/newsfirstlive-kannada/media/post_attachments/wp-content/uploads/2024/11/MP_MALL_1.jpg)
ಭೋಪಾಲ್: ತನ್ನ ಸಂಬಳ ಹೆಚ್ಚು ಮಾಡಿಲ್ಲವೆಂದು ಉದ್ಯೋಗಿಯೊಬ್ಬ ಮಾಲ್ನಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲಾ ಮನ ಬಂದಂತೆ ಒಡೆದು ಹಾಕಿ 18 ಲಕ್ಷ ರೂಪಾಯಿ ನಷ್ಟ ಮಾಡಿದ್ದಾನೆ. ಈ ಘಟನೆಯು ಮಧ್ಯಪ್ರದೇಶದ ಬೆತುಲ್ ನಗರದ ಗಂಜ್ ಪ್ರದೇಶದಲ್ಲಿನ ಗುಪ್ತಾ ಮಾಲ್ನಲ್ಲಿ ನಡೆದಿದೆ.
ಗುಪ್ತಾ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಕಮಲ್ ಪವಾರ್ ಈ ಕೃತ್ಯ ಎಸಗಿರುವುದು ಎಂದು ಗೊತ್ತಾಗಿದೆ. ಎಂದಿನಂತೆ ಎಲ್ಲ ಕೆಲಸಗಾರರು ಮಾಲ್ಗೆ ಬಂದು ನೋಡಿದಾಗ 18 ಲಕ್ಷ ರೂಪಾಯಿಗೂ ಅಧಿಕ ಮೊತ್ತದ 11 ಎಲ್‌ಇಡಿ ಟಿವಿ, 71 ಫ್ರಿಡ್ಜ್, ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳೆಲ್ಲಾ ಪೀಸ್ ಪೀಸ್ ಆಗಿ ನೆಲಕ್ಕೆ ಬಿದ್ದಿದ್ದವು. ತಕ್ಷಣ ಉದ್ಯೋಗಿಗಳು ಮಾಹಿತಿಯನ್ನು ಮಾಲ್ನ ಮ್ಯಾನೇಜರ್ಗೆ ತಿಳಿಸಿದ್ದಾರೆ. ಅವರು ಗಾಬರಿಯಿಂದ ಓಡಿ ಬಂದು ಅಲ್ಲಿ ಆದಂತಹ ಘಟನೆ ನೋಡಿ ಫುಲ್ ಶಾಕ್ ಆಗಿದ್ದಾರೆ. ಕೂಡಲೇ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್.. ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೆಲ್ಲಾ ಮಾಡಿರುವ ವ್ಯಕ್ತಿಯನ್ನ ಕಂಡುಕೊಂಡಿದ್ದಾರೆ. ಸಿಸಿಟಿವಿ ದೃಶ್ಯ ನೋಡಿದ ಮ್ಯಾನೇಜರ್, ಕಮಲ್ ಪವಾರ್ ಎಂದು ಗುರುತಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ದೀಪಾವಳಿ ಮುಗಿದ ಮೇಲೆ ನನ್ನ ಸಂಬಳ ಹೆಚ್ಚಳ ಮಾಡದಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ ಆರೋಪಿಯ ಕುಟುಂಬಸ್ಥರು ಅವನು ಮಾನಸಿಕ ಅಸ್ವಸ್ಥ ಎಂದು ಹೇಳಿ, ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದಾರೆ.
ಉದ್ಯೋಗಿಯು ಮಾಲ್ನಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದನು. ಈ ಸಂಬಂಧ ದೀಪಾವಳಿ ಹಬ್ಬಕ್ಕೂ ಮೊದಲೇ ಸಂಬಳ ಹೆಚ್ಚು ಮಾಡುವಂತೆ ಮ್ಯಾನೇಜರ್ ಬಳಿ ಕೇಳಿಕೊಂಡಿದ್ದನು. ಆದರೆ ಅವರು ಇದನ್ನು ತಿರಸ್ಕಾರ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಉದ್ಯೋಗಿ 3 ದಿನ ರಜೆ ತೆಗೆದುಕೊಂಡು ಹೋಗಿದ್ದನು. ನಂತರ ವಾಪಸ್ ಕೆಲಸಕ್ಕೆ ಬಂದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ