newsfirstkannada.com

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಸಿಂಹದ್ವಾರದ ಫೋಟೋ ಬಿಡುಗಡೆ; ಏನಿದರ ವಿಶೇಷ?

Share :

Published January 4, 2024 at 7:48pm

Update January 4, 2024 at 7:49pm

    ರಾಮ ಮಂದಿರದ ಪೂರ್ವ ದಿಕ್ಕಿನ ದ್ವಾರಕ್ಕೆ ಸಿಂಹ ದ್ವಾರ ಎಂದು ನಾಮಕರಣ

    ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ

    ಸಿಂಹ ದ್ವಾರದ ಮೆಟ್ಟಿಲುಗಳ ಎರಡು ಕಡೆ 2 ಸಿಂಹದ ಮೂರ್ತಿ ನಿರ್ಮಾಣ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಉದ್ಘಾಟನೆಯ ಸುವರ್ಣ ಕ್ಷಣಗಳು ಹತ್ತಿರವಾಗುತ್ತಿದೆ. ಜನವರಿ 22ರ ಆ ಶುಭ ಗಳಿಗೆಗೆ ಕೋಟ್ಯಾಂತರ ರಾಮನ ಭಕ್ತರು ಬೆರಗು ಕಣ್ಣುಗಳಿಂದ ಕಾಯುತ್ತಿದ್ದಾರೆ.

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗ್ತಿದೆ. ಈ ಸಂಭ್ರಮದ ಮಧ್ಯೆ ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಮಂದಿರದ ಲೇಟೆಸ್ಟ್ ಫೋಟೋವೊಂದನ್ನು ರಿಲೀಸ್ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರದ ಸಿಂಹ ದ್ವಾರ, ರಾಮ ಮಂದಿರದ ಪೂರ್ವ ದಿಕ್ಕಿನ ಮೆಟ್ಟಿಲುಗಳ ಪೋಟೋ ರಿಲೀಸ್​ ಮಾಡಲಾಗಿದೆ.

ಸಿಂಹ ದ್ವಾರದ ಮೆಟ್ಟಿಲುಗಳ ಎರಡು ಕಡೆ ಎರಡು ಸಿಂಹದ ಮೂರ್ತಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಎರಡು ಕಡೆ ಎರಡು ಆನೆಯ ಮೂರ್ತಿ ನಿರ್ಮಾಣ ಮಾಡಲಾಗಿದೆ. ಪೂರ್ವ ದಿಕ್ಕಿನ ಮೆಟ್ಟಿಲು ಹತ್ತಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೂರ್ವ ದಿಕ್ಕಿನ ಮೊದಲ ಗೋಪುರ ಹಾಗೂ ಗೋಪುರದ ಮೇಲ್ಬಾಗದಲ್ಲಿ ಕಳಸ ಕೆತ್ತನೆಯ ಕೆಲಸ ಪೂರ್ಣಗೊಂಡಿದೆ. ಮಂದಿರದ ಪೂರ್ವ ದಿಕ್ಕಿನ ದ್ವಾರಕ್ಕೆ ಸಿಂಹ ದ್ವಾರ ಎಂದು ನಾಮಕರಣ ಮಾಡಲು ಸಿದ್ದತೆ ನಡೆಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಸಿಂಹದ್ವಾರದ ಫೋಟೋ ಬಿಡುಗಡೆ; ಏನಿದರ ವಿಶೇಷ?

https://newsfirstlive.com/wp-content/uploads/2024/01/shri-rama.jpg

Load More