Advertisment

ಮಹಾಕುಂಭಮೇಳ: ಮೌನಿ ಅಮಾವಾಸ್ಯೆಯ ಒಂದೇ ದಿನ ಅಮೃತ ಸ್ನಾನ ಮಾಡಿದ್ದು ಎಷ್ಟು ಕೋಟಿ ಭಕ್ತರು?

author-image
admin
Updated On
ಮಹಾಕುಂಭಮೇಳ: ಮೌನಿ ಅಮಾವಾಸ್ಯೆಯ ಒಂದೇ ದಿನ ಅಮೃತ ಸ್ನಾನ ಮಾಡಿದ್ದು ಎಷ್ಟು ಕೋಟಿ ಭಕ್ತರು?
Advertisment
  • ಪ್ರಯಾಗ್‌ ರಾಜ್ ಮಹಾ ಕುಂಭಮೇಳದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್!
  • ಮೌನಿ ಅಮಾವಾಸ್ಯೆ ದಿನ ಅಮೃತಸ್ನಾನ ಮಾಡಿದ್ದು ಎಷ್ಟು ಕೋಟಿ ಭಕ್ತರು?
  • ಅನುಶ್ರೀ, ರಾಜ್ ಬಿ. ಶೆಟ್ಟಿ, ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಹಾಗೂ ಸ್ನೇಹಿತರು

ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ಹರಿದು ಬರುತ್ತಿರುವ ಭಕ್ತಸಾಗರ ಇನ್ನೂ ನಿಂತಿಲ್ಲ. ಮೌನಿ ಅಮಾವಾಸ್ಯೆಯ ಒಂದೇ ದಿನ 7 ಕೋಟಿ 50 ಲಕ್ಷ ಭಕ್ತರು ಅಮೃತಸ್ನಾನ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮೌನಿ ಅಮಾವಾಸ್ಯೆಯ ಬಳಿಕವೂ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ.

Advertisment

ಪ್ರಯಾಗ್‌ ರಾಜ್ ಮಹಾ ಕುಂಭಮೇಳದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಭೇಟಿ ಕೊಟ್ಟಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ, ಚಾರ್ಲಿ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದಾರೆ.

publive-image

ಜನವರಿ 29ರ ಮೌನಿ ಅಮಾವಾಸ್ಯೆಯಂದು ಉತ್ತರ ಪ್ರದೇಶ ಸರ್ಕಾರಕ್ಕೆ 8-10 ಕೋಟಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇತ್ತು. ಆದರೆ ಒಂದೇ ದಿನ 7 ಕೋಟಿ 50 ಲಕ್ಷ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ.

ಇದನ್ನೂ ಓದಿ: Maha Kumbh; ಕುಂಭ ಮೇಳ ದುರಂತ, ಬೆಳಗಾವಿಯಲ್ಲಿ ಶೋಕಸಾಗರ.. ಕಣ್ಣೀರಿಡುತ್ತ ಕೂತ ಕುಟುಂಬ 

Advertisment

ಇನ್ನು, ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಮಹಾಕುಂಭಮೇಳಕ್ಕೆ ಜನರು ಆಗಮಿಸಲು ಸಕಲ ವ್ಯವಸ್ಥೆ ಮಾಡಬೇಕು. ವಿಶೇಷ ರೈಲು, ವಿಶೇಷ ಬಸ್ ವ್ಯವಸ್ಥೆ ಮುಂದುವರಿಸಲು ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ.

ಪ್ರಯಾಗರಾಜ್ ಸುತ್ತಲಿನ‌ 7-8 ಜಿಲ್ಲೆಗಳ ಅಧಿಕಾರಿಗಳಿಗೂ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಮಹಾಕುಂಭಾಮೇಳಕ್ಕೆ ಬಂದ ಸ್ಪೆಷಲ್ ಟ್ರೇನ್, ಬಸ್ ಮೂಲಕ ವಾಪಸಾಗಲು ವ್ಯವಸ್ಥೆ ಇರಬೇಕು. ಅಯೋಧ್ಯೆ, ವಾರಣಾಸಿ, ಚಿತ್ರಕೂಟ ಜಿಲ್ಲೆಗಳ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment