/newsfirstlive-kannada/media/post_attachments/wp-content/uploads/2024/07/madhu.jpg)
ಟಿಕ್ ಟಾಕ್, ರೀಲ್ಸ್, ಇನ್​ಸ್ಟಾಗ್ರಾಮ್​ ಮತ್ತು ಯುಟ್ಯೂಬ್‌ನಲ್ಲಿ ಮಿಂಚುತ್ತಿರುವ ಮಧು ಗೌಡ ಬಹುತೇಕರಿಗೆ ಚಿರಪರಿಚಿತರು. ಇವರ ಜೊತೆಗೆ ಅಣ್ಣ ನಿಖಿಲ್, ತಂಗಿ ನಿಶಾ ಕೂಡ ಎಲ್ಲರಿಗೂ ಗೊತ್ತಿರುತ್ತೆ. ಈ ಮೂವರು ಹೀಗೆ ಭಿನ್ನ ವಿಭಿನ್ನವಾಗಿ ವಿಡಿಯೋಗಳನ್ನು ಕ್ರಿಯೇಟ್ ನೆಟ್ಟಿಗರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ. ಹೀಗೆ ಸಖತ್​ ಫೇಮಸ್​ ಆಗಿದ್ದ ಮಧು ಗೌಡ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಗೆಳತಿ ನಿಶಾ ಹಾಗೂ ತನ್ನ ಭಾವಿ ಪತ್ನಿ ಮಧು ಗೌಡ ಅವರ ಹುಟ್ಟುಹಬ್ಬವನ್ನು ನಿಖಿಲ್ ಅವರು ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ. ಬರ್ತ್​ ಡೇ ಫೋಟೋಗಳನ್ನು ಮಧು ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಸ್ ನೋಡಿದ ನೆಟ್ಟಿಗರು ಮಧು ಗೌಡರಿಗೆ ವಿಶ್ ಮಾಡಿದ್ದಾರೆ. ಮಾರ್ಚ್​ 11ರಂದು ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಗುರು ಹಿರಿಯರ ಸಮ್ಮುಖದಲ್ಲಿ​ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೋಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
View this post on Instagram
ಬರ್ತ್​ ಡೇ ನಿಮಿತ್ತ ಮಧು ಗೌಡ, ನಿಶಾ, ನಿಖಿಲ್​ ರವೀಂದ್ರ ಹಾಗೂ ಮಧು ಅವರ ಅಣ್ಣ ಮಧನ್​ ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದು ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ದೀಪಾವಳಿಗೆ ನಮ್ಮ ಮದುವೆ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ಮದುವೆಯಾದ ಬಳಿಕ ಕೂಡ ಲೈವ್​ಗೆ ಬರುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಸಾಕಷ್ಟು ಜನರು ಮಧು ಗೌಡ ಹಾಗೂ ನಿಖಿಲ್​ ರವೀಂದ್ರ ಅವರ ಲವ್​ ಸ್ಟೋರಿ ಬಗ್ಗೆ ಕೇಳಿದ್ದರು. ಈ ಬಗ್ಗೆ ಕೂಡ ಮಧು ಗೌಡ ಹಾಗೂ ನಿಖಿಲ್ ಯ್ಯೂಟೂಬ್​ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ