/newsfirstlive-kannada/media/post_attachments/wp-content/uploads/2025/04/puc1.jpg)
ಬೆಂಗಳೂರು: ಇಂದು ದ್ವಿತೀಯ ಪಿಯು ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಇಂದು ಮಧ್ಯಾಹ್ನ 1.30ರ ವೇಳೆಗೆ (karresults.nic.in/kseab.karnataka.gov.in) ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶ ವೀಕ್ಷಿಸಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ.
ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಮಾರ್ಚ್1 ರಿಂದ 20ರವರೆಗೆ ರಾಜ್ಯಾದ್ಯಂತ 1,771 ಪರೀಕ್ಷಾ ಕೇಂದ್ರಗಳಲ್ಲಿ ಪಿಯು ಪರೀಕ್ಷೆ ನಡೆದಿತ್ತು. ಒಟ್ಟು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಮರುದಿನದಿಂದಲೇ 76 ಕೇಂದ್ರಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು. ಏಪ್ರಿಲ್ 3 ವೇಳೆಗೆ ಮೌಲ್ಯಮಾಪನ ಪೂರ್ಣಗೊಂಡಿತ್ತು. ಇದೀಗ ಫಲಿತಾಂಶದ ಕಂಪ್ಯೂಟರೀಕರಣ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಸಂಜನಾ ಭಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 77.88 ಬಾಲಕಿಯರು ಶೇಕಡಾವಾರು ಉತ್ತೀರ್ಣ ಆಗಿದ್ದಾರೆ. ಬಾಲಕರು 68.20 ಶೇಕಡಾವಾರು ಉತ್ತೀರ್ಣರಾಗಿದ್ದಾರೆ.
ಇನ್ನೂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಕಲಾ ವಿಭಾಗದಲ್ಲಿ ಶೇ.53.29, ವಾಣಿಜ್ಯ ವಿಭಾಗದಲ್ಲಿ ಶೇ.76.07, ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.82.54ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದಿದ್ದಾರೆ.
PUC ರಿಸಲ್ಟ್ ನೋಡೋದು ಹೇಗೆ..?
- ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
- ಹೋಂ ಪೇಜ್ನಲ್ಲಿ Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
- ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು
- Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ