Advertisment

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಮಾರಸ್ವಾಮಿ ಆಣೆ ಪ್ರಮಾಣ ಮಾಡಲಿ -ಸವಾಲ್ ಹಾಕಿದ ಹಳೇ ಸ್ನೇಹಿತ

author-image
Ganesh
Updated On
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಮಾರಸ್ವಾಮಿ ಆಣೆ ಪ್ರಮಾಣ ಮಾಡಲಿ -ಸವಾಲ್ ಹಾಕಿದ ಹಳೇ ಸ್ನೇಹಿತ
Advertisment
  • ಸಿಎಂ ಆಗಿದ್ದಾಗ ಸಹಿ ಹಾಕಲು ಕುಮಾರಸ್ವಾಮಿ ಲಂಚ ಆರೋಪ
  • ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಮಾಣಕ್ಕೆ ಸವಾಲ್​
  • ಏಕಾಏಕಿ ಬಾಲಕೃಷ್ಣ ಈ ಸವಾಲು ಹಾಕಲು ಕಾರಣವೂ ನಿಗೂಢ

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಹೆಚ್​.ಸಿ ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಆಗಿದ್ದಾಗ ಕಡತಗಳಿಗೆ ಸಹಿ ಹಾಕಲು ಹಣ ಪಡೆಯುತ್ತಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisment

ಈ ಬಗ್ಗೆ ಸುಳ್ಳು ಅನ್ನೋದಾದ್ರೆ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರಲಿ. ಕರ್ಪೂರ ಹಚ್ಚಿ ಪ್ರಮಾಣ ಮಾಡ್ತೇನೆ. ಹಣ ಪಡೆಯದೇ ಸಹಿ ಹಾಕಿದ್ದೇನೆ ಅಂತ ಅವ್ರು ಬೇಕಿದ್ರೆ ಪ್ರಮಾಣ ಮಾಡಲಿ ಅಂತ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಈ ರೀತಿ ಉಡಾಫೆ ಮಾತುಗಳನ್ನು ನಿಲ್ಲಿಸಬೇಕು. ಬೇರೆಯವರ ವಿರುದ್ಧ ಸುಮ್ಮನೇ ಆರೋಪ ಮಾಡುವುದು ಸೂಕ್ತವಲ್ಲ. ಸಾಕ್ಷಿ ಸಮೇತ ಕುಮಾರಸ್ವಾಮಿ ಹಣ ಪಡೆದ ಬಗ್ಗೆ ದಾಖಲೆ ನೀಡಲು ಸಿದ್ಧನಿದ್ದೇನೆ ಅಂತ ಬಾಲಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ:ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲು; ಎಡಿಜಿಪಿ ಚಂದ್ರಶೇಖರ್​ ಅವರಿಂದ ಕಂಪ್ಲೇಂಟ್

publive-image

ತನಿಖೆ ನಡೆಸುವಂಥದ್ದು ಏನೂ ಇಲ್ಲ. ನಾನು ಕೆಲವೊಂದು ವಿಚಾರಗಳನ್ನು ಅವರಿಗೆ ಹೇಳುತ್ತೇನೆ. ಅವರು ಬಂದು ಒಂದು ಕೆಲಸ ಮಾಡಲಿ. ನಾನು ಕೂಡ ಬರ್ತೀನಿ. ಯಾವುದೇ ಕಡತಕ್ಕೆ ದುಡ್ಡನ್ನ ತೆಗೆದುಕೊಳ್ಳದೇ ಸಹಿ ಮಾಡಿದ್ದೀನಿ ಎಂದು ಅವರಾಗಲಿ, ಅವರ ಪರವಾಗಿ ಯಾರಾದರೂ ಬಂದು ಪ್ರಮಾಣ ಮಾಡ್ತಾರಾ ಕೇಳಿ? ನಾನು ಅವರು ದುಡ್ಡು ತೆಗೆದುಕೊಂಡು ಸಹಿ ಮಾಡಿದ್ದಾರೆ ಎಂದು ಪ್ರಮಾಣ ಮಾಡುತ್ತೇನೆ-ಹೆಚ್​​.ಸಿ. ಬಾಲಕೃಷ್ಣ, ಕಾಂಗ್ರೆಸ್​​ ಶಾಸಕ

publive-image

Advertisment

ಕುಮಾರಸ್ವಾಮಿ ಅವರು ಸುಮ್ಮನೆ ಉಡಾಫೆ ಮಾತುಗಳನ್ನು ಆಡೋದು ಬೇಡ. ಚಾಮುಂಡೇಶ್ವರಿ ಮುಂದೆ ಬಂದು ಪ್ರಮಾಣ ಮಾಡಲಿ. ಇವರು ದುಡ್ಡು ತೆಗೆದುಕೊಂಡು ಮಾಡಿದ್ದಾರೆ ಎಂದು ನಾನು ಕರ್ಪೂರ ಹಚ್ಚುತ್ತ್ತೀನಿ. ಬೇರೆಯವರ ಮೇಲೆ ಆರೋಪ ಹೊರಿಸೋದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ. ಅವರು ಮಾಡಿರೋದನ್ನ ಸಾಕ್ಷಿ ಸಮೇತ ಹೇಳು ಅಂದ್ರೆ ಹೇಳ್ತೇವೆ ಅಂತ ಚಾಲೆಂಜ್​​ ಮಾಡಿದ್ದಾರೆ. ಸದ್ಯ ಬಾಲಕೃಷ್ಣ ಹಾಕಿದ ಈ ಸವಾಲ್​ಗೆ ಹೆಚ್​ಡಿಕೆ ಕಡೆಯಿಂದ ಬರೋ ಜವಾಬ್​ ಏನು ಅನ್ನೋದು ಕುತೂಹಲ. ಅಂದ್ಹಾಗೆ, ಏಕಾಏಕಿ ಬಾಲಕೃಷ್ಣ ಈ ಸವಾಲು ಹಾಕಲು ಕಾರಣವೂ ನಿಗೂಢ.

ಇದನ್ನೂ ಓದಿ:50 ಕೋಟಿ ಸುಲಿಗೆ ಆರೋಪ ಕೇಸ್​​; ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment