Stampede; ಮಹಾಕುಂಭ ಕಾಲ್ತುಳಿತದಲ್ಲಿ ಕರ್ನಾಟಕದ ಇಬ್ಬರಿಗೆ ಗಾಯ, ಕಣ್ಣೀರು ಇಡುತ್ತ ಹೇಳಿದ್ದೇನು..?

author-image
Bheemappa
Updated On
Stampede; ಮಹಾಕುಂಭ ಕಾಲ್ತುಳಿತದಲ್ಲಿ ಕರ್ನಾಟಕದ ಇಬ್ಬರಿಗೆ ಗಾಯ, ಕಣ್ಣೀರು ಇಡುತ್ತ ಹೇಳಿದ್ದೇನು..?
Advertisment
  • ಕಾಲ್ತುಳಿತದಿಂದ ಹಲವಾರು ಜನರಿಗೆ ಗಂಭೀರವಾಗಿ ಗಾಯ
  • ಮುಂದಕ್ಕೆ ಹೋಗುತ್ತಿದ್ದ ಭಕ್ತರು ಏಕಾಏಕಿ ಹಿಂದಕ್ಕೆ ಬಂದರು
  • ಮಹಾಕುಂಭಮೇಳಕ್ಕೆ ಭೇಟಿ ನೀಡಿರುವ ಕರ್ನಾಟಕದ ಭಕ್ತರು

ಲಕ್ನೋ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ 15 ಜನರು ಜೀವ ಕಳೆದುಕೊಂಡಿದ್ದು ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರು ತಮ್ಮವರು ನಾಪತ್ತೆ ಆಗಿದ್ದಾರೆ ಎಂದು ಗೋಳುಡುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಕರ್ನಾಟಕದ ಇಬ್ಬರು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಬೆಳಗಾವಿಯ ಮಹಿಳೆ ವಿದ್ಯಾ ಸಾಹು ಎನ್ನುವರು ಮಾತನಾಡಿ, ಏನು ಇರಲಿಲ್ಲ. ಎಲ್ಲರೂ ನೆಮ್ಮದಿಯಿಂದಲೇ ಕುಂಭಮೇಳದಲ್ಲಿ ನಡೆದುಕೊಂಡು ಹೋಗುತ್ತಿದ್ದೇವು. ಆದರೆ ಎಲ್ಲಿಂದ ಬಂದರೋ ಗೊತ್ತಿಲ್ಲ ಕೆಲ ಜನರು ಮುಂದಕ್ಕೆ ಹೋಗುತ್ತಿದ್ದವರು ಏಕಾಏಕಿ ಹಿಂದಕ್ಕೆ ಓಡಿ ಬಂದರು. ಇದರಿಂದ ಹಿಂದಕ್ಕೆ ಓಡಾಲಾಗದೇ ಕೆಲವರು ಕಂಬಕ್ಕೆ ಗುದ್ದಿಕೊಂಡು ನೆಲಕ್ಕೆ ಬಿದ್ದರು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:BREAKING: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಜೀವ ಕಳೆದುಕೊಂಡ 15 ಯಾತ್ರಿಗಳು?

ನಾವು ಎರಡು ಬಸ್​ನಲ್ಲಿ 60 ಜನರು ಬಂದಿದ್ದೇವೆ. ಇದರಲ್ಲಿ 9 ಜನರು ಎಂಬಂತೆ ಗುಂಪು ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದೇವು. ಕಾಲ್ತುಳಿತದಲ್ಲಿ ನೆಲಕ್ಕೆ ಬಿದ್ದಿದ್ದರಿಂದ ಆಂಬುಲೆನ್ಸ್ ಮೂಲಕ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನಮ್ಮಲ್ಲಿ ಎಲ್ಲರೂ ಇದ್ದಾರೆ. ಯಾರು ಮಿಸ್ ಆಗಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನೊಬ್ಬ ಮಹಿಳೆ ಮಾತನಾಡಿ, ಜನರು ನುಗ್ಗಿಕೊಂಡು ಬಂದಿದ್ದರಿಂದ ನಾನು ನೆಲಕ್ಕೆ ಬಿದ್ದೆ. ಯಾವ ಕಡೆ ಹೋಗಲು ಅವಕಾಶ ಇರಲಿಲ್ಲ. ಆಸ್ಪತ್ರೆಗೆ ಯಾರು ಕರೆದುಕೊಂಡು ಬಂದರು ಗೊತ್ತಿಲ್ಲ. ಕಣ್ಣು ಬಿಟ್ಟಾಗ ಬೆಡ್​ ಮೇಲೆ ಇದ್ದೆ. ನನ್ನ ಜೊತೆಗೆ ಬಂದವರು ಸಿಕ್ಕಿದ್ದಾರೆ ಎಂದು ಅಳುತ್ತಲೇ ಮಹಿಳೆ ಮಾಹಿತಿ ನೀಡಿದ್ದಾರೆ.


">January 29, 2025


">January 29, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment