ಸಿಲಿಕಾನ್ ಸಿಟಿ ಮಂದಿಗೆ ತಲೆನೋವಾದ ಕಾಯಿಲೆ
ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಮದ್ರಾಸ್ ಐ ಕೇಸ್
ಬಿಸಿಲು, ಮಳೆಯಿಂದಲೇ ಕಣ್ಣಿನ ಸಮಸ್ಯೆ ಹೆಚ್ಚಳ..!
ಬೆಂಗಳೂರು: ಮಳೆಗಾಲ ಬಂತಂದ್ರೆ ಶೀತ, ಕೆಮ್ಮು, ಜ್ವರದ ಸಮಸ್ಯೆ ಕಾಡುವುದು ಕಾಮನ್. ಆದ್ರೆ ಈ ಸಮಸ್ಯೆಗಳ ಜೊತೆಗೆ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಕಾಯಿಲೆ ಬಿಟ್ಟು ಬಿಡದಂತೆ ಕಾಡುತ್ತಿದೆ. ಈ ಲಕ್ಷಣಗಳು ನಿಮ್ಮಲ್ಲೂ ಕಂಡು ಬಂದ್ರೆ ನಿರ್ಲಕ್ಷ್ಯ ಬೇಡ. ವೈದ್ಯರ ಸಲಹೆ ಪಡೆಯಿರಿ.
ಆಗಾಗ ಕಣ್ಣುರಿ ಬರುತ್ತಿದೆಯೇ? ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆಯೇ? ಸುಖಾ ಸುಮ್ಮನೆ ಕಣ್ಣು ಕೆಂಪಾಗುತ್ತಿದೆಯೇ? ಹಾಗಿದ್ರೆ ನಿರ್ಲಕ್ಷ್ಯ ಮಾಡಬೇಡಿ. ಹೌದು, ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಾದ ಮಿಂಟೋ, ನಾರಾಯಣ ನೇತ್ರಾಲಯ, ಡಾ. ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆಯಂತೆ. ಹೀಗೆ ಜನ ಆಸ್ಪತ್ರೆಯತ್ತ ಮುಖ ಮಾಡಲು ಅದೊಂದು ಕಾಯಿಲೆ ಕಾರಣ.
ಬಿಸಿಲು-ಮಳೆ, ಮೋಡ ಕವಿದ ವಾತಾವರಣದಿಂದಾಗಿ ಮದ್ರಾಸ್ ಐ ಪ್ರಕರಣ ಹೆಚ್ಚಳವಾಗುತ್ತಿದೆ. ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಗೆ ಜನ ನೇತ್ರಾಲಯಗಳತ್ತ ಬರುತ್ತಿದ್ದಾರೆ. ಹೀಗಾಗಿ, ನಗರದ ಆಸ್ಪತ್ರೆಗಳಿಗೆ ಶೇ. 10ರಷ್ಟು ಹೊರರೋಗಿಗಳು ನಿತ್ಯ ಭೇಟಿ ನೀಡುತ್ತಲೇ ಇದ್ದಾರೆ.
ಕಳೆದೊಂದು ತಿಂಗಳಿಂದ ನಗರದಲ್ಲಿ ಬಿಸಿಲು-ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿದೆ. ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದರೆ, ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇದೆ. ಹೀಗಾಗಿ ಮದ್ರಾಸ್ ಐ ಪ್ರಕರಣ ಹೆಚ್ಚಾಗಿದೆ.
‘ಮದ್ರಾಸ್ ಐ’ ಲಕ್ಷಣಗಳು
ಕಣ್ಣುಗುಡ್ಡೆಯಲ್ಲಿ ಊತ ಬರುವುದು, ಕಣ್ಣಿನ ರೆಪ್ಪೆ ಅಂಟಿಕೊಳ್ಳುವುದು, ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು. ಕಣ್ಣಲ್ಲಿ ಅತಿಯಾಗಿ ನೀರು ಬರುವುದು, ಕಣ್ಣಲ್ಲಿ ಅತಿಯಾಗಿ ತುರಿಕೆ ಬರುವುದು ಮದ್ರಾಸ್ ಐನ ಲಕ್ಷಣಗಳಾಗಿದೆ.
ಮಿಂಟೋ ಆಸ್ಪತ್ರೆಗೆ ಪ್ರತಿನಿತ್ಯ 400 ರಿಂದ 600 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ 90 ರಿಂದ 100 ರೋಗಿಗಳಲ್ಲಿ ಈ ಸಮಸ್ಯೆ ದೃಢವಾಗಿದೆ. ಇನ್ನು ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ ಸರಾಸರಿ 20 ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ, ಜನ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ