ಅಮ್ಮನಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟ ಕುಂಭ ಮೇಳ ಸುಂದರಿ ಮೊನಾಲಿಸಾ; ಏನದು?

author-image
Veena Gangani
Updated On
ಅಮ್ಮನಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟ ಕುಂಭ ಮೇಳ ಸುಂದರಿ ಮೊನಾಲಿಸಾ; ಏನದು?
Advertisment
  • ಈಕೆಯ ಸೌಂದರ್ಯ, ಕಣ್ಣೋಟಕ್ಕೆ ಫಿದಾ ಆದ್ರೂ ನೆಟ್ಟಿಗರು
  • ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ
  • ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅಮ್ಮನಿಗೆ ಕೊಟ್ಟ ಗಿಫ್ಟ್​ ಏನು?

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ಸಖತ್​ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?

ಇದೇ ಹೊತ್ತಲ್ಲಿ ಮೊನಾಲಿಸಾ ತಮ್ಮ ಅಮ್ಮನಿಗೆ ಉಡುಗೊರೆ ಒಂದನ್ನು ಕೊಟ್ಟಿದ್ದಾರೆ. ಹೌದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್​ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್​ ಬ್ಯುಸಿಯಾಗಿದ್ದಾರೆ.


ಇದರ ಮಧ್ಯೆ ಮೊನಾಲಿಸಾ ತಮ್ಮ ತಾಯಿಗೆ ಚೈನ್ ಒಂದನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ತಾಯಿಗೆ ಸರವನ್ನು ಕೊರಳಿಗೆ ಹಾಕಿ ಸರ್​ಪ್ರೈಸ್​ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಮೊನಾಲಿಸಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊನಾಲಿಸಾ ಶೇರ್ ಮಾಡಿಕೊಂಡ ವಿಡಿಯೋ 7.8 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಈಗಾಲೇ ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾ ಬಾಲಿವುಡ್​ ಸಿನಿಮಾದಲ್ಲಿ ನಟಿಸೋಕೆ ರೆಡಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment