/newsfirstlive-kannada/media/post_attachments/wp-content/uploads/2024/09/JOBS_RAILWAYS.jpg)
ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈರುತ್ಯ ರೈಲ್ವೆ ಇಲಾಖೆ ಹೊಸದೊಂದು ಎಂ-ಯುಟಿಎಸ್ (M-UTS) ಅನ್ನು ಪರಿಚಯಿಸಿದೆ. ಇದರ ಮೂಲಕ ಪ್ರಯಾಣಿಕರು ನಿಂತಲ್ಲೇ ಟಿಕೆಟ್​ ಪಡೆಯಬಹುದಾಗಿದೆ.
ಸಿಲಿಕಾನ್ ಸಿಟಿಯ 3 ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇಲಾಖೆ ಚಾಲನೆ ನೀಡಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸರ್.ಎಂ ವಿಶ್ವೇಶರಯ್ಯ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕ ಎಂ-ಯುಟಿಎಸ್​ಗೆ ಚಾಲನೆ ನೀಡಲಾಯಿತು. ಹಬ್ಬ, ಸರ್ಕಾರಿ ರಜೆ, ಶನಿವಾರ, ಭಾನುವಾರದಂದು ಸೇರಿ ಕೆಲ ಬ್ಯುಸಿ ದಿನದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಲ್ದಾಣಗಳಲ್ಲಿ ಕಡಿಮೆ ಮಾಡಲು ಎಂ-ಯುಟಿಎಸ್ ಅನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ: ಗೋಧ್ರಾ ದುರಂತದ ಹಿಂದಿನ ಸತ್ಯ ಸಿನಿಮಾ ಮೂಲಕ ಬಹಿರಂಗ.. ಚರ್ಚೆಗೆ ಗ್ರಾಸವಾದ ಮೋದಿ ಕಾಮೆಂಟ್
/newsfirstlive-kannada/media/post_attachments/wp-content/uploads/2024/10/JOB_RAILWYA.jpg)
ಎಂ-ಯುಟಿಎಸ್ ಅನುಕೂಲಗಳೇನು..?
ರೈಲು ಪ್ರಯಾಣಿಕರು ನಿಂತಲ್ಲಿಯೇ ಟಿಕೆಟ್ ಪಡೆಯುವುದರಿಂದ ದಟ್ಟಣೆ ತಗ್ಗಲಿದೆ. ಹೆಚ್ಚು ಪ್ರಯಾಣಿಕರು ಟಿಕೆಟ್ ಪಡೆದುಕೊಂಡು ಪ್ರಯಾಣಿಸಬಹುದು. ಇಷ್ಟು ದಿನ ಕೆಲವರು ಕ್ಯೂನಲ್ಲಿ ನಿಂತು ಟಿಕೆಟ್ ಸಿಗದೇ ವಾಪಾಸ್ ಆಗುತ್ತಿದ್ದರು. ಇನ್ನು ಕೆಲವರು ಟಿಕೆಟ್ ಸಿಗದ ಕಾರಣ ಟಿಕೆಟ್ ರಹಿತ ಪ್ರಯಾಣಿಸಿ ಚೆಕ್ಕಿಂಗ್ ಆಫೀಸರ್ ಕೈನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಸಾಲಿನಲ್ಲಿ ನಿಂತು ಟಿಕೆಟ್ ತಗೊಂಡು ಹೋಗುವಷ್ಟರಲ್ಲಿ ರೈಲು ಹೋಗುತ್ತದೆ ಅನ್ನೋ ಆತಂಕವಿರಲ್ಲ. ಸದ್ಯ ಈ ಎಲ್ಲ ಸಮಸ್ಯೆಗಳಿಗೆ ಎಂ-ಯುಟಿಎಸ್ ಮುಕ್ತಿ ಕೊಡಲಿದೆ.
ಎಂ-ಯುಟಿಎಸ್ ಎಂದರೆ ಏನು..?
ಯುಟಿಎಸ್ ಆ್ಯಪ್ ಸೇವೆಗಿಂತ M-UTS ಎಂಬುದು ತುಸು ವಿಭಿನ್ನ
ಯುಟಿಎಸ್ ಆ್ಯಪ್ ಮೂಲಕ ನಾವೇ ಟಿಕೆಟ್ ಪಡೆಯಬೇಕು
ಆದ್ರೆ, ಎಂ-ಯುಟಿಎಸ್‌ನಲ್ಲಿ ರೈಲ್ವೆ ಸಿಬ್ಬಂದಿ ಟಿಕೆಟ್ ನೀಡುತ್ತಾರೆ
ಯಂತ್ರಗಳ ಮೂಲಕ ಕಾಯ್ದಿರಿಸಿದ ಪ್ರಯಾಣ ಟಿಕೆಟ್- M-UTS
ಇದರ ಮೂಲಕ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಪಡೆಯಬಹುದು
ರೈಲು ನಿಲ್ದಾಣದಿಂದ 500 ಮೀ. ದೂರ ಟಿಕೆಟ್ ವಿತರಣೆಗೆ ಅವಕಾಶ
ಗರಿಷ್ಠ ಎಷ್ಟು ದೂರದಲ್ಲಿದ್ದರೂ ಇ-ಟಿಕೆಟ್ ಖರೀದಿ ಮಾಡಬಹುದು
ಟಿಕೆಟ್ ಖರೀದಿಸಿದ 1 ಗಂಟೆ ಒಳಗೆ ಪ್ರಯಾಣ ಪ್ರಾರಂಭಿಸಬೇಕು
ರೈಲು ನಿಲ್ದಾಣ ಆವರಣದಲ್ಲೇ ಎಂ-ಯುಟಿಎಸ್ ಟಿಕೆಟ್ ಪಡೆಯಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us