್ಸಿಬಿ ಕ್ಯಾಂಪ್ ತೊರೆದಿರುವ ಲುಂಗಿ, ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಆಘಾತ.. ಫೈನಲ್ಗೆ ಹೋಗುವ ಆ ಎರಡು ದಾರಿಗಳನ್ನು ಕಳೆದುಕೊಳ್ತಾ ಆರ್ಸಿಬಿ..?
ಇಲ್ಲಿಂದ ಹೊರಡಲು ತುಂಬಾ ಕಷ್ಟ ಆಗುತ್ತಿದೆ. ಫ್ರಾಂಚೈಸಿ ಮತ್ತು ಆರ್ಸಿಬಿ ಅಭಿಮಾನಿಗಳು ತೋರಿಸಿದ ಪ್ರೀತಿ ಮತ್ತು ಬೆಂಬಲವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗ್ತಿಲ್ಲ. ಆರ್ಸಿಬಿ ಕುಟುಂಬಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಈ ಸ್ಟಾರ್ ಕ್ರಿಕೆಟ್ ತವರಿನತ್ತ ಮುಖ ಮಾಡಿದ್ದಾರೆ. ಮೇ 29 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೇವೆ ಸಲ್ಲಿಸುವ ಹಿನ್ನೆಲೆಯಲ್ಲಿ ಲುಂಗಿ ಅವರು ಐಪಿಎಲ್ ತೊರೆದಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ