/newsfirstlive-kannada/media/post_attachments/wp-content/uploads/2025/01/kumbh-mela.jpg)
ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವದಿಂದ ಪ್ರಾರಂಭವಾಗಿದೆ. ಬೆಳಗ್ಗೆಯಿಂದಲೇ ಇಲ್ಲಿಯವರೆಗೆ ಬರೋಬ್ಬರಿ ಒಂದು ಕೋಟಿ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿ ಪಾವನರಾಗಿದ್ದಾರೆ.
ಈ ಮಹಾಕುಂಭದಲ್ಲಿ ಯಾತ್ರಾರ್ಥಿಗಳಿಗೆ ಚೋಟಾ ಬಾಬಾ (Chota baba), ಚಾಬಿ ಬಾಬಾ (Chabi baba) ಮತ್ತು ಪಾವೂರಂ ಬಾಬಾರಂತಹ (Pavurama baba) ಸಂತರು ಪ್ರಮುಖ ಆಕರ್ಷಣೆ. ಈ ಪಾವೂರಂ ಬಾಬಾರನ್ನು ನೋಡಲು ಮತ್ತು ಅವರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿದಾಯಕ ವಿಚಾರಗಳಿವೆ. ಅಂದ್ಹಾಗೆ ಇವರ ಹೆಸರು ಮಹಾಂತ್ ರಾಜ್ಪುರಿ ಜೀ ಮಹಾರಾಜ್ (Mahant Rajpuri Ji Maharaj).
ಇದನ್ನೂ ಓದಿ: ನೀವು ಮನೆಯಲ್ಲೇ ಮಹಾಕುಂಭದ ಪುಣ್ಯ ಸ್ನಾನ ಮಾಡಬಹುದು.. ಪವಿತ್ರ ನೀರು ಪಡೆಯೋದು ಹೇಗೆ..?
ಸೃಷ್ಟಿಯಲ್ಲಿ ಜೀವಿಗಳಿಗೆ ಮಾಡುವ ಸೇವೆಯೇ ಶ್ರೇಷ್ಠ ಸೇವೆ ಎಂದು ನಂಬಿರುವ ಈ ಪಾರಿವಾಳ ವಾಲೆ ಬಾಬಾ ಮಹಾ ಕುಂಭದ ಪ್ರಮುಖ ಆಕರ್ಷಣೆ. ರಾಜಸ್ಥಾನದ ಇವರು, ಬಾಬಾ ಪಾರಿವಾಳ ವಾಲೆ ಬಾಬಾ ಎಂದೇ ಜನಪ್ರಿಯ. ಏಕೆಂದರೆ ತುಂಬಾ ವರ್ಷಗಳಿಂದ ತಲೆಯ ಮೇಲೆ ಪಾರಿವಾಳವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ.
ಜೀವಿಗಳ ಸೇವೆ ಮಾಡುವುದೇ ತಮ್ಮ ಗುರಿ. ಪ್ರತಿ ಜೀವಿಯಲ್ಲೂ ದೇವರಿದ್ದಾನೆ. ಹಾಗಾಗಿ ಜೀವಿಗಳ ಸೇವೆ ಮಾಡುವುದೇ ಪರಮ ಧರ್ಮ ಮತ್ತು ಏಕೈಕ ಗುರಿ. ಸಕಲ ಜೀವಿಗಳ ಸೇವೆ ಮಾಡು.. ಜೀವಿಗಳಲ್ಲಿ ಶಿವನಿದ್ದಾನೆ. ಉಳಿದವುಗಳೆಲ್ಲವೂ ಸುಳ್ಳು. ಗೋವುಗಳ ಸೇವೆ ಮಾಡಬೇಕು. ನೀವು ತಂತ್ರ ಮಂತ್ರವನ್ನು ಅಭ್ಯಾಸ ಮಾಡಿದರೆ ಯಾವ ಫಲಿತಾಂಶ ಪಡೆಯುತ್ತೀರಿ? ಗೋವಿನ ಸೇವೆ ಮಾಡಿದ್ರೆ ಒಳ್ಳೆಯ ಫಲ ಸಿಗಲಿದೆ ಎಂದು ಪಾರಿವಾಳ ಬಾಬಾ ಹೇಳುತ್ತಾರೆ. ಕಳೆದ 9 ವರ್ಷಗಳಿಂದ ಇವರು ಪಾರಿವಾಳವನ್ನು ತಲೆಯ ಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ದೇಶದ ಭದ್ರತೆಗೆ ಹೊಸ ಕ್ರಾಂತಿ.. ಬ್ಯಾಟಲ್ ರೋಬೋ ಎಂಟ್ರಿ.. ಇವುಗಳ ವಿಶೇಷತೆ ಏನು?
👉ప్రయాగ్ రాజ్ మహా కుంభమేళా ప్రదేశంలో కబూతర్ వాలే బాబా ప్రత్యేక ఆకర్షణగా నిలుస్తున్నారు.
👉గత తొమ్మిది సంవత్సరాలుగా తన తలపై పావురాన్ని మోస్తూ యాత్రికులను ఆకట్టుకుంటున్నారు.
For More Updates Download The App Now - https://t.co/iPdcphBI9Mpic.twitter.com/yd4Pk0CI5j— ChotaNews App (@ChotaNewsApp) January 13, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ