/newsfirstlive-kannada/media/post_attachments/wp-content/uploads/2025/02/AERO-SHOW.jpg)
ಏರೋ ಇಂಡಿಯಾ ಶೋ-2025 (Aero India 2025) ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿದೆ. ಇವತ್ತಿನಿಂದ ಸಾರ್ವಜನಿಕರೂ ಕೂಡ ನಿಗಧಿಪಡಿಸಿದ ಹಣ ಪಾವತಿಸಿ ಬಾನಂಗಳದಲ್ಲಿನ ಲೋಹದ ಹಕ್ಕಿಗಳ ವೈಭವ ಕಣ್ತುಂಬಿಕೊಳ್ಳಬಹುದು.
ಇನ್ನು ಏರ್ ಶೋನಲ್ಲಿ Made in Tumakuru ಹೆಲಿಕಾಪ್ಟರ್ ಒಂದು ಗಮನ ಸೆಳೆದಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತುಮಕೂರಿನ ಹೆಲಿಕಾಪ್ಟರ್ ಘಟಕದಲ್ಲಿ ನಿರ್ಮಿಸಿರುವ ಎಲ್‌ಯುಎಚ್ (light utility helicopter) ಹೆಲಿಕಾಪ್ಟರ್ ಏರೋ ಇಂಡಿಯಾದಲ್ಲಿ ಮತ್ತೊಂದು ಆಕರ್ಷಣೆಯಾಗಿದೆ.
LUH ಹೆಲಿಕಾಪ್ಟರ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕದ ನೆಲ ತುಮಕೂರಿನ ಪಿಎಸ್‌ಯುನ ಆಧುನಿಕ ಸೌಲಭ್ಯದಲ್ಲಿ ತಯಾರಿಸಲಾಗಿದೆ. ಹೀಗಾಗಿ ಈ ಹೆಲಿಕಾಪ್ಟರ್ ಸ್ಥಳೀಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಐಐಟಿ ಬಾಬಾ.. ಏರೋಸ್ಪೇಸ್ ಇಂಜಿನಿಯರ್ ಆಗಿದ್ದವರು ಈಗ ಸಾಧು
ವಿಶೇಷತೆ ಏನು..?
ಎಲ್ಲ ಉದ್ಯಮಿಗಳು, ವಿದೇಶಗಳ ರಕ್ಷಣಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಎಲ್‌ಯುಎಚ್ ಬಳಿ ಹೋಗಿ ಮಾಹಿತಿ ಪಡೆಯುತ್ತಿದ್ದಾರೆ. 2019ರ ಜನವರಿಯಲ್ಲಿ ಟ್ರಯಲ್ ಹಾರಾಟ ಪೂರ್ಣಗೊಳಿಸಿದ್ದ ಎಲ್ಯುಎಚ್ಗೆ ರಕ್ಷಣಾ ಇಲಾಖೆ ಹಾಗೂ ವಾಯು ಸೇನೆಗೆ ತಲಾ 6 ಹೆಲಿಕಾಪ್ಟರ್ಗಳ ಆರ್ಡರ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- ಆತ್ಮನಿರ್ಭರ ಭಾರತ್ ಮಿಷನ್ ಅಡಿಯಲ್ಲಿ LUH ಅಭಿವೃದ್ಧಿ
- LUH ಸಮುದ್ರಮಟ್ಟ, ಎತ್ತರದ ಕಾರ್ಯಾಚರಣೆಗಳಿಗಾಗಿ ವಿನ್ಯಾಸ
- ತುಂಬಾ ಹಗುರ, ಯಾವುದೇ ಸ್ಥಳದಲ್ಲೂ ಸುಲಭ ಲ್ಯಾಂಡ್ಗೆ ಯೋಗ್ಯ
- ವಿಚಕ್ಷಣ, ಕಣ್ಗಾವಲು, ಸೈನ್ಯದ ಸಾಗಣೆ ಮತ್ತು ಇತರ ಸಶಸ್ತ್ರಗಳ ಪಾತ್ರ
- ಏಕಕಾಲದಲ್ಲಿ ಬಹು-ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ
- 2000 ಕೆಜಿಗಿಂತ ಕಡಿಮೆ ತೂಕ, ಆರು ಆಸನಗಳನ್ನು ಹೊಂದಿದೆ
- ಹೆಲಿಕಾಪ್ಟರ್ ಗಂಟೆಗೆ ಗರಿಷ್ಠ 235 ಕಿಮೀ ಕ್ರೂಸ್ ವೇಗವನ್ನು ತಲುಪುತ್ತದೆ
- ಭಾರತೀಯ ಸಶಸ್ತ್ರ ಪಡೆಗಳು ನಿರ್ವಹಿಸುತ್ತಿರುವ ಚೀತಾ, ಚೇತಕ್
- ಚೀತಾ, ಚೇತಕ್ ಹೆಲಿಕಾಪ್ಟರ್‌ಗಳಿಗೆ ಬದಲಿಯಾಗಿ LUH ನಿರ್ಮಾಣ
- ಅತ್ಯಾಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಹೊಂದಿದೆ
ಭಾರತವು ವಿದೇಶಿ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಎಎಲ್ ಸುಮಾರು 700ಕ್ಕೂ ಹೆಚ್ಚು ಚೀತಾ, ಚೇತಕ್ ಹೆಲಿಕಾಪ್ಟರ್ಗಳನ್ನು ನಿರ್ಮಿಸಿ ಕೊಟ್ಟಿದೆ. ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳು ಹಳೇಯ ಮಾದರಿಯಾಗಿವೆ. ಅವುಗಳ ಬದಲಿಗೆ ನಾವೀಗ ಎಲ್ಯುಹೆಚ್ ಕಾಪ್ಟರ್ ನಿರ್ಮಾಣ ಮಾಡುತ್ತಿದ್ದೇವೆ. ಇದು ಏರೋ ಶೋನಲ್ಲಿ ಪ್ರಮುಖ ಆಕರ್ಷಣೆಯಾಗಿದೆ ಎಂದು ತುಮಕೂರು ಹೆಲಿಕಾಪ್ಟರ್ ವಿಭಾಗದ ಜನರಲ್ ಮ್ಯಾನೇಜರ್ ಕೃಷ್ಣಪ್ಪ ನ್ಯೂಸ್ಫಸ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Aero India: ಬೆಂಗಳೂರು ಏರೋ ಇಂಡಿಯಾ ಶೋಗೆ ಸಂಬಂಧಿಸಿದ 10 ವಿಚಾರಗಳು..! ನಿಮಗಿದು ಗೊತ್ತಿರಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ