/newsfirstlive-kannada/media/post_attachments/wp-content/uploads/2025/06/Taj-Mahal-house3.jpg)
ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ ಈ ತಾಜ್ ಮಹಲ್. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದು ಎಂದರೆ ದೊಡ್ಡ ಸಾಧನೆ. ಈಗಂತೂ ಒಂದು ಚಿಕ್ಕ ಮನೆ ನಿರ್ಮಾಣ ಮಾಡಲು ಸುಮಾರು 3 ರಿಂದ 10 ಲಕ್ಷ ರೂಪಾಯಿಗಿಂತಲೂ ಹೆಚ್ಚು ಖರ್ಚಾಗುತ್ತೆ. ಆದ್ರೆ ಇಲ್ಲೊಬ್ಬ ಉದ್ಯಮಿ ತನ್ನ ಪ್ರೀತಿಯ ಮಡದಿಗಾಗಿ ಥೇಟ್ ತಜ್ ಮಹಲ್ ಶೈಲಿಯಲ್ಲೇ ಮನೆ ಕಟ್ಟಿ ತೋರಿಸಿದ್ದಾನೆ.
ಮಧ್ಯಪ್ರದೇಶದಲ್ಲಿ ದಂಪತಿಯೊಂದು ತಾಜ್ಮಹಲ್ ಶೈಲಿಯಲ್ಲಿ ಮನೆ ಕಟ್ಟಿ ಎಲ್ಲರ ಹುಬ್ಬೇರಿಸಿದ್ದಾರೆ. ಬುರ್ಹಾನ್‌ಪುರದಲ್ಲಿ ತಾಜ್ಮಹಲ್ ಕಟ್ಟಡವನ್ನೇ ಹೋಲುವಂತೆ 4 ಬಿಹೆಚ್ಕೆ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಹೌದು, ಆನಂದ್ ಪ್ರಕಾಶ್ ಚೌಕ್ಸೆ ಎಂಬುವವರು ತನ್ನ ಪತ್ನಿಗಾಗಿ ತಾಜ್ಮಹಲ್ ಶೈಲಿಯಲ್ಲಿ ಮನೆ ಕಟ್ಟಿಸಿ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಹ ಕಲಾವಿದ ಆಗುಂಬೆ ಹೋಂ ಸ್ಟೇಯಲ್ಲಿ ನಿಧನ; ಆಗಿದ್ದೇನು?
ಈ ಕಟ್ಟಡವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ಆಗ್ರಾದಲ್ಲಿರುವ ಐಕಾನಿಕ್ ಸ್ಮಾರಕದಲ್ಲಿ ಬಳಸಲಾದ ಅಮೃತಶಿಲೆಯಿಂದ ಕಟ್ಟಿಸಲಾಗಿದೆ. ಇದು ರಿಯಲ್ ತಾಜ್ ಮಹಲ್ನ ಮೂರನೇ ಒಂದರಷ್ಟು ದೊಡ್ಡದಾಗಿದೆ. ಜೊತೆಗೆ ಈ ರೀತಿ ಕಟ್ಟಡ ಕಟ್ಟೋಕೆ ಕಾರಣವನ್ನು ಪತಿ ರಿವೀಲ್ ಮಾಡಿದ್ದಾರೆ. ಮೊದಲು ತಾಜ್ ಮಹಲ್ ಪ್ರತಿನಿಧಿಸುವುದು ಪ್ರೀತಿ. ಹೀಗಾಗಿ ಉದ್ಯಮಿ ಚೌಕ್ಸೆ ಅವರು ಇದು ನನ್ನ ಪತ್ನಿಗೆ ಸಮರ್ಪಣೆ ಮಾಡುತ್ತೇನೆ ಅಂತ ಹೇಳಿದ್ದಾರೆ.. ಜೊತೆಗೆ ಇದರಿಂದ ನಮ್ಮ ಪ್ರೀತಿ ನಮ್ಮೊಂದಿಗೆ ಬಲವಾಗಿ ನಿಂತಿದೆ ಅಂತ ದಂಪತಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
View this post on Instagram
ಇನ್ನೂ, ಈ ಅದ್ಭುತವಾದ ಮನೆಯನ್ನು ನಿರ್ಮಿಸಲು ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗಿದೆ. 50 ಎಕರೆಯಲ್ಲಿ ನಿರ್ಮಿಸಲಾದ ಈ ಮನೆಯಲ್ಲಿ ಧ್ಯಾನ ಕೊಠಡಿ, ಗ್ರಂಥಾಲಯ, ಕೆತ್ತಿದ ಕಂಬಗಳು ಮತ್ತು ಕಮಾನಿನ ದ್ವಾರಗಳನ್ನು ಒಳಗೊಂಡಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋದಲ್ಲಿ ತಾಜ್ ಮಹಲ್ ರೀತಿಯಲ್ಲಿ ಇರುವ ಮನೆ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ