/newsfirstlive-kannada/media/post_attachments/wp-content/uploads/2025/01/Prayagraj-Mahakumba-mela-2025-2.jpg)
ಸನಾತನ ಧರ್ಮದ ಅತಿದೊಡ್ಡ ಸಮಾಗಮ ಪ್ರಯಾಗ್‌ರಾಜ್ ಮಹಾಕುಂಭಮೇಳ ಹೊಸ ದಾಖಲೆಯನ್ನ ಬರೆದಿದೆ. ಮಹಾಕುಂಭಮೇಳದಲ್ಲಿ ಇದುವರೆಗೆ 8 ಕೋಟಿ 80 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.
ಕಳೆದ 8 ದಿನಗಳಲ್ಲಿ ನಿತ್ಯ ಸರಾಸರಿ 1 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದಂತಾಗಿದೆ. ಜನವರಿ 29ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 8-9 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ನಿರೀಕ್ಷೆ ಇದೆ.
ಮಹಾಕುಂಭಮೇಳ ಭೂಮಿಯ ಮೇಲಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ. ಜೊತೆಗೆ ಭೂಮಿ ಮೇಲೆ ಒಂದೇ ಕಡೆ ಹೆಚ್ಚು ಜನರು ಸೇರುವ ಸ್ಥಳವೂ ಆಗಿದೆ. 45 ದಿನಗಳಲ್ಲಿ 40 ಕೋಟಿಗೂ ಹೆಚ್ಚು ಜನರು ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ.
ಮೆಕ್ಕಾಗೆ ಭೇಟಿ ನೀಡುವ ಜನರಿಗಿಂತ ಹೆಚ್ಚಿನ ಜನರು ಮಹಾಕುಂಭಮೇಳಕ್ಕೆ ಸೇರುತ್ತಿದ್ದಾರೆ. ಫಿಫಾ ವರ್ಲ್ಡ್ ಕಪ್ ನೋಡಲು ಸೇರುವ ಜನರಿಗಿಂತ ಹೆಚ್ಚು ಜನರು ಮಹಾಕುಂಭಮೇಳಕ್ಕೆ ಸೇರುತ್ತಿದ್ದಾರೆ. ಹೀಗಾಗಿ ಮಹಾಕುಂಭಮೇಳ ಭೂಮಿಯ ಮೇಲೆ ಹೆಚ್ಚಿನ ಜನರು ಒಂದೆಡೆ ಸೇರುವ ಸ್ಥಳವೂ ಆಗಿದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ.. ಪ್ರಯಾಗರಾಜ್ಗೆ ಯಾವಾಗ ಬರ್ತಾರೆ ಗೊತ್ತಾ?
ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಇಂದು ಉದ್ಯಮಿ ಗೌತಮ್ ಅದಾನಿ ಕೂಡ ಭೇಟಿ ನೀಡುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಗೌತಮ್ ಅದಾನಿ ಪುಣ್ಯ ಸ್ನಾನ ಮಾಡಲಿದ್ದಾರೆ. ಇಸ್ಕಾನ್‌ನಿಂದ ಅದಾನಿ ಗ್ರೂಪ್ ನಿತ್ಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಿದೆ. ಅನ್ನ ಸಂತರ್ಪಣೆಯ ಶಿಬಿರಕ್ಕೆ ಭೇಟಿ ನೀಡಿ ಜನರಿಗೆ ಊಟವನ್ನು ಗೌತಮ್ ಅದಾನಿ ವಿತರಿಸುತ್ತಾರೆ. ಗೀತಾ ಪ್ರೆಸ್ ಶಿಬಿರಕ್ಕೂ ಗೌತಮ್ ಅದಾನಿ ಭೇಟಿ ನೀಡುವರು.
ಮಹಾಕುಂಭಮೇಳಕ್ಕೆ ಇನ್ಪೋಸಿಸ್ ಫೌಂಡೇಶನ್ ಮುಖ್ಯಸ್ಥೆ , ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಭೇಟಿ ನೀಡಿದ್ದಾರೆ. ಮೂರು ದಿನ ಪ್ರಯಾಗರಾಜ್‌ನಲ್ಲಿ ಸುಧಾಮೂರ್ತಿ ತಂಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ