ಕುಂಭ ಮೇಳ ಕಾಲ್ತುಳಿತಕ್ಕೆ ಹೋಗ್ಬಿಟ್ಟ ಅಂದ್ಕೊಂಡ ಕುಟುಂಬ.. ತಿಥಿ ಕಾರ್ಯದ ವೇಳೆ ನಗುನಗುತ್ತ ಎಂಟ್ರಿ ಕೊಟ್ಟ..!

author-image
Ganesh
Updated On
ಕುಂಭ ಮೇಳ ಕಾಲ್ತುಳಿತಕ್ಕೆ ಹೋಗ್ಬಿಟ್ಟ ಅಂದ್ಕೊಂಡ ಕುಟುಂಬ.. ತಿಥಿ ಕಾರ್ಯದ ವೇಳೆ ನಗುನಗುತ್ತ ಎಂಟ್ರಿ ಕೊಟ್ಟ..!
Advertisment
  • ತಿಥಿ ಕಾರ್ಯ ಮಾಡ್ತಿದ್ದ ಕುಟುಂಬಕ್ಕೆ ಶಾಕ್ ಕೊಟ್ಟ ವ್ಯಕ್ತಿ
  • ಎರಡು ವಾರ ಮನೆಗೆ ಬಾರದ ಹಿನ್ನೆಲೆಯಲ್ಲಿ ತಿಥಿ ಕಾರ್ಯ
  • ಜ. 29 ರಂದು ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿತ್ತು

ಉತ್ತರ ಪ್ರದೇಶದ ಪ್ರಯಾಗರಾಜ್​​ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭದಲ್ಲಿ ಕಾಲ್ತುಳಿತ (Maha Kumbh stampede) ಸಂಭವಿಸಿತ್ತು. ಈ ದುರಂತದಲ್ಲಿ ಮನೆಯ ಸದಸ್ಯನೊಬ್ಬ ನಿಧನರಾಗಿದ್ದಾರೆ ಅಂದುಕೊಂಡ ಕುಟುಂಬ, ದಿನಕಾರ್ಯಕ್ಕೆ ಮುಂದಾಗಿತ್ತು. ಆದರೆ ಆತ, ತಿಥಿ ಕಾರ್ಯದ ದಿನ ಮನೆಗೆ ಎಂಟ್ರಿ ನೀಡಿ ಅಚ್ಚರಿ ಮೂಡಿಸಿದ್ದಾನೆ.

ನಡೆದಿದ್ದು ಎಲ್ಲಿ..?

ಖುಂಟಿ ಗುರು ಬದುಕಿ ಬಂದಿರುವ ವ್ಯಕ್ತಿ. ಜನವರಿ 28 ರಂದು ಮೌನಿ ಅಮಾವಾಸ್ಯೆಯ ಸ್ನಾನಕ್ಕೆ ಹೋಗ್ತೀನಿ ಎಂದು ಗುರು ಹೊರಟಿದ್ದ. ಬಳಿಕ ಆತ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಆತನ ಸಂಪರ್ಕಿಸಲು ನಡೆಸಿದ್ದ ಪ್ರಯತ್ನ ಕೂಡ ವಿಫಲವಾಗಿತ್ತು. ಹೀಗಾಗಿ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡಿದ್ದಾನೆ ಎಂದು ಕುಟುಂಬ ನಂಬಿತ್ತು.

ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ ವಿರುದ್ಧ ಕೇಸ್ ದಾಖಲಿಸಿದ್ದೇನೆ ಎಂದ ಪ್ರಕಾಶ್ ರಾಜ್; ಇಬ್ಬರ ಮಧ್ಯೆ ಏನಾಯ್ತು..?

publive-image

2 ವಾರ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತ ನಿಧನ ಆಗಿರಬಹುದು ಅಂದುಕೊಂಡ ಕುಟುಂಬ, ಕಾರ್ಯಗಳನ್ನ ನೆರವೇರಿಸಿತ್ತು. ಕೊನೆಯ 13ನೇ ದಿನದ ತಿಥಿ ಕಾರ್ಯದ ವೇಳೆ ಖುಂಟಿ ಗುರು ಮನೆಗೆ ಎಂಟ್ರಿ ನೀಡಿದ್ದಾನೆ. ಆತನ ನೋಡುತ್ತಿದ್ದಂತೆಯೇ ಮನೆಯವರೆಲ್ಲ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಖುಂಟಿ ಗುರು ಮೂಲತಃ ಪ್ರಯಾಗರಾಜ್ ನಿವಾಸಿ. ಪ್ರಯಾಗರಾಜ್​​ನ ಝೀರೋ ರೋಡ್ ಏರಿಯಾದ ಚಹ್​ಚಂದ್ ಗಾಲಿ ನಿವಾಸಿ. ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಜನವರಿ 29 ರಂದು ನಡೆದ ಕಾಲ್ತುಳಿತದಲ್ಲಿ ಸುಮಾರು 30 ಭಕ್ತರು ನಿಧನರಾಗಿದ್ದಾರೆ. 60 ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಕುಂಭ ಮೇಳ ಆರಂಭವಾಗಿ ಇಲ್ಲಿಯವರೆಗೆ ಒಟ್ಟು 50 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: RCB ಅಭಿಮಾನಿಗಳನ್ನ ಬಿಟ್ಟೂ ಬಿಡದೇ ಕಾಡ್ತಿದೆ ಕೊಹ್ಲಿ ನಿರ್ಧಾರ.. ಕಿಂಗ್ ಇಷ್ಟ ಆಗೋದು ಇದಕ್ಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment