Advertisment

ಸಾಮೂಹಿಕ ಅ*ಚಾರ.. ಅರೆನಗ್ನ ಸ್ಥಿತಿಯಲ್ಲಿ 1.5 ಕಿಮೀ ಓಡಿಬಂದು ಜೀವ ಉಳಿಸಿಕೊಂಡ ಮಹಿಳೆ

author-image
Ganesh
Updated On
ಅಪ್ರಾಪ್ತೆ ಮೇಲೆ ಅತ್ಯಾ*ರ ಮಾಡಿದ್ರೆ ಮರಣದಂಡನೆ.. ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!
Advertisment
  • ಮಹಿಳೆಯ ಸ್ಥಿತಿ ನೋಡಿ ರೈತರಿಂದ ಪೊಲೀಸರಿಗೆ ಕರೆ
  • ಪೊಲೀಸರು ಸ್ಥಳಕ್ಕೆ ಬರ್ತಿದ್ದಂತೆಯೇ ಶಾಕ್ ಕಾದಿತ್ತು
  • ಇಬ್ಬರು ಆರೋಪಿಗಳು ಅರೆಸ್ಟ್, ತನಿಖೆ ತೀವ್ರ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೆಲಸ ಕೊಡಿಸುವ ನೆಪದಲ್ಲಿ ಉಜ್ಜಯಿನಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ತಾಜ್‌ಪುರಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಪನ್ವಾಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಅರೆನಗ್ನ ಸ್ಥಿತಿಯಲ್ಲಿ ಓಡಿ ಬರುತ್ತಿದ್ದರು. ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯ ರಕ್ಷಣೆಗೆ ಹೋದಾಗ ಅಸಲಿ ವಿಚಾರ ಗೊತ್ತಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..

ಜಬಲ್ಪುರ ಮತ್ತು ಮಾಂಡ್ಲಾದಲ್ಲಿ ವಾಸಿಸುತ್ತಿದ್ದ ಇಬ್ಬರು ಪ್ರೇಮಿಗಳು ಮನೆಯಿಂದ ಓಡಿಬಂದಿದ್ದರು. ಮೊದಲು ಮದುವೆಯಾಗಿ ಇಂದೋರ್‌ನಿಂದ ಉಜ್ಜಯಿನಿ ತಲುಪಿದ್ದರು. ಅಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಈ ಜೋಡಿ ರವಿ ಎಂಬ ಯುವಕನ ಭೇಟಿಯಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಇಬ್ಬರನ್ನೂ ತನ್ನ ಬೈಕ್ ಮೇಲೆ ಕೂರಿಸಿಕೊಂಡು ತಾಜಪುರಕ್ಕೆ ಕರೆದೊಯ್ದಿದ್ದಾನೆ. ಇಲ್ಲಿ ತನ್ನ ಮತ್ತೋರ್ವ ಸ್ನೇಹಿತ ಇಮ್ರಾನ್​​ನನ್ನು ಗುಡಿಸಲಿಗೆ ಕರೆದಿದ್ದಾನೆ.

Advertisment

ನಂತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಆ ಮಹಿಳೆ ಪತಿಯನ್ನು ಉಜ್ಜಯಿನಿಗೆ ಕರೆದುಕೊಂಡು ಹೋಗಿದ್ದಾನೆ. ಅಷ್ಟರಲ್ಲೇ ಇಮ್ರಾನ್ ಗುಡಿಸಲಿನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ. ಉಜ್ಜಯಿನಿಯಲ್ಲಿ ಆಕೆಯ ಗಂಡನನ್ನು ಬಿಟ್ಟು ರವಿ ಗುಡಿಸಲಿಗೆ ವಾಪಸ್ ಆಗಿದ್ದ. ಗುಡಿಸಲಿಗೆ ಬರ್ತಿದ್ದಂತೆಯೇ ರವಿ ಕೂಡ ಕಾಮತೃಷೆಯನ್ನು ತೀರಿಸಿಕೊಂಡಿದ್ದ. ಇದರಿಂದ ಗಾಬರಿಗೊಳಗಾದ ಮಹಿಳೆ ಅರೆನಗ್ನ ಸ್ಥಿತಿಯಲ್ಲಿ ಗುಡಿಸಲಿನಿಂದ ಕಾಲ್ಕಿತ್ತಿದ್ದಾಳೆ.

ಇದನ್ನೂ ಓದಿ:ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ.. ಸಂತ್ರಸ್ತ ಯುವಕನ ಆರೋಪ ಏನು..?

ಅಲ್ಲಿಂದ ಹಳ್ಳಿಯ ಕಡೆಗೆ ಓಡಲು ಪ್ರಾರಂಭಿಸಿದಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನೋಡಿದ್ದಾಳೆ. ಅವರ ಸಹಾಯದಿಂದ ಮಹಿಳೆ ಬದುಕಿಕೊಂಡಿದ್ದಾಳೆ ಎಂದು ವರದಿಯಾಗಿದೆ. ವರದಿಗಳ ಪ್ರಕರ ಒಂದೂವರೆ ಕಿಲೋ ಮೀಟರ್ ದೂರ ಅರೆನಗ್ನವಾಗಿ ಓಡಿ ಬಂದು ಜೀವ ಉಳಿಸಿಕೊಂಡಿದ್ದಾಳೆ ಎನ್ನಲಾಗಿದೆ.

Advertisment

ಇದನ್ನೂ ಓದಿ:ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment