/newsfirstlive-kannada/media/post_attachments/wp-content/uploads/2025/05/manu1.jpg)
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರ ಮೇಲೆ ಸಂತ್ರಸ್ತೆ ಸಾಲು ಸಾಲು ಆರೋಪ ಮಾಡಿದ್ದಾರೆ. ಹೀಗಾಗಿ ರಾತ್ರಿಯಿಡೀ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ
/newsfirstlive-kannada/media/post_attachments/wp-content/uploads/2025/05/manu-wife.jpg)
ಇನ್ನೂ, ಪತಿ ಮಡೆನೂರು ಮನು ಮೇಲೆ ಸಂತ್ರಸ್ತೆ ಮಾಡಿದ ಆರೋಪದ ಬಗ್ಗೆ ಪತ್ನಿ ದಿವ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನನ್ನ ಗಂಡ ಬೆಳಿತಾನೇ ಅಂತ ಷಡ್ಯಂತ್ರ ಮಾಡಲಾಗಿದೆ. ಬೇಕು ಅಂತಲೇ ನನ್ನ ಗಂಡನ ವಿರುದ್ಧ ಪಿತೂರಿ ಮಾಡಲಾಗಿದೆ. ಮಚ್ಚಾ ನೀನು ಬೆಳಿಬೇಕು ಅಂತಾ ಗೆಳತಿ ಈಗ್ಯಾಕೆ ಆರೋಪ ಮಾಡಿದ್ದಾಳೆ? ಇದು ಬೇಕು ಅಂತಲೇ ಮಾಡ್ತಿರೋ ಆರೋಪ. ಆಕೆ ಬೇರೆಯವರ ಬಗ್ಗೆಯೂ ಇದೇ ಥರಾ ಆರೋಪ ಮಾಡಿದ್ದಾಳೆ. ಅವರಿಬ್ಬರ ಸಂಬಂಧದ ಬಗ್ಗೆ ನನಗೇನು ಗೊತ್ತಿಲ್ಲ. ಆಕೆ ಹೇಳಿರೋದೆಲ್ಲಾ ಸುಳ್ಳು. ನನ್ನ ಗಂಡನಿಗೆ ನ್ಯಾಯ ಸಿಗೋ ತನಕ ಹೋರಾಡ್ತೀನಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us