ದಯವಿಟ್ಟು ಕ್ಷಮಿಸಿ ಬಾಸ್​.. ನಟ ದರ್ಶನ್​ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಮಡೆನೂರು ಮನು

author-image
Veena Gangani
Updated On
ದಯವಿಟ್ಟು ಕ್ಷಮಿಸಿ ಬಾಸ್​.. ನಟ ದರ್ಶನ್​ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಮಡೆನೂರು ಮನು
Advertisment
  • ನಟ ದರ್ಶನ್​ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಮಡೆನೂರು ಮನು
  • ಡಿ ಬಾಸ್​ ನಾನೊಬ್ಬ ಪುಟ್ಟ ಕಲಾವಿದ.. ನನ್ನನ್ನೂ ಕ್ಷಮಿಸಿ ಎಂದ ನಟ
  • ಉಸಿರು ಇರುವವರೆಗೂ ನಿಮ್ಮನ್ನು ಮರೆಯೋದಿಲ್ಲ ಎಂದ ಮನು

ಇತ್ತೀಚೆಗೆ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಮನು ಅವಹೇಳನಕಾರಯಾಗಿ ಮಾತನಾಡಿದ್ದ ಆಡಿಯೋ ಕ್ಲಿಪ್‌ವೊಂದು ವೈರಲ್ ಆಗಿತ್ತು. ಆ ಆಡಿಯೋ ಕ್ಲಿಪ್​ ವೈರಲ್ ಆಗುತ್ತಿದ್ದಂತೆ ಶಿವರಾಜ್​ ಕುಮಾರ್, ನಟ ಧ್ರುವ ಸರ್ಜಾ, ದರ್ಶನ್​ ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದರು.

ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ

ನಟ ಮನು ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಳಿಕ ನಟ ಶಿವರಾಜ್​ ಕುಮಾರ್​ ಅವರ ಮನೆಗೆ ಹೋಗಿದ್ದರು. ಆದರೆ ನಟ ಸಿಗದಿದ್ದ ಕಾರಣ ಅಲ್ಲಿಂದ ವಾಪಸ್​ ಆಗಿದ್ದರು. ಇದೀಗ ಮಡೆನೂರು ಮನು ನಟ ದರ್ಶನ್ ಬಳಿ ಕ್ಷಮೆ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

publive-image

ಈ ಬಗ್ಗೆ ವಿಡಿಯೋದಲ್ಲಿ ಮಾತಾಡಿದ ಮಡೆನೂರು ಮನು, ದರ್ಶನ್​ ಅಭಿಮಾನಿಗಳು ನನಗೆ ಕಾಲ್​ ಹಾಗೂ ಮೆಸೇಜ್​ಗಳನ್ನು ಮಾಡಿದ್ದರು. ಕ್ಷಮೆ ಕೇಳಿದ್ರಾ, ಅವರನ್ನು ಭೇಟಿಯಾದ್ರಾ ಅಂತ. ಒಂದು ಸರಿ ಭೇಟಿಯಾಗಿ ಅಂತ ಸುಮಾರು ಜನ ಹೇಳಿದ್ರು. ಆದ್ರೆ ನಟ ದರ್ಶನ್ ಅವರು ಬ್ಯುಸಿಯಾಗಿದ್ದಾರೆ ಎಂದು ಗೊತ್ತಾಯ್ತು. ಡಿ ಬಾಸ್​ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜೊತೆಯಲ್ಲಿ ಇರುವವರನ್ನು ನಂಬಿ ಈ ಆಡಿಯೋದಿಂದ ನಾನು ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ..ಕ್ಷಮಿಸಿ..ಕ್ಷಮಿಸಿ.. ಇಡೀ ಡಿ ಬಾಸ್​ ಅಭಿಮಾನಿಗಳು, ಕರ್ನಾಟಕದ ಜನತೆಗೆ ನನಗೆ ಒಂದು ಜೀವದಾನ ಕೊಟ್ಟಿದ್ದೀರಿ. ನನ್ನ ಉಸಿರು ಇರುವವರೆಗೂ ನಿಮ್ಮನ್ನು ಮರೆಯೋದಿಲ್ಲ. ಈ ಪುಟ್ಟ ಕಲಾವಿದನನ್ನು ಕ್ಷಮಿಸಿ ಅಂತ ಅಂಗಲಾಚಿ ಬೇಡಿಕೊಂಡಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆ ಹೊತ್ತಲ್ಲಿ ನಟ ಮಡೇನೂರು ಮನು ಅಸಲಿ ಬಣ್ಣ ಬಯಲಾಗಿತ್ತು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಗಮನ ಸೆಳೆದಿದ್ದ ಮನು ಹೀರೊ ಆಗಿ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದರು. ಅಷ್ಟರಲ್ಲೇ ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ದೂರು ದಾಖಲಾಗಿ ಬಂಧನವಾಗಿದ್ದರು.ಅಷ್ಟೇ ಅಲ್ಲದೇ ಸ್ಟಾರ್ ನಟರ ಬಗ್ಗೆ ಮನು ಮಾತನಾಡಿದ್ದ ಮಾತುಗಳು ಅಭಿಮಾನಿಗಳ ಅಸಮಾಧಾನ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment