/newsfirstlive-kannada/media/post_attachments/wp-content/uploads/2025/06/MAHADAYI.jpg)
ಮಹಾದಾಯಿ ಕಳಸ ಬಂಡೂರಿ ಹೋರಾಟ ದಶಕಗಳಿಂದ ನಡೆಯುತ್ತಿದ್ದು, ಕೊಂಚ ತಣ್ಣಗಾಗಿತ್ತು. ಆದ್ರೀ ಗೋವಾದ ಮಹಾ ಸಂಚಿನಿಂದ ಹೋರಾಟ ಮತ್ತೆ ತೀವ್ರಗೊಳ್ಳುವ ಲಕ್ಷಣಗೋಚರಿಸಿದೆ. ಮಹಾದಾಯಿ ಯೋಜನೆಗೆ ಸುಪ್ರೀಂಕೋರ್ಟ್ 2020ರಲ್ಲೇ ಗ್ರೀನ್ಸಿಗ್ನಲ್ ಕೊಟ್ಟಿದೆ. ಆದ್ರೆ ಗೋವಾ ಸರ್ಕಾರ ಪರಿಸರದ ಹೆಸರಲ್ಲಿ ಮಹದಾಯಿ ವಿರುದ್ಧ ಪ್ರಾಯೋಜಿತ ಹೋರಾಟಕ್ಕೆ ಕುಮ್ಮಕ್ಕು ನೀಡ್ತಿರೋದು ಮಹಾದಾಯಿ ಭಾಗದ ರೈತರನ್ನು ಕೆರಳುವಂತೆ ಮಾಡಿದೆ.
ಮತ್ತೆ ಆರಂಭವಾದ ಮಹದಾಯಿ ನದಿ ಜೋಡಣೆ ಹೋರಾಟ
ಗೋವಾದ ಕುತಂತ್ರದ ಬಗ್ಗೆ ಗೊತ್ತಾಗ್ತಿದ್ದಂತೆ ಕೆರಳಿದ ಮಹಾದಾಯಿ ಹೋರಾಟಗಾರರು, ಮತ್ತೆ ಹೋರಾಟದ ಹಾದಿ ತಿಳಿದಿದ್ದಾರೆ. ಮಹದಾಯಿ ಹೋರಾಟಗಾರ ಶಂಕರ್ ಅಂಬ್ಲಿ ನೇತೃತ್ವದಸಮ್ಮುಖದಲ್ಲಿ ಧಾರವಾಡ ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಜುಲೈ 21ರೊಳಗೆ ಯೋಜನೆ ಜಾರಿಯಾಗದಿದ್ದರೆ ಕೇಂದ್ರ ಸಚಿವರ ಮನೆ ಎದುರು ಹೋರಾಟ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕ್ಯಾರೆಟ್ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನ; ಶುಭಾಂಶು ಶುಕ್ಲಾ ಗಗನಯಾನಕ್ಕೆ ಅಂತಿಮ ತಯಾರಿ ಹೇಗಿದೆ?
ಮಹಾದಾಯಿ ವಿರುದ್ಧ ಗೋವಾ ಪ್ರಾಯೋಜಿತ ಹೋರಾಟ.. ಕರವೇ ಆಕ್ರೋಶ
ಮಹಾದಾಯಿ ವಿರುದ್ಧ ಹೋರಾಟ ಗೋವಾ ಪ್ರಾಯೋಜಿತ ಹೋರಾಟ ಎಂದು ಬೆಳಗಾವಿಯಲ್ಲಿ ಕರವೇ ಆಕ್ರೋಶ ಹೊರಹಾಕಿದೆ. ದಶಕಗಳ ಉತ್ತರ ಕರ್ನಾಟಕದ ರೈತರ ಕನಸಿಗೆ ಕೊಳ್ಳಿ ಇಡಲು ಗೋವಾ ಸರ್ಕಾರ ಮಹಾಸಂಚು ಮಾಡ್ತಿದೆ. ಗೋವಾದ ಕೆಲ ರೆಸಾರ್ಟ್ ಮಾಲೀಕರಿಂದಲೇ ಪರಿಸರವಾದಿ ಹೆಸರಿನಲ್ಲಿ ಮಹಾದಾಯಿ ವಿರುದ್ಧ ಹೋರಾಟ ನಡೆಯುತ್ತಿದೆ. ಇದಕ್ಕೆ ಕನ್ನಡಿಗರು ಸೊಪ್ಪು ಹಾಕಬಾರದೆಂದು ಮನವಿ ಮಾಡಿದ್ದಾರೆ.
ಒಟ್ಟಾರೆ.. ದೇವರು ವರ ಕೊಟ್ರು ಪೂಜಾರಿ ಬಿಡಲಿಲ್ಲ ಎಂಬಂತೆ.. ಮಹದಾಯಿ ಯೋಜನೆ ಜಾರಿಗೆ ಗೋವಾ ಸರ್ಕಾರ ಒಂದಿಲ್ಲೊಂದು ರೀತಿ ಅಡ್ಡಗಾಲು ಹಾಕುತ್ತಲೇ ಇದೆ. ಇನ್ನಾದ್ರೂ ರಾಜ್ಯ ಸರ್ಕಾರ ಎಚ್ಚೆತ್ತು, ಮಹಾದಾಯಿ ಭಾಗದ ರೈತರ ಬಗ್ಗೆಯೂ ಕಾಳಜಿ ವಹಿಸಬೇಕಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಭಾರೀ ಹಿನ್ನಡೆ.. ಪ್ರಬಲ ಸಮುದಾಯಗಳಿಗೆ ಮಣಿದ ಕಾಂಗ್ರೆಸ್ ಹೈಕಮಾಂಡ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ