ಮಹಾ ಕುಂಭಮೇಳಕ್ಕೆ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ ಗುಡ್​ಬೈ.. ಕಾರಣವೇನು?

author-image
Bheemappa
Updated On
10 ದಿನಕ್ಕೆ ₹10 ಕೋಟಿ ಗಳಿಸಿದ್ರಾ ಮಹಾಕುಂಭಮೇಳದ ಮೊನಾಲಿಸಾ? ಏನಿದರ ಅಸಲಿಯತ್ತು?
Advertisment
  • ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದ ಚೆಲುವೆ
  • ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ
  • ಮೊನಾಲಿಸಾ ಸೌಂದರ್ಯ, ಕಣ್ಣೋಟಕ್ಕೆ ಜನರು ಫುಲ್ ಫಿದಾ

ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಜನವರಿ 13 ರಿಂದ 2025ರ ಮಹಾ ಕುಂಭಮೇಳ ಸಂಭ್ರಮದಿಂದ ನಡೆಯುತ್ತಿದೆ. ಈ ಮಹಾ ಕುಂಭದಲ್ಲಿ ಕೋಟ್ಯಂತರ ಜನರು ಬಂದು ಪುಣ್ಯ ಸ್ನಾನ ಮಾಡಿ ವಾಪಸ್ ಆಗುತ್ತಿದ್ದಾರೆ. ಇನ್ನು ಫೆಬ್ರವರಿ 26 ರವರೆಗೆ ಈ ಮಹಾ ಕುಂಭಮೇಳ ನಡೆಯಲಿದೆ. ಆದರೆ ಇದರ ನಡುವೆ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ತಮ್ಮೂರಿಗೆ ವಾಪಸ್ ಆಗಿದ್ದಾರೆ.

ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ ಬೇಸರದಿಂದಲೇ ಮನೆಗೆ ವಾಪಸ್ ಆಗಿದ್ದಾರೆ. ಇಷ್ಟೊಂದು ಪ್ರಚಾರ ಪಡೆಯುತ್ತೇನೆ ಎಂದು ಮೊನಾಲಿಸಾಗೆ ತಿಳಿದಿರಲಿಲ್ಲ. ಆದರೆ ಆ ಪ್ರಚಾರನೇ ಆಕೆಗೆ ಸಂಕಷ್ಟ ತಂದೊಡ್ಡಿತು. ಇದರಿಂದ ಮಹಾ ಕುಂಭಮೇಳವನ್ನು ಬಿಟ್ಟು ನೀಲಿ ಕಣ್ಣುಗಳ ಹುಡುಗಿ ಮಧ್ಯೆಪ್ರದೇಶದ ಇಂದೋರ್​ಗೆ ಮರಳಿದ್ದಾರೆ.

publive-image

ಮೊನಾಲಿಸಾ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಮೊನಾಲಿಸಾ, ಕುಂಭಮೇಳದಲ್ಲಿ ನನಗೆ ಸಪೋರ್ಟ್ ಮಾಡಿ, ಪ್ರೀತಿ ತೋರಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನನ್ನ ಹಾಗೂ ನನ್ನ ಕುಟುಂಬದ ಸುರಕ್ಷತೆಗಾಗಿ ವಾಪಸ್ ಹೋಗಬೇಕಾಗಿದೆ. ಇದರಿಂದ ನಮ್ಮೂರಿಗೆ ಹೋಗುತ್ತಿದ್ದೇನೆ. ಸಾಧ್ಯವಾದರೆ ನಾವು ಮುಂದಿನ ಸಹಿ ಸ್ನಾನದ ವೇಳೆಗೆ ಪ್ರಯಾಗ್‌ರಾಜ್ ಮಹಾ ಕುಂಭದಲ್ಲಿ ಮತ್ತೆ ಭೇಟಿಯಾಗೋಣ ಎಂದು ಹೇಳಿದ್ದಾರೆ.

ಮೊನಾಲಿಸಾ ಅವರದ್ದು ಬಡ ಕುಟುಂಬ. ರುದ್ರಕ್ಷಿಗಳನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆಗೆ ಎಂದು ಮಹಾಕುಂಭಮೇಳಕ್ಕೆ ಪೋಷಕರ ಜೊತೆ ಬಂದಿದ್ದರು. ಆದರೆ ಮೊನಾಲಿಸಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿತ್ತು. ಮೊನಾಲಿಸಾ ಅಂದಕ್ಕೆ ಎಲ್ಲರೂ ಮನಸೋತರು. ಹೀಗಾಗಿ ಕುಂಭಮೇಳದಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನ, ಮೊನಾಲಿಸಾ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆಗೆ ಸಮಸ್ಯೆಗಳು ಎದುರಾದವು.

publive-image

ಇದನ್ನೂ ಓದಿ:ಮಹಾಕುಂಭಮೇಳದ ಮೊನಾಲಿಸಾಗೆ ಬಾಲಿವುಡ್ ಆಫರ್‌.. ನೀಲಿ ಕಣ್ಗಳ ಚೆಲುವೆಗೆ ಒಲಿದ ಅದೃಷ್ಟ!

ಜನರು ಮೊಬೈಲ್, ಕ್ಯಾಮೆರಾ ಹಿಡಿದುಕೊಂಡು ಬಂದು ಸೆಲ್ಫಿಗಾಗಿ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆ ವ್ಯಾಪಾರಕ್ಕೆ ತೊಂದರೆ ಆಗಿತ್ತು. ಒಂದು ರುದ್ರಾಕ್ಷಿ ಮಾಲೆ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದ ಜನ ಸೆಲ್ಫಿ ಬೇಕು ಎನ್ನುತ್ತಿದ್ದರು. ಮೊನಾಲಿಸಾ ಹಾಗೂ ಈಕೆಯ ಕುಟುಂಬದ ಖಾಸಗಿತನ ಮತ್ತು ಮಾನಸಿಕ ಶಾಂತಿ ಹಾಳಾಗಿದೆ ಎಂದು ಹೇಳಲಾಗಿದೆ.

ಇದು ಅಲ್ಲದೇ ಮೊನಾಲಿಸಾ ಇರುವ ಟೆಂಟ್​ಗೆ ಜನರು ಏಕಾಏಕಿ ನುಗ್ಗಿದ್ದರಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಮೊನಾಲಿಸಾ ಕುಂಭವನ್ನು ಅರ್ಧಕ್ಕೆ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. 17 ವರ್ಷದ ಮೊನಾಲಿಸಾ, ಮಧ್ಯಪ್ರದೇಶದ ಇಂದೋರ್​ನ ನಿವಾಸಿ. ವ್ಯಾಪಾರ ಮಾಡಲೆಂದು ಪ್ರಯಾಗ್​ರಾಜ್​ಗೆ ಬಂದರೆ ಜನ ಕೊಟ್ಟ ಕಿರುಕುಳದಿಂದ ಮೊನಲಿಸಾ ಕುಂಭಮೇಳಕ್ಕೆ ಗುಡ್​ಬೈ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment