/newsfirstlive-kannada/media/post_attachments/wp-content/uploads/2025/06/UP_FAKE_MARRAIGE.jpg)
ಭೋಪಾಲ್: 18 ಎಕರೆ ಆಸ್ತಿಗಾಗಿ ಮದುವೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಹೆಂಡತಿ ತನ್ನ ಇಬ್ಬರ ಸಹಚರರ ಜೊತೆ ಸೇರಿ ಗಂಡನ ಜೀವ ತೆಗೆದಿದ್ದಾಳೆ. ಈ ಘಟನೆಯು ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದ ವ್ಯಕ್ತಿ ಇಂದ್ರ ಕುಮಾರ್ ತಿವಾರಿ (45) ಜೀವ ಕಳೆದುಕೊಂಡವರು. ಉತ್ತರ ಪ್ರದೇಶದ ಕುಶಿನಗರದ ಮಹಿಳೆ ಸಾಹಿಬಾ ಬಾನೋ ಹಾಗೂ ಈಕೆಯ ಇಬ್ಬರು ಸಹಚರರನ್ನ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿ ವ್ಯಕ್ತಿಯ ಜೊತೆ ನಕಲಿ ಮದುವೆಯ ನಾಟಕವಾಡಿ, ಚಾಕುವಿನಿಂದ ಇರಿದು ಜೀವ ತೆಗೆದು ದೇಹವನ್ನು ಮೋರಿಯಲ್ಲಿ ಎಸೆದು ಹೋಗಿದ್ದರು ಎಂದು ಹೇಳಲಾಗಿದೆ.
ಇಂದ್ರ ಕುಮಾರ್ ಸೋಶಿಯಲ್ ಮೀಡಿಯಾದ ರೀಲ್ಸ್ನಲ್ಲಿ 45 ವರ್ಷ ಆದರೂ ನನಗೆ ಮದುವೆ ಆಗಿಲ್ಲ ಎಂದು ನೋವಿನಿಂದ ಹೇಳಿಕೊಂಡಿದ್ದನು. ಇದರ ಜೊತೆಗೆ ತನಗೆ 18 ಎಕರೆ ಕೃಷಿ ಭೂಮಿ ಇರುವುದಾಗಿ ಹೇಳಿಕೊಂಡಿದ್ದರು. ಈ ರೀಲ್ಸ್ ಅನ್ನು ನೋಡಿದ್ದ ಆರೋಪಿ ಸಾಹಿಬಾ ಬಾನೋ ಆಸ್ತಿ ಕಬಳಿಸಲು ಬಿಗ್ ಪ್ಲಾನ್ ಮಾಡಿದ್ದಳು. ಹೀಗಾಗಿ ಸೋಶಿಯಲ್ ಮೀಡಿಯಾ ಮೂಲಕವೇ ಆತನನ್ನ ಸಂಪರ್ಕಿಸಿ ತನ್ನ ಹೆಸರು ಖುಷಿ ತಿವಾರಿ ಎಂದು ಪರಿಚಯ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಜಗನ್ನಾಥ ರಥಯಾತ್ರೆ ಸಂಭ್ರಮದಲ್ಲಿ ಕಾಲ್ತುಳಿತ.. ಉಸಿರು ಚೆಲ್ಲಿದ ಮೂವರು ಭಕ್ತರು, ಹಲವರು ಗಂಭೀರ!
ಬಳಿಕ ಇಂದ್ರ ಕುಮಾರ್ಗೆ ಖುಷಿ ತಿವಾರಿ ಅಂತ ನಕಲಿ ಆಧಾರ್ ಕಾರ್ಡ್ ತೋರಿಸಿ ನಂಬಿಕೆ ಬರುವಂತೆ ಮಾಡಿ ಉತ್ತರ ಪ್ರದೇಶದ ಗೋರಾಖ್ಪುರಕ್ಕೆ ಬರುವಂತೆ ಹೇಳಿದ್ದಾಳೆ. ಅಲ್ಲಿ ಇಂದ್ರನ ಜೊತೆ ಮಹಿಳೆ ನಕಲಿ ಮದುವೆ ಆಗಿದ್ದಾಳೆ. ಇದಕ್ಕೆ ಇಬ್ಬರು ಸಹಚರರು ಸಹಾಯ ಮಾಡಿದ್ದಾರೆ. ನಕಲಿ ಮದುವೆಯ ಫೋಟೋಗಳನ್ನು ಮುಖ್ಯವಾಗಿ ತೆಗೆದುಕೊಂಡಿದ್ದಾರೆ. ಇದೆಲ್ಲಾ ಮುಗಿದ ಮೇಲೆ ವ್ಯಕ್ತಿಗೆ ಭಯಾನಕವಾಗಿ ಚಾಕು ಇರಿದು ಜೀವ ತೆಗೆದಿದ್ದಾರೆ. ಬಳಿಕ ದೇಹವನ್ನು ಚರಂಡಿಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಸಂಬಂಧ ಮಹಿಳೆ ಸಾಹಿಬಾ ಬಾನೋ ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಕಲಿ ಮದುವೆ ಫೋಟೋಗಳಿಂದ ಆಸ್ತಿ ಕಬಳಿಸಲು ಯೋಜನೆಯಲ್ಲಿದ್ದರು. 18 ಎಕರೆ ಆಸ್ತಿ ಮಾರಾಟ ಮಾಡಿ ಎಲ್ಲ ಹಣವನ್ನು ಹಂಚಿಕೊಳ್ಳಲು ಪ್ಲಾನ್ ಮಾಡಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಆದರೆ ಆ ವಿಧಿಯಾಟವೇ ಬೇರೆ ಇತ್ತು. ಹೀಗಾಗಿ ಎಲ್ಲರೂ ಜೈಲು ಪಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ