/newsfirstlive-kannada/media/post_attachments/wp-content/uploads/2025/01/MAHA-KUMBH-3.jpg)
ಉತ್ತರ ಪ್ರದೇಶದ ಪ್ರಯಾಗ್ರಾಜ್​ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಅಪರೂಪದ ಮಹಾಕುಂಭಮೇಳಕ್ಕೆ ಚಾಲನೆ ಸಿಕ್ಕಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಎಲ್ಲೆಲ್ಲೂ ಶಿವನಾಮ ಪಠಣೆಯಾಗ್ತಿದೆ.
ಗಂಗಾ ಯಮುನಾ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ಪಾವನರಾಗುತ್ತಿದ್ದಾರೆ. ಇಂದು ಬೆಳಗ್ಗೆ ಸುಮಾರು 60 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ಸ್ನಾನ ಮಾಡಿ ಪಾವನರಾಗಿದ್ದಾರೆ. ಒಟ್ಟು 45 ಕೋಟಿ ಭಕ್ತರು ಕುಂಭ ಮೇಳಗ್ಗೆ ಆಗಮಿಸುವ ನಿರೀಕ್ಷೆ ಇದೆ. ಮಹಾ ಕುಂಭಮೇಳವು ಪ್ರತಿ ಹನ್ನೆರಡು ವರ್ಷಗಳ ನಂತರ ಪ್ರಯಾಗರಾಜ್‌ನಲ್ಲಿ ಮಾತ್ರ ಆಯೋಜಿಸಲಾಗಿದೆ. ಅಲ್ಲದೆ, 144 ವರ್ಷಗಳಲ್ಲಿ ಒಮ್ಮೆ ನಡೆಯೋ ಧಾರ್ಮಿಕ ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ.
ಗಂಗಾಸ್ನಾನ.. ಪುಣ್ಯಸ್ನಾನ
- ಜನವರಿ 13 - ಪೌಶ್ ಪೂರ್ಣಿಮಾ ಸ್ನಾನ
- ಜನವರಿ 15 - ಮಕರ ಸಂಕ್ರಾಂತಿ ಸ್ನಾನ
- ಜನವರಿ 29 - ಮೌನಿ ಅಮವಾಸ್ಯೆ ಸ್ನಾನ
- ಫೆಬ್ರವರಿ 3 - ಬಸಂತ್ ಪಂಚಮಿ ಸ್ನಾನ
- ಫೆಬ್ರವರಿ 12 - ಮಾಘಿ ಪೂರ್ಣಿಮಾ ಸ್ನಾನ
- ಫೆಬ್ರವರಿ 26 - ಮಹಾ ಶಿವರಾತ್ರಿ ಸ್ನಾನ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾ ಕುಂಭ 2025 ರ ಮೊದಲು 45 ನಿಮಿಷಗಳ ಲೇಸರ್ ಶೋವನ್ನ ಉದ್ಘಾಟಿಸಿದ್ರು. 2025 ರ ಮಹಾಕುಂಭಮೇಳಕ್ಕೆ ಐಫೋನ್ ಸಿಇಓ ಸ್ಟೀವ್​ ಜಾಬ್ಸ್​ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಬಂದಿದ್ದಾರೆ. ಕುಂಭಮೇಳಕ್ಕೂ ಮುನ್ನ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ:ಇಂದಿನಿಂದ ಮಹಾಕುಂಭಮೇಳ; ಬರೋಬ್ಬರಿ 40 ಕೋಟಿ ಜನ ಭಾಗಿಯಾಗೋ ನಿರೀಕ್ಷೆ!
ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿರುವ ಮಹಾಕುಂಭಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಒಟ್ಟಾರೆ, ಧಾರ್ಮಿಕ ಕಾರ್ಯಕ್ರಮವು ಆಧ್ಯಾತ್ಮಿಕ ಶುದ್ಧೀಕರಣವನ್ನು ಬಯಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸೋದ್ಯಮ ಸಚಿವಾಲಯ ಇದರ ಹೊಣೆ ಹೊತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ