ಐಷಾರಾಮಿ ಹೋಟೆಲ್ ಮೇಲೆ ದಾಳಿ, ನಿರ್ಮಾಪಕರು ಅರೆಸ್ಟ್
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದವರ ಕಂಡು ಶಾಕ್
ಸಿನಿಮಾ, ಧಾರವಾಹಿ, ವೆಬ್ ಸಿರೀಸ್ ನಟಿಯರ ಬಳಕೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಾಯಂದರ್ನಲ್ಲಿ ನಡೆಯುತ್ತಿದ್ದ ಐಷಾರಾಮಿ ಸೆಕ್ಸ್ ರಾಕೆಟ್ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಜೊತೆಗೆ ಹೆಣ್ಮಕ್ಕಳನ್ನು ಮಾಂಸ ದಂಧೆಯ ಜಾಲಕ್ಕೆ ಬೀಳಿಸುತ್ತಿದ್ದ ಇಬ್ಬರು ನಿರ್ಮಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
ಸೆಕ್ಸ್ ದಂಧೆಯಲ್ಲಿ ಹೈ-ಪ್ರೊಫೈಲ್..!
ಅಂದ್ಹಾಗೆ ಇದು ಸಣ್ಣ ಪುಟ್ಟ ಸೆಕ್ಸ್ ರಾಕೆಟ್ ದಂಧೆಯಲ್ಲ. ಟಿವಿ ನಟಿಯರು, ಬಾಲಿವುಡ್ ಸಿನಿಮಾ ನಟಿಯರು, ವೆಬ್ ಸರಣಿಯ ಕಲಾವಿದರು ವೇಶ್ಯಾವಾಟಿಕೆಯಲ್ಲಿ ತೊಡಗಿರೋದು ಬೆಳಕಿಗೆ ಬಂದಿದೆ. ಪೊಲೀಸ್ ಇನ್ಸ್ಪೆಕ್ಟರ್ ಸಮೀರಾ ಅಹಿರಾ ನೀಡಿರುವ ಮಾಹಿತಿ ಪ್ರಕಾರ, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಐಷಾರಾಮಿ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರೋದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಅರೆಸ್ಟ್..!
ಪ್ರಕರಣ ಸಂಬಂಧ ಐಷಾರಾಮಿ ಹೋಟೆಲ್ನಲ್ಲಿ ಇಬ್ಬರು ನಿರ್ಮಾಪಕರು ಸಿಕ್ಕಿಬಿದ್ದಿದ್ದಾರೆ. ರತ್ನಮಯ್ಯ ನರಂಕತೇಲು ಹಾಗೂ ಚಂದ್ರಹಾಸ್ ಅಲಿಯಾಸ್ ಮೈಕೆಲ್ ಡೇವಿಡ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಇವರ ವಿರುದ್ಧ ಐಪಿಸಿ ಸೆಕ್ಷನ್ 370 (2) (3) ಮತ್ತು ಅನೈತಿಕ ಕಳ್ಳಸಾಗಣೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಹೇಗೆ ಬಲೆಗೆ ಬೀಳಿಸುತ್ತಿದ್ದರು..?
ಹೈ-ಪ್ರೊಫೈಲ್ ಕೇಸ್ ಆಗಿರೋ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆಯಲ್ಲಿ ದೊಡ್ಡ ದೊಡ್ಡ ಕುಳಗಳು ಭಾಗಿಯಾಗಿರುವ ಶಂಕೆ ಇದೆ. ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ಗಳಲ್ಲಿ ಕಲಾವಿದರಾಗಿರುವ ಹೆಣ್ಮಕ್ಕಳಿಗೆ ಹಣದ ಆಸೆ ಹುಟ್ಟಿಸುತ್ತಿದ್ದರು. ಸಿನಿಮಾ, ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸುತ್ತೇವೆ ಎಂದೇಳಿ ಮೊದಲು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು. ಲಕ್ಷ ಲಕ್ಷ ಹಣ ನೀಡುವ ಆಸೆ ಹುಟ್ಟಿಸಿ ಕೊನೆಗೆ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ.
ಕೋವಿಡ್ -19 ಆರಂಭವಾದ ಬಳಿಕ ಇಂಥ ಪ್ರಕರಣಗಳು ಮುಂಬೈನಲ್ಲಿ ಹೆಚ್ಚುತ್ತಿವೆ. ಸಿನಿಮಾ ಜಗತ್ತು ಡಿಮ್ಯಾಂಡ್ ಕಳೆದುಕೊಂಡ ನಂತರ ಕೆಲವು ನಟಿಯರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ನವೆಂಬರ್ನಲ್ಲೂ ಕೂಡ ಮಹಾರಾಷ್ಟ್ರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಹೆಣ್ಮಕ್ಕಳನ್ನು ರಕ್ಷಣೆ ಮಾಡಿದ್ದರು. ಇದು ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ