/newsfirstlive-kannada/media/post_attachments/wp-content/uploads/2024/01/NEW-YEAR.jpg)
ಬೆಂಗಳೂರು: ನ್ಯೂಇಯರ್ ಸೆಲೆಬ್ರೇಷನ್‌ಗೆ ಎಲ್ಲೆಲ್ಲಿ ಹೋಗಬೇಕು ಅಂತ ನೀವೆಲ್ಲಾ ಪ್ಲಾನ್ ಮಾಡಿದ್ದೀರಾ. ನೈಟ್ ಹೇಗೂ ಎಂ.ಜಿ ರೋಡ್.. ಬ್ರಿಗೇಡ್ ರೋಡ್‌ನಲ್ಲಿ ಸೆಲೆಬ್ರೇಷನ್ ಜೋರಾಗಿ ಇದ್ದೇ ಇರುತ್ತೆ ಅಂತಾ ಸಾಕಷ್ಟು ಜನ ಎಲ್ಲೆಲ್ಲಿಂದಾಲೋ ಬರ್ತಾರೆ. ಈ ಸಲ ರೋಡ್‌ಗೆ ಇಳಿದ್ರೆ ನೀವು ಎಂಜಾಯ್ ಏನೋ ಮಾಡಬಹುದು. ಆದ್ರೆ ಮನೆಗೆ ವಾಪಸ್ ಹೋಗೋದು ಕಷ್ಟ.
ಡಿಸೆಂಬರ್ 31 ನೈಟ್ ಅದ್ಯಾವಾಗ ಆಗುತ್ತೆ ಶಿವ ಅಂತಾ ಕಾಯೋರೆ ಜಾಸ್ತಿ ಆಗಿಬಿಟ್ಟಿದ್ದಾರೆ. ರಾಜಧಾನಿ ಗಲ್ಲಿ ಗಲ್ಲಿಗಳಲ್ಲೂ.. ಎಂ.ಜಿ ರೋಡ್, ಬ್ರಿಗೇಡ್ ರೋಡ್‌ಗಳಲ್ಲಿ ಕಿಕ್ಕಿರಿದು ಜನರು ಫುಲ್ ಸೇರಿರ್ತಾರೆ. ಆಲ್ ರೆಡಿ ನಮ್ಮ ಮೆಟ್ರೋ ಮಧ್ಯರಾತ್ರಿ 2 ಗಂಟೆವರೆಗೆ ಮೆಟ್ರೋ ಸೇವೆ ಇರುತ್ತೆ ಅಂತಾ ಅನೌನ್ಸ್ ಮಾಡ್ಬಿಟ್ಟಿದೆ. ಆದ್ರೆ.. ಬಿಎಂಟಿಸಿ ಬಸ್‌ಗಳ ಕಥೆ ಏನಪ್ಪ ಅಂತಿದ್ದವ್ರಿಗೆ ಇದು ಶಾಕಿಂಗ್ ವಿಷ್ಯ. ನೀವು ಸೆಲೆಬ್ರೇಷನ್ ಮುಗ್ಸಿ ಮನೆಗೆ ಹೋಗೋದಕ್ಕೆ ಬಸ್‌ಗಳು ಸಿಗೋದು ಡೌಟಿದೆ. ಅದ್ಯಾಕಂದ್ರೆ.. ಅವತ್ತು ಸಾರಿಗೆ ನೌಕರರು ಮುಷ್ಕರ ಮಾಡೋಕೆ ಪ್ಲಾನ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2023/07/BMTC-Bus_Stop.jpg)
ನ್ಯೂಇಯರ್ ಸಂಭ್ರಮಾಚರಣೆಗೆ ಮುಷ್ಕರದ ಕರಿನೆರಳು
ಡಿ. 31ರಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನ ಈಡೇರಿಸಲು ಒತ್ತಾಯಿಸಿ ಡಿಸೆಂಬರ್ 31ರಿಂದ ರಾಜ್ಯದ ನಾಲ್ಕು ನಿಗಮಗಳ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಈಗಾಗ್ಲೇ ಸತತ 6ನೇ ಬಾರಿಯೂ ಜಂಟಿ ಕ್ರಿಯಾಸಮಿತಿ ಮನವೊಲಿಸೋದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಫಲ ಆಗಿದ್ದಾರೆ. ಕೆಎಸ್‌ಆರ್‌ಟಿಸಿಯ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಆದ್ರೆ ಸಮಿತಿಯನ್ನ ಮನವೊಲಿಸಲು ಸಚಿವರು ವಿಫಲರಾಗಿದ್ದಾರೆ.
/newsfirstlive-kannada/media/post_attachments/wp-content/uploads/2023/06/Ramlinga-Reddy-2.jpg)
ಬೇಡಿಕೆಗಳು ಏನೇನು?
2020ರ ಜನವರಿ 1ರಿಂದ 38 ತಿಂಗಳ ವೇತನ ಹಿಂಬಾಕಿಯನ್ನ ಪಾವತಿಸಬೇಕು. 2024ರಿಂದ ಹೊಸ ವೇತನ ಪರಿಷ್ಕರಣ ಹಾಗೂ ಇತರೆ ಬೇಡಿಕೆಗಳನ್ನ ಇತ್ಯರ್ಥ ಪಡಿಸಬೇಕು. ನಿವೃತ್ತರಾದ ನೌಕರರಿಗೆ 2024ರ ಜೂನ್ 27ರ ಸುತ್ತೋಲೆ ಹಣವನ್ನ ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ತುರ್ತಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನ ನಡೆಸಬೇಕು. KSRTCಯಲ್ಲಿ ಜಾರಿಗೆ ತರುತ್ತಿರೋ ನಗದು ರಹಿತ ಚಿಕಿತ್ಸೆ ಯೋಜನೆಯನ್ನ ನಾಲ್ಕು ನಿಗಮದಲ್ಲಿ ಜಾರಿಗೆ ತರಬೇಕು. ವಿದ್ಯುತ್ ಚಾಲಿತ ಬಸ್‌ಗಳ ನಿರ್ವಹಣೆಯನ್ನ ನಮಗೆ ನೀಡಬೇಕು, ಅದನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನ ಕೈಬಿಡಬೇಕು. ಅಷ್ಟೇ ಅಲ್ಲದೇ ಹೊರ ಗುತ್ತಿಗೆ ಆಧಾರದ ಮೇಲಿನ ನೇಮಕಾತಿಯನ್ನ ಮಾಡಬಾರದು.
ಇದನ್ನೂ ಓದಿ: ಅಯ್ಯೋ ವಿಧಿಯೇ.. ನೆಲಮಂಗಲ ಅಪಘಾತದ ಆಘಾತ; ಚಂದ್ರಮ್ ತಂದೆ ಕೂಡ ದುರಂತ ಅಂತ್ಯ!
ಸಾರಿಗೆ ನೌಕರರ ಜೊತೆಗಿನ ಸಂಧಾನ ವಿಫಲ ಆಗಿರೋದ್ರಿಂದ, ಇಂದು ಸಾರಿಗೆ ಸಚಿವರು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಲಿದ್ದಾರೆ. ಪಿಎಫ್ ಇತರೆ ಬಾಕಿ ಪಾವತಿಗೆ ಎರಡು ಸಾವಿರ ಕೋಟಿ ಬಿಡುಗಡೆಗೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಭೇಟಿ ಬಳಿಕ ಮತ್ತೊಮ್ಮೆ ಜಂಟಿ ಕ್ರಿಯಾಸಮಿತಿ ಜೊತೆ ಸಚಿವರು ಸಂಧಾನ ನಡೆಸಲಿದ್ದಾರೆ. ಒಂದು ವೇಳೆ ಸಾರಿಗೆ ನೌಕರರ ಬೇಡಿಕೆಗಳಿಗೆ ಸರ್ಕಾರ ಒಪ್ಪಿದ್ರೆ ನ್ಯೂಇಯರ್‌ಗೆ ಬಸ್ ಸಿಗುತ್ತೆ. ಇಲ್ಲಂದ್ರೆ ನಿಮಗೆ ಸಾರಿಗೆ ಬಸ್‌ಗಳು ಸಿಗೋದು ಡೌಟು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us