newsfirstkannada.com

ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?

Share :

Published May 10, 2024 at 9:03pm

  ಮಡದಿ ಮಾಡಿಕೊಳ್ಳಬೇಕು ಅಂದುಕೊಂಡವಳನ್ನೇ ಕೊಲೆ ಮಾಡಿದ ಪ್ರಕಾಶ

  ಹತ್ತನೇ ತರಗತಿ ಪಾಸಾದ ಖುಷಿಯಲ್ಲಿ ಮನೆಗೆ ಬಂದಿದ್ದ ಬಾಲಕಿ ಮೀನಾ

  ಮದುವೆ ಆಗ್ತೀನಿ ಅಂತ ಮಧ್ಯಾಹ್ನ ರಿಂಗ್ ಹಾಕಿದವನಿಂದಲೇ ಬಾಲಕಿ ಹತ್ಯೆ

ಮಡಿಕೇರಿ: ನಿರಾಸೆ, ಹತಾಶೆ ಮತ್ತು ಅನುಮಾನ ಅನ್ನೋದು ಮನುಷ್ಯನನ್ನ ಯಾವ ಮಟ್ಟಕ್ಕಾದ್ರೂ ಇಳಿಸಿ ಬಿಡುತ್ತೆ. ಆಕೆಯಿನ್ನು ಅರಳಿ ಬಾಳಬೇಕಾಗಿದ್ದ ಹುಡುಗಿ. ಹತ್ತನೇ ತರಗತಿ ಪಾಸಾದ ಖುಷಿಯಲ್ಲಿ ಮನೆಗೆ ಬಂದಿದ್ದಳು. ಆದ್ರೆ ಆ ಖುಷಿ ಹೆಚ್ಚೊತ್ತು ಉಳಿಯಲೇ ಇಲ್ಲ. ಮನೆಗೆ ನುಗ್ಗಿ ಬಂದಿದ್ದ ರಾಕ್ಷಸ ಹುಡುಗಿ ರುಂಡವನ್ನ ಕತ್ತರಿಸಿ ಹಾಕಿದ್ದ. ಸಂತೋಷದಿಂದ ಮನೆಯಲ್ಲಿ ಕ್ಷಣಾರ್ಧದಲ್ಲೇ ಸೂತಕದ ಛಾಯೆ ಆವರಿಸಿತ್ತು. ಪಾಪಿಯ ಘನ ಘೋರ ಕೃತ್ಯಕ್ಕೆ ಜೀವನ ಖುಷಿಯನ್ನೆ ಉಣದ ಬಾಲಕಿ ಪರಲೋಕ ಸೇರಿದ್ದಾಳೆ.

ಹಚ್ಚ ಹಸಿರಿನ ಕಾಡಿನ ಮಧ್ಯದಲ್ಲಿ ಹರಿಯಿತು ಕೆಂಪು ರಕ್ತ

ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕು ಕುಂಬಾರಗಡಿ ಗ್ರಾಮ. ಅಲ್ಲೊಂದು ಇಲ್ಲೊಂದು ಮನೆ ಇರೋ ಊರಿದು. ಹಸಿರಿನ ಹೊದಿಕೆ ಹೊದ್ದಿಕೊಂಡಿರುವ ಪುಟ್ಟ ಊರು. ಆದ್ರೆ ಇಂಥಾ ಊರಲ್ಲೀ ಘನಘೋರ ಕೃತ್ಯವೊಂದು ನಡೆದು ಹೋಗಿದೆ. ಬಾಳಿ ಬದುಕಬೇಕಿದ್ದ ಬಾಲಕಿಯೊಬ್ಬಳ ರುಂಡವನ್ನೇ ಅದೊಬ್ಬ ಪಾಪಿ ಕತ್ತರಿಸಿ ಹಾಕಿದ್ದ. ಊರಿಗೆ ಊರೇ ಈ ಕೃತ್ಯ ಕಂಡು ಬೆಚ್ಚಿ ಬಿದ್ದಿದೆ. ಹೌದು, ನೆಮ್ಮದಿಯಾಗಿದ್ದ ಗ್ರಾಮದಲ್ಲಿ ಹಿಂದೆಂದೂ ಇಂಥಾ ಕೃತ್ಯ ನಡೆದಿರಲಿಲ್ಲ. ಆದ್ರೀಗ ಕಾಡಿನ ಮಧ್ಯದಲ್ಲಿ ಹರಿದ ಕೆಂಪು ರಕ್ತ ಕಂಡು ಗ್ರಾಮದ ಜನ ಕೂಡ ಶಾಕ್ ಆಗಿದ್ದಾರೆ. ನಾವೆಂದು ಇಂಥಾ ಘಟನೆ ನೋಡಿಯೇ ಇರಲಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಡಗು ಬಾಲಕಿ ಬರ್ಬರ ಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್‌.. ರುಂಡ ಹುಡುಕಾಡಿದ ಪೊಲೀಸರು ಹೇಳಿದ್ದೇನು?

ರುಂಡ ಎಲ್ಲಿದೆ ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಕೊಲೆಯಾಗಿರುವ ಹುಡುಗಿ ಎಸ್​ಎಸ್​ಎಲ್​ಸಿ ಓದ್ತಿದ್ಳು. ಒಳ್ಳೆ ಮಾರ್ಕ್ಸ್​ನೊಂದಿಗೆ ಪಾಸ್ ಕೂಡ ಆಗಿದ್ಳು. ಗುರುವಾರ ಬಂದ ರಿಸಲ್ಟ್ ನೋಡಿ ಖುಷಿ ಪಟ್ಟಿದ್ಳು. ಆದ್ರೆ ಆ ಖುಷಿಯನ್ನ ಈ ಪಾಪಿ ಹೆಚ್ಚೊತ್ತು ಉಳಿಯೋದಕ್ಕೆ ಬಿಟ್ಟಿರಲಿಲ್ಲ. ಪರೀಕ್ಷೆ ಪಾಸಾದ ಖುಷಿಯಲ್ಲಿದ್ದ ಬಾಲಕಿ ರುಂಡವನ್ನೇ ಕತ್ತರಿಸಿ ಪ್ರಾಣ ತೆಗೆದು ಬಿಟ್ಟಿದ್ದಾನೆ. ಅಷ್ಟಕ್ಕೂ ಇಲ್ಲಿ ಕೊಲೆಯಾಗಿರುವ ಬಾಲಕಿ ಹೆಸರು ಮೀನಾ ಅಂತ. ಜಸ್ಟ್ 16 ವರ್ಷದ ಬಾಲಕಿ ಈಕೆ. ಇನ್ನೂ ಈ ಮೀನಾಳ ಹತ್ಯೆ ಮಾಡಿದವನ ಹೆಸರು ಪ್ರಕಾಶ್ ಅಲಿಯಾಸ್ ಪಾಪು ಅಂತ.

ಈ ಮುಖಕ್ಕೆ ಪಾಪು ಅನ್ನೋ ಹೆಸರು ಬೇರೆ ಕೇಡು. ಪಾಪು ಮಾಡಿದ ಪಾಪ ಕೃತ್ಯಕ್ಕೆ ಹದಿ ಹರೆಯದ ಬಾಲಕಿಯ ಉಸಿರು ನಿಂತಿದೆ. ಅಷ್ಟಕ್ಕೂ ಈ ಪಾಪಿ ಮೀನಾಳ ಜೀವ ತೆಗೆಯೋದಕ್ಕೆ ಕಾರಣವಾಗಿದ್ದು ಮೀನಾಳನ್ನ ಮದುವೆಯಾಗ್ಬೇಕು ಅನ್ನೋ ದುರಾಸೆ. ಈ ಪಾಪು ಅಲಿಯಾಸ್ ಪ್ರಕಾಶ್​ಗೆ 34 ವರ್ಷ. ಆದ್ರೆ ಮೀನಾಳಿಗೆ 16 ವರ್ಷ. ಆದ್ರೂ ಮೀನಾಳನ್ನೆ ಮದುವೆಯಾಗ್ಬೇಕು ಅಂತ ಪ್ರಕಾಶ್ ಅಂದುಕೊಂಡಿದ್ದ. ಆದ್ರೀಗ ಮಡದಿ ಮಾಡಿಕೊಳ್ಳಬೇಕು ಅಂದುಕೊಂಡವಳ್ಳನ್ನೆ ಪ್ರಕಾಶ್ ಮರ್ಡರ್ ಮಾಡಿದ್ದಾನೆ. ಶಾಲೆಗೆ ಹೋಗ್ತಿದ್ದ ಮೀನಾಳನ್ನ ಇಷ್ಟ ಪಟ್ಟಿದ್ದ ಪ್ರಕಾಶ್, ಆಕೆಯನ್ನೇ ಮದುವೆಯಾಗ್ಬೇಕು ಅನ್ನೋ ಆಸೆ ಕಂಡಿದ್ದ. ಆದ್ರೆ, ಹುಡುಗಿಗೆ ಪ್ರೀತಿ ಗೀತಿ ಇಷ್ಟ ಇರಲಿಲ್ವಂತೆ. ಆದ್ರೂ ಮೀನಾಳ ಬೆನ್ನು ಬಿಡದ ಪ್ರಕಾಶ್ ಪ್ರೀತಿ ಮಾಡು ಪ್ರೀತಿ ಮಾಡು ಅಂತ ಪೀಡಿಸಿದ್ನಂತೆ. ಇಷ್ಟೆಲ್ಲಾ ಆದ್ಮೇಲೆ ಒಲ್ಲದ ಮನಸ್ಸಿನಿಂದಲೇ ಮೀನಾ ಪ್ರಕಾಶ್ ಪ್ರೀತಿ ಒಪ್ಪಿಕೊಂಡಿದ್ಳಂತೆ. ಆದ್ರೆ ಇಷ್ಟಕ್ಕೆ ಸುಮನ್ನಾಗದ ಈ ಪ್ರಕಾಶ್​ ಮೀನಾ ಮನೆಗೆ ಬಂದು ಮದುವೆ ಮಾಡಿ ಕೊಡುವಂತೆ ಕೇಳಿದ್ದಾನೆ. ತನಗೆ ಮೀನಾಳನ್ನ ಕೊಡದೇ ಇದ್ರೆ ಗುಂಡು ಹಾರಿಸೋದಾಗಿ ಭಯ ಹುಟ್ಟಿಸಿದ್ದಾನೆ ಅಂತೆ. ಅತ್ತ ಮೀನಾ ಮನೆಯವರು ಮಗಳು ಇನ್ನೂ ಚಿಕ್ಕವಳು ಮದುವೆ ವಯಸ್ಸಿಗೆ ಬಂದ್ಮೇಲೆ ಮದುವೆ ಮಾಡಿ ಕೊಡ್ತೀವಿ ಅಂತ ಹೇಳಿದ್ದಾರೆ. ಆದ್ರೆ ಈ ಪಾಪಿ ಪ್ರಕಾಶ್ ಕೇಳಿಲ್ಲ.

ಆದ್ರೆ ಒಂದು ದಿನ ಏಕಾಏಕಿ ಮೀನಾ ಮನೆಗೆ ಬಂದಿದ್ದ ಪ್ರಕಾಶ್ ನಿಶ್ಚಿತಾರ್ಥ ಮಾಡಿಕೊಡುವಂತೆ ಹೇಳಿದ್ದಾನೆ. ಒಂದ್ವೆಳೆ ನಿಶ್ಚಿತಾರ್ಥ ಮಾಡಿಸದೇ ಇದ್ರೆ ಅವಳನ್ನ ಬಿಡೋದಿಲ್ಲ. ಅಂತ ಮೀನಾ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನಂತೆ. ಮಗಳಿಗೆ ಏನ್ ಮಾಡಿ ಬಿಡ್ತಾನೋ ಅನ್ನೋ ಭಯಕ್ಕೆ ಬಿದ್ದ ಮೀನಾ ಪೋಷಕರು ಕೊನೆಗೆ ನಿಶ್ಚಿತಾರ್ಥ ಮಾಡೋದಕ್ಕೆ ಒಪ್ಪಿದ್ದಾರೆ. ಹೌದು, ಪಾಪಿ ಪ್ರಕಾಶ್ ಬೆದರಿಕೆಗೆ ಬೆಚ್ಚಿ ಬಿದ್ದಿದ್ದ ಮೀನಾ ಕುಟುಂಬ ನಿಶ್ಚಿತಾರ್ಥಕ್ಕೆ ಒಪ್ಪಿಕೊಂಡಿತ್ತು. ಅದ್ರಂತೆ ಗುರುವಾರ ಮೀನಾ ಮತ್ತು ಪ್ರಕಾಶ್​ ನಿಶ್ಚಿತಾರ್ಥ ಕೂಡ ನಡೆದಿತ್ತು. ಅಂದುಕೊಂಡಂತೆ ಎರಡು ಕುಟುಂಬದವರು ಸಮ್ಮುಖದಲ್ಲೇ ಮೀನಾ ಮನೆಯಲ್ಲೇ ಎಂಗೇಜ್ಮೆಂಟ್ ನೇರವೇರಿತ್ತು. ಈ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಎಲ್ಲ ಖುಷಿ ಪಟ್ಟಿದ್ದಾರೆ. ಆದ್ರೆ ಎಂಗೆಜ್ಮೆಂಟ್ ಮುಗಿಸಿ ಮನೆಗೆ ಹೋಗಿದ್ದ ಪ್ರಕಾಶ್ ಸಂಜೆ ವಾಪಸ್ ಮೀನಾ ಮನೆಗೆ ಬಂದಿದ್ದಾನೆ. ಅವನಿಗೆ ಅದೇನಾಗಿತ್ತೋ ಗೊತ್ತಿಲ್ಲ. ಏಕಾಏಕಿ ಮೀನಾ ಮನೆಗೆ ನುಗ್ಗಿದವನೇ ಮೀನಾ ಮೇಲೆ ಹಲ್ಲೆ ಮಾಡಿ ಆಕೆಯನ್ನ ಕಾಡಿನ ಮಧ್ಯದಲ್ಲಿ ಎಳೆದುಕೊಂಡು ಹೋಗಿ ಮೀನಾಳ ರುಂಡ ಕತ್ತರಿಸಿ ಹತ್ಯೆ ಮಾಡಿದ್ದಾನೆ.

ಮನೆಯವರು ಒಪ್ಪಿದ್ರು. ಅಂದುಕೊಂಡಂತೆ ನಿಶ್ಚಿತಾರ್ಥವೂ ನಡೆದಿತ್ತು. ಆದ್ರೆ ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋದ ಪ್ರಕಾಶ್ ಬುದ್ದಿಗೆ ಅದೇನು ಮಂಕು ಬೂದಿ ಬಡೆದಿತ್ತೋ ಗೊತ್ತಿಲ್ಲ. ಮನೆಯಿಂದ ವಾಪಸ್​ ಮೀನಾ ಮನೆಗೆ ಬಂದಿದ್ದಾನೆ. ಮೀನಾ ಜೊತೆ ಜಗಳ ಮಾಡಿದ್ದಾನೆ. ಹಲ್ಲೆ ಮಾಡಿದ್ದಾನೆ. ತಡೆಯೋಕ್ಕೆ ಬಂದ ಮೀನಾ ತಾಯಿಗೂ ಮಚ್ಚಿನಿಂದ ಹೊಡೆದಿದ್ದಾನೆ. ಕೊನೆಗೆ ಮೀನಾಳನ್ನ ಮನೆಯಿಂದ ಹೊರಗೆ ಗುಡ್ಡದಲ್ಲಿ ಎಳೆದುಕೊಂಡು ಹೋಗಿ ಆಕೆ ಕತ್ತನ್ನ ಕತ್ತರಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆ ರುಂಡವನ್ನ ಕೈಯಲ್ಲಿ ಹಿಡಿದುಕೊಂಡು ಪರಾರಿಯಾಗಿ ಬಿಟ್ಟಿದ್ದಾನೆ. ಮೀನಾ ಕೇವಲ 16 ವರ್ಷದ ಬಾಲಕಿ. ಆದ್ರೆ ಈ ಬಾಲಕಿಗೆ 34 ರ ಪ್ರಕಾಶ್​ ಭೂತವಾಗಿ ಕಾಡಿದ್ದ. ಪ್ರಕಾಶ್ ಸರಿಯಿಲ್ಲ ಅಂತ ಗೊತ್ತಿದ್ರೂ ಮೀನಾ ಮನೆಯವರು ಮದುವೆಗೆ ಒಪ್ಪಿದ್ರು, ಎಂಗೇಜ್ಮೆಂಟ್ ಕೂಡ ಮಾಡಿದ್ರು. ಮದುವೆ ಆಗ್ತೀನಿ ಅಂತ ಮಧ್ಯಾಹ್ನ ರಿಂಗ್ ಹಾಕಿದವ ಸಂಜೆ ಆಕೆಯ ಕತ್ತು ಕಡಿದು ತಲೆಯನ್ನೇ ಹೊತ್ತೊಯ್ದಬಿಟ್ಟಿದ್ದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?

https://newsfirstlive.com/wp-content/uploads/2024/05/mdk3.jpg

Load More