/newsfirstlive-kannada/media/post_attachments/wp-content/uploads/2024/07/Russia-Army.jpg)
ಬಲಿಷ್ಠ ರಾಷ್ಟ್ರವೊಂದರ ಸೇನೆಯು ಭಾರತದಲ್ಲಿ ತಯಾರಾಗುವ ಶೂಗಳನ್ನು ಬಯಸುತ್ತವೆ ಎಂದರೆ ನಂಬಲು ಅಸಾಧ್ಯ. ಭಾರತದಲ್ಲಿ ತಯಾರಾಗುವ ಶೂಗಳಿಗೆ ವಿದೇಶದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ರಷ್ಯಾ ದೇಶವು ತನ್ನ ಸೈನಿಕರಿಗಾಗಿ ಭಾರತದಿಂದ ಶೂಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಹೌದು. ಬಿಹಾರದ ಹಾಜಿಪುರದ ಕೈಗಾರಿಕಾ ಘಟಕದಲ್ಲಿ ತಯಾರಾಗುವ ಶೂಗಳ ಹೆಜ್ಜೆ ಸಪ್ಪಳ ರಷ್ಯಾದಲ್ಲಿ ಕೇಳಿಬರುತ್ತಿದೆ. ರಷ್ಯಾ ಸೈನಿಕರು ಆರಾಮ ಮತ್ತು ಕರ್ತವ್ಯಕ್ಕೆ ಈ ಶೂಗಳನ್ನೇ ಬಯಸುತ್ತಿದ್ದಾರೆ. ಯುದ್ಧಭೂಮಿಯಲ್ಲಿ, ಹಿಮದ ನೆಲದಲ್ಲಿ ಹೆಜ್ಜೆ ಹಾಕಲು ಹಾಜಿಪುರದಿಂದ ವಿಶೇಷವಾಗಿ ತಯಾರಿಸಿದ ಶೂಗಳು ರಷ್ಯಾ ದೇಶಕ್ಕೆ ರಫ್ತು ಆಗುತ್ತಿದೆ. ಇದು ಕೊರೆಯುವ ಚಳಿಯಲ್ಲೂ ಸೈನಿಕರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: KRS Dam: ಕಾವೇರಿ ಜಲಧಾರೆಗೆ ತುಂಬುತ್ತಿದೆ ಅಣೆಕಟ್ಟು.. ಇಂದು ಕೆಆರ್ಎಸ್ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
ಇದನ್ನೂ ಓದಿ: 8 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕರಿಂದ ಲೈಂಗಿಕ ದೌರ್ಜನ್ಯ.. ಕೊಲೆ ಮಾಡಿ ಕಾಲುವೆಗೆ ಎಸೆದ ರಾಕ್ಷಸರು
ಶಿವ ಕುಮಾರ್ ರಾಯ್ ಎಂಬವರು ಕಾಂಪಿಟನ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹುಟ್ಟುಹಾಕಿ ಅದರ ಮೂಲಕ ಹಾಜಿಪುರದಲ್ಲಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಲು ಮುಂದಾದರು. ಸುರಕ್ಷತಾ ಶೂಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ರಷ್ಯಾಗೆ ರಫ್ತು ಮಾಡಿದರು. ಸದ್ಯ ರಷ್ಯಾದ ಜೊತೆಗೆ ಯುರೋಪಿಯನ್ ಮಾರುಕಟ್ಟೆಗೆ ಈ ಶೂಗಳು ತಲುಪುತ್ತಿವೆ. ದೇಶಿಯ ಮಾರುಕಟ್ಟೆಗೂ ಸದ್ಯದಲ್ಲೇ ಬಿಡುಗಡೆ ಮಾಡಲು ಶಿವ ಕುಮಾರ್ ರಾಯ್ ಮುಂದಾಗಿದ್ದಾರೆ.
ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ 10ನೇ ಮಗುವಿಗೆ ಜನ್ಮ ನೀಡಿದ ತಾಯಿ!
ಶಿವ ಕುಮಾರ್ ರಾಯ್ ಈ ಕುರಿತಾಗಿ ಮಾತನಾಡಿದ್ದು, ‘‘ರಷ್ಯಾ ದೇಶಕ್ಕೆ ಹಗುರವಾದ ಮತ್ತು ಸ್ಲಿಪ್ ಆಗದ ಶೂಗಳ ಅಗತ್ಯವಿದೆ. 40 ಡಿಗ್ರಿ ಸೆಲ್ಸಿಯಸ್ ಪರಿಸ್ಥಿತಿಯಲ್ಲಿ ಬಳಸಬಹುದಾದ ಶೂಗಳು ಇದಾಗಿದೆ. ಶೂ ಘಟಕದಲ್ಲಿ 300 ಉದ್ಯೋಗಿಗಳ ಪೈಕಿ ಶೇ.70ರಷ್ಟು ಮಹಿಳೆಯ ಉದ್ಯೋಗಿಗಳಿಗೆ ಒತ್ತು ನೀಡಲು ಮುಂದಾಗಿದ್ದೇವೆ. ಕಳೆದ ವರ್ಷ 100 ಕೋಟಿ ಮೌಲ್ಯದ 1.5 ಮಿಲಿಯನ್ ಜೋಡಿ ಶೂಗಳನ್ನು ರಫ್ತು ಮಾಡಿದ್ದೇವೆ ಎಂದು’’ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ