/newsfirstlive-kannada/media/post_attachments/wp-content/uploads/2024/09/TRAIN_ACCIDENT.jpg)
ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಮಗಧ್ ಎಕ್ಸ್​​ಪ್ರೆಸ್ ರೈಲಿನ ಬೋಗಿಗಳ ಜೋಡಣೆ ಕಟ್ ಆಗಿದ್ದು ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥ್ ಪುರ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಮಗಧ್ ಎಕ್ಸ್‌ಪ್ರೆಸ್ 20802 ನಂಬರಿನ ರೈಲು ನವದೆಹಲಿಯಿಂದ ಪಾಟ್ನಾಗೆ ತೆರಳುತ್ತಿತ್ತು. ಈ ವೇಳೆ ಟ್ರೈನ್ ಚಲಿಸುತ್ತಿರುವಾಗಲೇ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವಿನ ಜೋಡೆಣೆ ಕಟ್ ಆದ ಕಾರಣ ಕೆಲ ಸ್ಲೀಪರ್​ ಬೋಗಿಗಳನ್ನ ಬಿಟ್ಟು ಹಾಗೇ ಸ್ವಲ್ಪ ದೂರ ಹೋಗಿದೆ. ಟ್ರೈನ್​​ನಲ್ಲಿ ಸುಮಾರು 1000 ಜನರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗಣೇಶ ಚತುರ್ಥಿಯಂದೇ ರೈಲು ಅಪಘಾತ.. ಹಳಿ ತಪ್ಪಿದ ಪ್ರಯಾಣಿಕರಿದ್ದ ಎರಡು ಬೋಗಿಗಳು
Aaj ek or train accident. 20802 Magadh express. #PMOIndia#ashwinivaishnaw. pic.twitter.com/lyd5O08fch
— Hari om kumar (@Hariomk8677)
Aaj ek or train accident. 20802 Magadh express. #PMOIndia#ashwinivaishnaw. pic.twitter.com/lyd5O08fch
— Hari om kumar (@Hariomk8677) September 8, 2024
">September 8, 2024
ವೇಗದಲ್ಲೇ ಬೋಗಿಗಳನ್ನು ಬಿಟ್ಟು ಹೋದರು ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಯಾವುದು ಪ್ರಾಣ ಹಾನಿಯಂತ ಘಟನೆಗಳು ನಡೆದಿಲ್ಲವೆಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಟ್ರೈನ್​ನ​ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವೆ ಜೋಡಿಸಿದ್ದ ಪ್ರೇಶರ್ ಪೈಪ್​ ಪೋಲಿಂಗ್ ಕಟ್ ಆಗಿದ್ದರಿಂದ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಮಾಹಿತಿ ತಿಳಿದು ರೈಲ್ವೆ ಪೊಲೀಸರು, ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ