/newsfirstlive-kannada/media/post_attachments/wp-content/uploads/2025/01/MAHA-KUMBH-4.jpg)
ಮಹಾಕುಂಭ ಹಿಂದೂ ಧರ್ಮದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು. ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಮಕರ ಸಂಕ್ರಾಂತಿಯಂದು ಕೋಟ್ಯಂತರ ಭಕ್ತರು ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡ್ತಾರೆ. ಪುಣ್ಯ ಸ್ನಾನದಿಂದ ಮಾಡಿದ ಪಾಪಗಳು ನಾಶವಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಭಕ್ತರು.
ಮಹಾಕುಂಭ ಸ್ನಾನದ ನಂತರ ಕೆಲವು ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ಯಾವೆಲ್ಲ ವಸ್ತುಗಳನ್ನು ದಾನ ಮಾಡಿದ್ರೆ ಒಳ್ಳೆದಾಗುತ್ತದೆ ಅನ್ನೋ ವಿವರ ಹೀಗಿದೆ..
ಇದನ್ನೂ ಓದಿ: ಮಹಾಕುಂಭದಲ್ಲಿ ಸಾಧ್ವಿ ಹರ್ಷ ರಿಚರಿಯಾ ವಿವಾದ; ಭುಗಿಲೆದ್ದ ಆಕ್ರೋಶ..
ಅನ್ನದಾನ
ಹಿಂದೂ ಧರ್ಮದಲ್ಲಿ ಅನ್ನದಾನ ಮಹಾದಾನ ಎಂದು ಹೇಳಲಾಗುತ್ತದೆ. ಕುಂಭ ಸ್ನಾನದ ನಂತರ ಅನ್ನದಾನ ಮಾಡಬೇಕು. ಇದರಿಂದ ಆಧ್ಯಾತ್ಮಿಕ ತೃಪ್ತಿ ಸಿಗುತ್ತದೆ. ಪೂರ್ವಜರ ಆತ್ಮಕ್ಕೂ ಶಾಂತಿ ಸಿಗುತ್ತದೆ. ಪೂರ್ವಜರ ಆಶೀರ್ವಾದ ಸಿಗಲಿದೆ ಎಂಬ ನಂಬಿಕೆ ಇದೆ.
ವಸ್ತ್ರದಾನ
ಕುಂಭದಲ್ಲಿ ಸ್ನಾನ ಮಾಡಿದ ನಂತರ ಅಗತ್ಯವಿದ್ದವರಿಗೆ ವಸ್ತ್ರ ನೀಡಬೇಕು. ವಸ್ತ್ರದಾನ ಆಧ್ಯಾತ್ಮಿಕವಾಗಿ ಪ್ರಯೋಜನಕಾರಿ. ಬಡವರಿಗೆ ಪರಿಹಾರ ಸಿಗುತ್ತದೆ. ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಸ್ತ್ರಗಳನ್ನು ದಾನ ಮಾಡಬೇಕು.
ಗಂಗಾಜಲ ದಾನ
ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ಗಂಗಾ ಅಥವಾ ತ್ರಿವೇಣಿ ಘಾಟ್‌ನಿಂದ ನೀರನ್ನು ಸಂಗ್ರಹಿಸಿ ಮನೆಗೆ ತರುತ್ತಾರೆ. ಗಂಗಾಜಲವನ್ನು ಮನೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಈ ನೀರನ್ನು ದಾನ ಮಾಡುವುದು ಮಂಗಳಕರ. ದೇವಸ್ಥಾನಕ್ಕೂ ಈ ನೀರನ್ನು ನೀಡಬಹುದು. ಗಂಗಾಜಲ ದಾನದಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆ.
ಇದನ್ನೂ ಓದಿ: 2ನೇ ದಿನ ದಾಖಲೆ ಬರೆದ ಮಹಾ ಕುಂಭಮೇಳ: 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ಹಣ ದಾನ
ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ಸಾಮರ್ಥ್ಯಕ್ಕೆ ತಕ್ಕಂತೆ ಹಣ ದಾನ ಮಾಡಬಹುದು. ಅನಾಥಾಶ್ರಮ ಅಥವಾ ವೃದ್ಧಾಶ್ರಮಕ್ಕೆ ನೀಡುವುದು ಒಳ್ಳೆಯದು. ಹಣ ದಾನ ಮಾಡೋದ್ರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಎಳ್ಳು, ಬೆಲ್ಲ ದಾನ
ಎಳ್ಳು ಮತ್ತು ಬೆಲ್ಲ ದಾನ ಮಾಡೋದ್ರಿಂದ ದೈಹಿಕ ಮತ್ತು ಮಾನಸಿಕ ಶುದ್ಧಿ ಉಂಟಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದು ನಂಬಲಾಗಿದೆ.
ಗೋವು ಮತ್ತು ಧಾನ್ಯ ದಾನ
ಧಾನ್ಯ ಮತ್ತು ಗೋವುಗಳ ದಾನ ಕೂಡ ಶ್ರೇಷ್ಠ. ಗೋವನ್ನು ದಾನ ಮಾಡುವುದು ಅಥವಾ ಗೋಶಾಲೆಗಳಿಗೆ ಧಾನ್ಯವನ್ನು ದಾನ ಮಾಡುವುದು ಒಳ್ಳೆಯದು. ಈ ಎರಡು ವಸ್ತುಗಳನ್ನು ದಾನ ಮಾಡೋದ್ರಿಂದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಸಂತೋಷ ಮತ್ತು ಶಾಂತಿಯನ್ನು ಸಹ ಪಡೆಯಬಹುದು.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಅಸ್ವಸ್ಥ.. ಪುಣ್ಯ ಸ್ನಾನಕ್ಕೆ ಬಂದಾಗ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ