ಟ್ರೈನ್ನಲ್ಲಿ ಸುಮಾರು ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು
ಸ್ಲೀಪರ್ ಬೋಗಿಗಳನ್ನು ಬಿಟ್ಟು ಹೋಗಿದ್ದ ಮಗಧ್ ಎಕ್ಸ್‌ಪ್ರೆಸ್
ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಪೊಲೀಸರು ಮತ್ತು ಅಧಿಕಾರಿಗಳು
ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಮಗಧ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ಜೋಡಣೆ ಕಟ್ ಆಗಿದ್ದು ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥ್ ಪುರ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಮಗಧ್ ಎಕ್ಸ್‌ಪ್ರೆಸ್ 20802 ನಂಬರಿನ ರೈಲು ನವದೆಹಲಿಯಿಂದ ಪಾಟ್ನಾಗೆ ತೆರಳುತ್ತಿತ್ತು. ಈ ವೇಳೆ ಟ್ರೈನ್ ಚಲಿಸುತ್ತಿರುವಾಗಲೇ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವಿನ ಜೋಡೆಣೆ ಕಟ್ ಆದ ಕಾರಣ ಕೆಲ ಸ್ಲೀಪರ್ ಬೋಗಿಗಳನ್ನ ಬಿಟ್ಟು ಹಾಗೇ ಸ್ವಲ್ಪ ದೂರ ಹೋಗಿದೆ. ಟ್ರೈನ್ನಲ್ಲಿ ಸುಮಾರು 1000 ಜನರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗಣೇಶ ಚತುರ್ಥಿಯಂದೇ ರೈಲು ಅಪಘಾತ.. ಹಳಿ ತಪ್ಪಿದ ಪ್ರಯಾಣಿಕರಿದ್ದ ಎರಡು ಬೋಗಿಗಳು
Aaj ek or train accident. 20802 Magadh express. #PMOIndia #ashwinivaishnaw. pic.twitter.com/lyd5O08fch
— Hari om kumar (@Hariomk8677) September 8, 2024
ವೇಗದಲ್ಲೇ ಬೋಗಿಗಳನ್ನು ಬಿಟ್ಟು ಹೋದರು ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಯಾವುದು ಪ್ರಾಣ ಹಾನಿಯಂತ ಘಟನೆಗಳು ನಡೆದಿಲ್ಲವೆಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಟ್ರೈನ್ನ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವೆ ಜೋಡಿಸಿದ್ದ ಪ್ರೇಶರ್ ಪೈಪ್ ಪೋಲಿಂಗ್ ಕಟ್ ಆಗಿದ್ದರಿಂದ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಮಾಹಿತಿ ತಿಳಿದು ರೈಲ್ವೆ ಪೊಲೀಸರು, ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ