/newsfirstlive-kannada/media/post_attachments/wp-content/uploads/2025/04/accident6.jpg)
ಭೋಪಾಲ್: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅವಘಡದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಪಕ್ಕದ ಬಾವಿಗೆ ಬಿದ್ದ ಕಾರಿನಲ್ಲಿದ್ದವರು ಮಾತ್ರವಲ್ಲ. ಅವರ ರಕ್ಷಣೆ ಮಾಡಲು ಹೋದವನು ಪ್ರಾಣ ಬಿಟ್ಟಿದ್ದಾನೆ. ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಬಿಗ್ಬಾಸ್ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!
ವೇಗವಾಗಿ ಬಂದ ಇಕೋ ಕಾರ್ ಮೊದಲು ಬೈಕಿಗೆ ಡಿಕ್ಕಿ ಹೊಡೆದಿದೆ. ಹೀಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರು ಚಾಲಕನ ಕಂಟ್ರೋಲ್ ತಪ್ಪಿ ವ್ಯಾನ್ ಬಾವಿಗೆ ಬಿದ್ದಿದೆ. ಒಂದು ಸೆಕೆಂಡ್ನಲ್ಲಿ ಏನಾಯ್ತು ಅಂತಾ ಗೊತ್ತಾಗದೆ, ಕಾರಿನಲ್ಲಿದ್ದ ಜನರ ಕಿರುಚಾರೋದಕ್ಕೆ ಶುರು ಮಾಡಿದ್ದಾರೆ. ಕಿರುಚಾಟ ಕೇಳಿ ಹತ್ತಿರದ ಜನರು ಸ್ಥಳಕ್ಕೆ ಬಂದು ರಕ್ಷಣೆ ಮುಂದಾಗಿದ್ದಾರೆ.
ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ತಲುಪುತ್ತಿದ್ದಂತೆ ಸೀದಾ ಬಂದ ಪೊಲೀಸರು ರಕ್ಷಣೆ ಕಾರ್ಯ ಶುರು ಮಾಡಿದ್ರು. ಬಾವಿಗೆ ಬಿದ್ದಿದ್ದ 14 ಜನರನ್ನ ಬಾವಿಯಿಂದ ಹೊರತೆಗೆದ್ರು. ಬಳಿಕ ಆಸ್ಪತ್ರೆಗೂ ದಾಖಲಿಸಿದ್ರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ 12 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆದ್ರೆ ಜನರು ಸಾವನ್ನಪ್ಪಿರೋದು ಅಪಘಾತದಿಂದಲ್ಲಾ ಅಂತಾ ವೈದ್ಯರು ಟ್ವಿಸ್ಟ್ ಕೊಟ್ಟಿದ್ದಾರೆ.
ಅಪಘಾತಕ್ಕೀಡಾದ ಇಕೋ ವ್ಯಾನ್ ಅನಿಲದಿಂದ ಚಲಿಸುತ್ತಿತ್ತು ಎಂದು ಹೇಳಲಾಗಿದ್ದು, ಅದು ಬಾವಿಗೆ ಬಿದ್ದ ನಂತರ ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು. ಈ ಅವಧಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನ ಕೈಗೊಳ್ಳುವಲ್ಲಿಯೂ ತೊಂದರೆಗಳು ಎದುರಾಗಿದೆ. ರಕ್ಷಣೆಗಾಗಿ ಬಾವಿಗೆ ಇಳಿದ ಮನೋಹರ್ ಎಂದು ಗುರುತಿಸಲಾದ ಗ್ರಾಮಸ್ಥ ಕೂಡ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಬಲಿಯಾದ ವ್ಯಕ್ತಿಯ ಶವವನ್ನ ಇನ್ನೂ ಬಾವಿಯಿಂದ ಹೊರತೆಗೆಯಲಾಗಿಲ್ಲ.
ಎನ್‌ಡಿಆರ್‌ಎಫ್ ಸೇರಿದಂತೆ ಇತರ ಘಟಕಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ, ಘಟನೆ ಸಂಬಂಧ ಪೊಲೀಸರ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ರಕ್ಷಣೆ ಮಾಡಲು ಹೋದವನೂ ಕೂಡ ಪ್ರಾಣ ಕಡೆದುಕೊಂಡಿರೋದು ನೋವಿನ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ