ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಧು ಬಂಗಾರಪ್ಪ!

author-image
admin
Updated On
ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಧು ಬಂಗಾರಪ್ಪ!
Advertisment
  • ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆಗಳು
  • 4 ಗಂಟೆ ಕಾಲ ಶಿವಣ್ಣನಿಗೆ ಎಂಥಾ ಆಪರೇಷನ್ ನಡೀತು?
  • ಅಂದು ರೋಬೋಟಿಕ್ ಆಪರೇಷನ್​​ ಪ್ಲಾನ್ ನಡೆದಿತ್ತಾ?

ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್​​ ಅಮೆರಿಕಾದಲ್ಲಿ ಅನಾರೋಗ್ಯದ ನಿಮಿತ್ತ ಶಸ್ತ್ರ ಚಿಕಿತ್ಸೆಗೆ ತೆರಳಿದ್ರು. ಅಮೆರಿಕಾದ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ನಟ ಶಿವರಾಜ್​ಕುಮಾರ್ ಅವರಿಗೆ ಸರ್ಜರಿ ಮಾಡಲಾಗಿದೆ. ಸದ್ಯ ಶಿವಣ್ಣ ಆರೋಗ್ಯವಾಗಿದ್ದಾರೆ. ಆದರೆ, ಶಿವಣ್ಣನಿಗೆ ಸತತ 4 ಗಂಟೆಗಳ ಕಾಲ ಎಂಥಾ ಆಪರೇಷನ್ ನಡೀತು ಅನ್ನೋ ಬಗ್ಗೆ ಸಂಬಂಧಿ ಹಾಗೂ ಸಚಿವ ಮಧು ಬಂಗಾರಪ್ಪ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ; ಫ್ಯಾನ್ಸ್ ಖುಷಿ ಪಡುವ 5 ಫೋಟೋ ಹಂಚಿಕೊಂಡ ಗೀತಕ್ಕ 

ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್!
ಡಾ.ಮುರುಗೇಶ್ ನೇತೃತ್ವದಲ್ಲಿ ಶಿವಣ್ಣನಿಗೆ ಸತತ 4 ಗಂಟೆ ಕಾಲ ಶಸ್ತ್ರ ಚಿಕಿತ್ಸೆ ನಡೆದಿದೆ. ಒಂದೇ ಸಲ ಶಿವಣ್ಣಗೆ 6 ಆಪರೇಷನ್ ಮಾಡಿದ್ದಾರೆ. ಶಿವಣ್ಣನ ದೇಹದೊಳಗೆ ಒಟ್ಟು 190 ಹೊಲಿಗೆ ಬಿದ್ದಿವೆ ಅನ್ನೋ ವಿಚಾರವನ್ನೂ ಮಧು ಬಂಗಾರಪ್ಪ ಹೇಳಿದ್ದಾರೆ. ನುರಿತ ವೈದ್ಯರಾಗಿದ್ದರಿಂದ ಈ ಆಪರೇಷನ್ ಸಕ್ಸಸ್ ಆಗಿದೆ.

5.5 ಗಂಟೆಯಲ್ಲಿ ಸರ್ಜರಿ ಮಾಡೋ ಪ್ಲಾನ್ ಇತ್ತು. 30 ನಿಮಿಷಕ್ಕೆ ಮುಂಚೆಯೇ ಆಪರೇಷನ್ ಆಯ್ತು. ಆಪರೇಷನ್ ಆದ ಕೂಡಲೇ ಹೋಗಿ ಮಾತಾಡಿಸಿದ್ವಿ. ರೋಬೋಟಿಕ್ ಆಗಿ ಆಪರೇಷನ್ ಮಾಡಿಸೋ ಪ್ಲಾನ್ ಕೂಡ ಇತ್ತು. ಕೊನೆಗೆ ಮ್ಯಾನ್ಯುಲ್ ಆಗಿಯೇ ಆಪರೇಷನ್ ಮಾಡಿದ್ರು ಎಂಬುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.

publive-image

ಜನವರಿ 25ರಂದು ಶಿವಣ್ಣ ಬರಲಿದ್ದಾರೆ!
ಸದ್ಯ, ಶಿವಣ್ಣ ಮತ್ತಷ್ಟು ಸ್ಟ್ರಾಂಗ್ ಆಗಿದ್ದು. ಫುಲ್ ಎನರ್ಜಿಯಿಂದ್ಲೇ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹಾರ್ಟ್‌ ಅಲ್ಲಿ ಒಂದು ಸ್ಟಂಟ್ ಇದೆ ಅಂತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ದಿನವೂ 4-5 ಕಿಲೋ ಮೀಟರ್​ ವಾಕ್​ ಮಾಡ್ತಿದ್ದಾರೆ. ಎದುರಿಗೆ ಇರೋ ಕೆರೆ​​ ಸುತ್ತಲೂ ನಾಲ್ಕೈದು ರೌಂಡ್​ ಸುತ್ತುತ್ತಿದ್ದಾರೆ. ಖುದ್ದು ವೈದ್ಯರೇ ಹೇಳಿರೋ ಪ್ರಕಾರ ಫಿಟ್​ ಇದ್ದಾರಂತೆ. ಅಷ್ಟೇ ಅಲ್ಲ, ಜನವರಿ 25ನೇ ತಾರೀಖಿನಂದು ಶಿವಣ್ಣ ಬರಲಿದ್ದಾರೆ ಅಂತಲೂ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment