/newsfirstlive-kannada/media/post_attachments/wp-content/uploads/2025/02/BASANT-PANCHAMI-AMRIT-SNAN.jpg)
ವಸಂತ ಪಂಚಮಿ ಪವಿತ್ರ ದಿನದಂದು ಮಹಾಕುಂಭಮೇಳದಲ್ಲಿ ಭಕ್ತಕೋಟಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದೆ. ದಿನದಿಂದ ದಿನಕ್ಕೆ ಭಕ್ತಾದಿಗಳು ಪ್ರಯಾಗರಾಜ್ಗೆ ಬರುವ ಸಂಖ್ಯೆ ಏರಿಕೆ ಗತಿಯಲ್ಲಿಯೇ ಸಾಗುತ್ತಿದೆ. ವಸಂತ ಪಂಚಮಿಯ ಪ್ರಮುಕ್ತ ಸುಮಾರು 62 ಲಕ್ಷ ಜನರು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:Basant Panchami: ಇಂದು ಮಹಾಕುಂಭಮೇಳದ ಕೊನೆಯ ಅಮೃತ ಸ್ನಾನ; ಮಹತ್ವದ ಬದಲಾವಣೆಗಳು!
7.30ರ ಸುಮಾರಿಗೆ ಎಲ್ಲಾ 13 ಅಖಾರರಗಳಲ್ಲಿ ಮಹಾನಿರ್ವಾನಿ ಅಟಲ್, ಜುನಾ ಹಾಗೂ ನಿರಂಜನಿಗಳನ್ನು ಸೇರಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಅಮೃತ ಸ್ನಾನವನ್ನು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ವಸಂತ ಪಂಚಮಿಯಂದು ಅಮೃತ ಸ್ನಾನ ಮಾಡಿದ ಸಾಧು ಮತ್ತು ಸನ್ಯಾಸಿಗಳ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಲಾಯ್ತು.
ಇದನ್ನೂ ಓದಿ:Maha Kumbh; ಕಾಲ್ತುಳಿತ ಪ್ರಕರಣದ ಹಿಂದಿದೆಯಾ ಪಿತೂರಿ? ಪೊಲೀಸರಿಂದ ತನಿಖೆ ಚುರುಕು
ಇನ್ನು ಅಮೃತ ಸ್ನಾನದ ನೇರ ಪ್ರಸಾರವನ್ನು ಖುದ್ದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಅಧಿಕೃತ ನಿವಾಸದಲ್ಲಿ ಕುಳಿತು ವಾರ್ ರೂಮ್ ಮೂಲಕ ಮಾನಿಟರ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅದು ಮಾತ್ರವಲ್ಲ ತ್ರಿವೇಣಿ ಸಂಗಮದಲ್ಲಿ ನೆರೆದ ಅಧಿಕಾರಿಗಳಿಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು, ಪರಿಸ್ಥಿತಿಯನ್ನು ತುಂಬಾ ಸರಳವಾಗಿ ನಿಭಾಯಿಸುವಂತೆ ಆದೇಶ ನೀಡಿದ್ದರು ಎಂದು ಹೇಳಲಾಗಿದೆ.
VIDEO | Maha Kumbh 2025: Thousands of nagas and sadhus move towards Triveni Sangam to take holy dip on the occasion of Basant Pamchami.#MahaKumbh2025#MahaKumbhWithPTIpic.twitter.com/3my5qHR8Ok
— Press Trust of India (@PTI_News)
VIDEO | Maha Kumbh 2025: Thousands of nagas and sadhus move towards Triveni Sangam to take holy dip on the occasion of Basant Pamchami.#MahaKumbh2025#MahaKumbhWithPTIpic.twitter.com/3my5qHR8Ok
— Press Trust of India (@PTI_News) February 3, 2025
">February 3, 2025
ಅಮೃತಸ್ನಾನ ಘಾಟ್ಗಳಲ್ಲಿ ನಾಗಾಸಾಧುಗಳ ಮೂಲಕ ಆರಂಭವಾಯ್ತು. ತ್ರಿವೇಣಿ ಸಂಗಮ ತಟದಲ್ಲಿ ಲಕ್ಷಾಂತರ ನಾಗಾಸಾಧುಗಳು ಮಿಂದೆದ್ದು ಪವಿತ್ರ ಸ್ನಾನವನ್ನು ಮುಗಿಸಿದರು. ವಸಂತ ಪಂಚಮಿಯಂದು ಒಟ್ಟು 62 ಲಕ್ಷ ಸಾಧು ಸನ್ಯಾಸಿಗಲು ಅಮೃತಸ್ನಾನವನ್ನು ಮಾಡಿ ಮುಗಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಯೋಗಿ ಆದಿತ್ಯನಾಥ್ ಝಿರೋ ಎರರ್ಸ್ ಎಂಬ ಸಂದೇಶವನ್ನು ಪೊಲೀಸರಿಗೆ ಹಾಗೂ ಅಲ್ಲಿನ ಜಿಲ್ಲಾಡಳಿತಕ್ಕೆ ಖಡಕ್ಕಾಗಿ ನೀಡಿದ್ದರು. ಯಾವುದೇ ಒಂದು ಸಣ್ಣ ತಪ್ಪುಗಳು ಕೂಡ ಸಂಭವಿಸದಂತೆ ಅಮೃತಸ್ನಾನ ಮಹೋತ್ಸವವನ್ನು ನಿಭಾಯಿಸಬೇಕು. ವಿಶೇಷವಾಗಿ ಜನಜಂಗುಳಿಯನ್ನು ನಿಯಂತ್ರಿಸಲು ಆಪರೇಷನ್ 11 ಎಂಬ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ