ಜನಪ್ರಿಯ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ಬಂದಿದ್ದು ಹೇಗೆ? SM ಕೃಷ್ಣ ಕುರಿತ ಸ್ವಾರಸ್ಯಕರ ಕತೆ

author-image
Ganesh
Updated On
ಮಹಾತ್ಮ ಗಾಂಧೀಜಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದ SM ಕೃಷ್ಣ.. ಇವರ ಕುಟುಂಬ, ರಾಜಕೀಯ ಜೀವನ ಹೇಗಿತ್ತು?
Advertisment
  • ಸ್ತ್ರೀ ಶಕ್ತಿ ಸಂಘ ಹುಟ್ಟಿಕೊಂಡ ಬಗೆ ಹೇಳಿದ ಮೋಟಮ್ಮ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಶೇಷ ಸ್ಥಾನ
  • ಹೆಣ್ಮಕ್ಕಳನ್ನು ತುಂಬಾನೇ ಗೌರವದಿಂದ ಕಾಣುತ್ತಿದ್ದ SMK

ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ವಿಧಿವಶರಾಗಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣ ಅವರು ಈ ನಾಡಿಗೆ ನೀಡಿದ ಕೊಡುಗೆಗಳನ್ನು ಜನರು ಸ್ಮರಿಸಿಕೊಳ್ತಿದ್ದಾರೆ. ಕೃಷ್ಣ ಅವರ ಜನಪ್ರಿಯ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಸಂಘ ಕೂಡ ಒಂದು.

ಎಸ್​ಎಂ ಕಷ್ಣ ಅಗಲಿಗೆಯ ನೋವಿನಲ್ಲಿರುವ ಮಾಜಿ ಸಚಿವೆ ಮೋಟಮ್ಮ, ನ್ಯೂಸ್​ಫಸ್ಟ್​ ಜೊತೆ ಮಾತನಾಡಿದರು. ಈ ವೇಳೆ ಅವರು ಹೇಗೆ ಸ್ತ್ರೀ ಶಕ್ತಿ ಯೋಜನೆಯನ್ನು ಜಾರಿಗೆ ತಂದರು ಅನ್ನೋದನ್ನು ವಿವರಿಸಿದ್ದಾರೆ. ಮೋಟಮ್ಮ ಅವರೇ ಹೇಳುವಂತೆ.. ಅವರಿಗೆ (ಎಸ್​ಎಂ ಕೃಷ್ಣ) ಹೆಣ್ಮಕ್ಕಳ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವ ಇತ್ತು. ಹೆಣ್ಮಕ್ಕಳನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ತಿದ್ದರು. ಅವರು ನನ್ನನ್ನು ಸಚಿವೆಯನ್ನಾಗಿ ಮಾಡುತ್ತಾರೆ ಅಂದು ಕೊಂಡಿರಲಿಲ್ಲ. ನನಗೆ ಅವರ ಮಂತ್ರಿ ಮಂಡಳಿದಲ್ಲಿ ಸ್ಥಾನ ನೀಡಿದ್ದೇ ಅಚ್ಚರಿ ತಂದಿತ್ತು.

ಇದನ್ನೂ ಓದಿ:ಡಾ.ರಾಜ್ ​ಕುಮಾರ ಕಿಡ್ನಾಪ್; ಎಸ್​.ಎಂ ಕೃಷ್ಣ ಅವರಿಗೆ ಹೆಚ್ಚು ಖೇದ ಉಂಟು ಮಾಡಿದ್ದ ಘಟನೆ

ನನ್ನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯನ್ನಾಗಿ ಮಾಡಿದ ಮೇಲೆ ನಾನು ಒಮ್ಮೆ ಅವರನ್ನು ಭೇಟಿಯಾದೆ. ಈ ವೇಳೆ ನಾನು ಅವರ ಜೊತೆ ಮಾತನಾಡುತ್ತ.. ಸರ್​​ ತುಂಬಾ ಹೆಣ್ಮಕ್ಕಳು ತಮ್ಮ ಹಲವು ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕುತ್ತಾರೆ ಎಂದಿದ್ದೆ. ಗಂಡ ಬಿಟ್ಟಿದ್ದಾನೆ, ಪತಿ ತೀರಿಹೋಗಿದ್ದಾನೆ, ಮಕ್ಕಳು ಸಾಕೋದು ಕಷ್ಟ ಎಂದು ಅಳುತ್ತಾರೆ. ಅವರಿಗೆ ನಾನು ಏನು ಮಾಡಬೇಕು? ಯಾವುದೇ ಯೋಜನೆಗಳು ಇಲ್ಲ ಸರ್​ ಎಂದು ಕೇಳಿಕೊಂಡಿದ್ದೆ.

ಅದಕ್ಕೆ ಅವರು ನನ್ನನ್ನು ರೇಗಿಸಿದ್ದರು. ಮೋಟಮ್ಮ ಅವರೇ ವಿಧಾನಸೌಧದ ಮೂರನೇ ಮಹಡಿಯಿಂದ ನೀರು ಇಳಿಯುತ್ತಿದೆಯಲ್ಲ. ಅದೇ ಕಣ್ಣೀರು ಅಲ್ವಾ ಎಂದು ರೇಗಿಸಿದ್ದರು. ಕೊನೆಗೆ ನಾನು ಇಲ್ಲ ಸರ್ ನಾನು ತುಂಬಾ ಸೀರಿಯಸ್ ಆಗಿ ಹೇಳ್ತಿದ್ದೇನೆ ಅಂದೆ. ಅದಕ್ಕೆ ಕೃಷ್ಣ ಹೇಳಿದ್ದರು, ಮೇಡಂ ಅವರೇ ನಿಮ್ಮ ನೋವು ನನಗೆ ಗೊತ್ತಾಗಿದೆ. ಅದಕ್ಕೆ ಯಾವುದಾದರೂ ಸ್ಕೀಮ್ ತರೋಣ ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ:ಹುಡುಗಿಯರೇ ಎಚ್ಚರ.. ಜೀನ್ಸ್‌ ಪ್ಯಾಂಟ್ ಖರೀದಿಸುವಾಗ ಈ 5 ವಿಚಾರ ನೆನಪಿರಬೇಕು

ಅದರಂತೆ ಸ್ತ್ರೀ ಶಕ್ತಿ ಯೋಜನೆಗೆ ಮುಂದಾದರು. ಬಾಂಗ್ಲಾದೇಶದಲ್ಲಿ ಈ ಸ್ತ್ರೀ ಶಕ್ತಿ ಯೋಜನೆ ಜಾರಿಯಲ್ಲಿ ಇತ್ತಂತೆ. ಇಲ್ಲಿಂದ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಅದರ ಬಗ್ಗೆ ಸ್ಟಡಿ ಮಾಡಿಸಿದರು. ನಂತರ ಕರ್ನಾಟಕದಲ್ಲಿ ಅದನ್ನು ಜಾರಿಗೆ ತಂದರು. ಅದಕ್ಕೆ ಸಹಾಯ ದನ ನೀಡಿದರು. ಅದೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಶೇಷ ಸ್ಥಾನ ಬಂದಿದ್ದೇ ಕೃಷ್ಣ ಅವರ ಕಾಲದಲ್ಲಿ ಎಂದು ಮೋಟಮ್ಮ ನೆನಪಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment