Stampede: ಅದೆಷ್ಟೋ ಭಕ್ತರು ಜೀವ ಕಳೆದುಕೊಂಡ ಆತಂಕ.. ಕಾಲ್ತುಳಿತಕ್ಕೆ ಸಂಬಂಧಿಸಿದ 10 ಅಪ್​​ಡೇಟ್ಸ್​..!

author-image
Ganesh
Updated On
ಕಾಲ್ತುಳಿತ ಒಂದೇ ಅಲ್ಲ.. 72 ಗಂಟೆ ಟ್ರಾಫಿಕ್​​ನಲ್ಲಿ ಸಿಲುಕಿದ ಜನ.. ಏನೆಲ್ಲ ಸಮಸ್ಯೆ ಆಗ್ತಿದೆ..?
Advertisment
  • ಪವಿತ್ರ ಸ್ನಾನಕ್ಕೆ ಹೋಗಿದ್ದ ಕರ್ನಾಟಕದ ನಾಲ್ವರು ಭಕ್ತರಿಗೆ ಗಾಯ
  • ಮಹಾಕುಂಭದಲ್ಲಿ ಕಾಲ್ತುಳಿತ ಸಂಭವಿಸಲು 2 ಪ್ರಮುಖ ಕಾರಣ
  • ಮೌನಿ ಅಮವಾಸ್ಯೆಯ ಪವಿತ್ರ ಸ್ನಾನ ನಿಲ್ಲಿಸಿದ ಅಖಾರಗಳು

ಉತ್ತರ ಪ್ರದೇಶದ ಪ್ರಯಾಗರಾಜ್​​ನಲ್ಲಿ ಮಹಾಕುಂಭ ನಡೆಯುತ್ತಿದೆ. ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಯಾತ್ರಿಕರು ಹರಿದು ಬಂದಿದ್ದು, ಕಾಲ್ತುಳಿತಕ್ಕೆ ಕಾರಣವಾಗಿದೆ. ಮಹಾ ಕುಂಭದ ಸಂಗಮ್‌ನಿಂದ 1 ಕಿಮೀವರೆಗೆ ಕಾಲ್ತುಳಿತ ಆಗಿದೆ ಎಂದು ವರದಿಯಾಗಿದೆ.

ಪರಿಣಾಮ ಅಖಾರಾಗಳು ಮೌನಿ ಅಮವಾಸ್ಯೆ ಪ್ರಯುಕ್ತ ನಡೆಸಬೇಕಿದ್ದ ‘ಅಮೃತ ಸ್ನಾನ’ ನಿಲ್ಲಿಸಿವೆ. ಇದು ಮಹಾ ಕುಂಭದ ಅತ್ಯಂತ ಮಹತ್ವದ ಆಚರಣೆ ಎಂದು ಪರಿಗಣಿಸಲಾಗಿದೆ. ಕಾಲ್ತುಳಿತ ಕುರಿತ ಪ್ರಮುಖ 10 ಅಪ್​ಡೇಟ್ಸ್​ ಇಲ್ಲಿದೆ.

ಪ್ರಮುಖ 10 ಅಪ್​ಡೇಟ್ಸ್​

  1. ಸಂಗಮ ಬಳಿ ಕಾಲ್ತುಳಿತದಿಂದ ಅನೇಕ ಭಕ್ತರು ಜೀವ ಕಳೆದುಕೊಂಡಿರುವ ಆತಂಕ ನಿರ್ಮಾಣವಾಗಿದೆ. ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕೆ ಭಕ್ತ ಸಾಗರ ಹರಿದುಬಂದ ಪರಿಣಾಮ ಕಾಲ್ತುಳಿತ ಸಂಭವಿಸಿದ್ದು, 30ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಬಹುತೇಕರು ಮಹಿಳೆಯರು.
  2.  ಕೋಟ್ಯಾಂತರ ಭಕ್ತರು ಉತ್ತರ ಪ್ರದೇಶದ ಡೇರೆ ನಗರಕ್ಕೆ ಬರುತ್ತಿದ್ದಾರೆ. ಸಂಗಮ್‌ನಿಂದ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ನೂಕು ನುಗ್ಗಲು ಸಂಭವಿಸಿದೆ. ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಧಿಸುವ ಸ್ಥಳದಲ್ಲಿ ಭಾರೀ ಜನಸಂದಣಿ. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕೆಲವು ಮಹಿಳೆಯರು ಮೂರ್ಛೆ ಹೋಗಿದ್ದಾರೆ.
  3.  ಇದ್ದಕ್ಕಿದ್ದಂತೆ ಜನರು ನಮ್ಮನ್ನು ತಳ್ಳಲು ಶುರುಮಾಡಿದರು. ಆಗ ಕಾಲ್ತುಳಿತಕ್ಕೆ ನಾವು ಒಳಗಾದೆವು. ನಮ್ಮ ಜೊತೆ ಇರುವ ಅದೆಷ್ಟೋ ಮಂದಿ ನೆಲಕ್ಕೆ ಬಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಭಕ್ತನೊಬ್ಬ ಹೇಳಿದ್ದಾನೆ. ನಮಗೆ ಹೋಗಲು ಎಲ್ಲಿಯೂ ಜಾಗ ಇರಲಿಲ್ಲ ಎಂದು ಗಾಯಗೊಂಡ ಮಹಿಳೆಯೊಬ್ಬರು ಹೇಳಿದ್ದಾರೆ
  4. ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯಗಳಾಗಿವೆ. ಬೆಳಗಾವಿ ವಡಗಾವಿಯ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪರ್ಡೆಗೆ ಗಾಯಗಳಾಗಿವೆ. ಬಾಲಕಿಯರಾದ ಮೇಘಾ, ಜ್ಯೋತಿ ಕೂಡ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಪ್ರಯಾಗರಾಜ್​​ಗೆ ಈ ನಾಲ್ವರು ತೆರಳಿದ್ದರು.
  5. ಮಧ್ಯೆರಾತ್ರಿ ಕಾಲ್ತುಳಿತ ಸಂಭವಿಸಲು 2 ಪ್ರಮುಖ ಕಾರಣಗಳು ಇವೆ. ಗಮ್ ಪ್ರದೇಶದಲ್ಲಿ ಅಮೃತ್ ಸ್ನಾನ ಮಾಡಲು ಇರುವ ಹೆಚ್ಚಿನ ಪಾಂಟೂನ್ ಸೇತುವೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸಂಗಮದಲ್ಲಿ ಕೋಟಿಗಟ್ಟಲೆ ಜನ ಸೇರತೊಡಗಿದರು. ಸಂಗಮ ಪ್ರದೇಶದಲ್ಲಿ ಪ್ರವೇಶಕ್ಕೆ ಮಾತ್ರ ಮಾರ್ಗವಿದೆ. ಮತ್ತೆ ನಿರ್ಗಮನಕ್ಕೆ ಯಾವುದೇ ಬೇರೆ ದಾರಿ ಇಲ್ಲ. ಸ್ನಾನ ಮಾಡಿದವರು ಅದೇ ಪ್ರವೇಶ ಪಡೆದ ದಾರಿಯಲ್ಲಿ ವಾಪಸ್ ಆಗಬೇಕು. ಹೀಗಾಗಿ ಜನ ಏಕಾಏಕಿ ಏರಿಕೆ ಆಗಿ ದಟ್ಟಣೆ ಹೆಚ್ಚಾಗಿತ್ತು.
  6.  ಅಖಾರಾಗಳು ತಮ್ಮ ಸಾಂಪ್ರದಾಯಿಕ ‘ಅಮೃತ ಸ್ನಾನ’ ಅಥವಾ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನವನ್ನು ನಿಲ್ಲಿಸಿವೆ
    ಇಷ್ಟೆಲ್ಲ ಬೆಳವಣಿಗೆ ಮಧ್ಯೆಯೂ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನವನ್ನು ಮುಂದುವರಿಸಿದ್ದಾರೆ
  7.  ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
  8.  ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಕೂಟವೆಂಬ ಹೆಗ್ಗಳಿಕೆಗೆ ಮಹಾಕುಂಭ ಪಾತ್ರವಾಗಿದೆ. ಪ್ರತಿ 12 ವರ್ಷಗಳ ನಂತರ ನಡೆಯುತ್ತಿದೆ. ಜನವರಿ 13 ರಂದು ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ. ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ.
  9.  ಸಂಗಮ್ ಅನ್ನು ಹಿಂದೂಗಳು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ಮಹಾ ಕುಂಭದ ಸಮಯದಲ್ಲಿ ಮತ್ತು ಮೌನಿ ಅಮವಾಸ್ಯೆಯಂತಹ ದಿನಗಳಲ್ಲಿ ವಿಶೇಷ ಸ್ನಾನ ಮಾಡಲಾಗುತ್ತದೆ. ಪವಿತ್ರ ಸ್ನಾನ ಮಾಡಿದರೆ ಪಾಪಗಳು ತೊಳೆದು ಮೋಕ್ಷ ದೊರೆಯಲಿದೆ ಅನ್ನೋದು ಭಕ್ತರ ನಂಬಿಕೆ
  10.  ಇಲ್ಲಿಯವರೆಗೆ ಸುಮಾರು 20 ಕೋಟಿ ಯಾತ್ರಾರ್ಥಿಗಳು ಸ್ನಾನ ಮಾಡಿದ್ದಾರೆ. 40 ಕೋಟಿ ಭಕ್ತರು ಮಹಾಕುಂಭಕ್ಕೆ ಬರುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment