Advertisment

ಬಾಹ್ಯಾಕಾಶದಲ್ಲೂ ಮಹಾಕುಂಭ ಹೀಗೆಯೇ ಕಾಣುತ್ತದೆ.. ಅದ್ಭುತ ಫೋಟೋ ಹಂಚಿಕೊಂಡ ISRO

author-image
Ganesh
Updated On
ಬಾಹ್ಯಾಕಾಶದಲ್ಲೂ ಮಹಾಕುಂಭ ಹೀಗೆಯೇ ಕಾಣುತ್ತದೆ.. ಅದ್ಭುತ ಫೋಟೋ ಹಂಚಿಕೊಂಡ ISRO
Advertisment
  • ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭ
  • 8 ಕೋಟಿಗೂ ಹೆಚ್ಚು ಯಾತ್ರಿಕರಿಂದ ಪವಿತ್ರ ಸ್ನಾನ
  • 45 ದಿನಗಳ ಕಾಲ ನಡೆಯಲಿರುವ ಮಹಾ ಕುಂಭ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಯಾಗರಾಜ್​ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭಕ್ಕೆ ಸಂಬಂಧಿಸಿದ ಫೋಟೋಗಳನ್ನು ರಿಲೀಸ್ ಮಾಡಿದೆ. ಉಪಗ್ರಹದ ಮೂಲಕ ತೆಗೆದ ಟೆಂಟ್ ಸಿಟಿ ಫೋಟೋಗಳಾಗಿವೆ.

Advertisment

ಆ ಫೋಟೋಗಳು ಮಹಾಕುಂಭದ ವೈಭವದ ನೋಟವನ್ನು ಹೇಳುತ್ತಿವೆ. ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಕೋಟಿಗಟ್ಟಲೇ ಜನರು ಪ್ರಪಂಚದಾದ್ಯಂತ ಬರುತ್ತಿದ್ದಾರೆ. ಈ ಮಹಾಕುಂಭವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ. ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾಗಿದ್ದು, ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಇಲ್ಲಿಯವರೆಗೆ 8 ಕೋಟಿಗೂ ಹೆಚ್ಚು ಯಾತ್ರಿಕರು ಪವಿತ್ರ ಸ್ನಾನ ಮಾಡಿದ್ದಾರೆ.

ಇದನ್ನೂ ಓದಿ: ವೈರಲ್ ಹುಡುಗಿಯ ಬಡತನದ ಬದುಕು.. ಒಂದೇ ಕೋಣೆಯ ಮನೆ.. ಹೇಗಿದೆ ಜೀವನ..?

publive-image

ಇಸ್ರೋ ತೆಗೆದ ಫೋಟೋ..

ತ್ರಿವೇಣಿ ಸಂಗಮ ಬಳಿ ಕುಂಭಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಮೂಲಸೌಕರ್ಯಗಳನ್ನು ಫೋಟೋಗಳು ತೋರಿಸುತ್ತಿವೆ. ಈ ಚಿತ್ರಗಳನ್ನು EOS-04 (RISAT-1A) 'C' ಬ್ಯಾಂಡ್ ಮೈಕ್ರೋವೇವ್ ಉಪಗ್ರಹದಿಂದ ತೆಗೆಯಲಾಗಿದೆ. ಅಂದ್ಹಾಗೆ ಈ ಸರಣಿ ಫೋಟೋಗಳು 15 ಸೆಪ್ಟೆಂಬರ್ 2023 ಮತ್ತು 29 ಡಿಸೆಂಬರ್ 2024 ರ ಅವಧಿಯಲ್ಲಿ ತೆಗೆಯಲಾಗಿದೆ ಎಂದು ಇಸ್ರೋ ಹೇಳಿದೆ. ಮತ್ತೊಂದು ಸರಣಿ ಫೋಟೋದಲ್ಲಿ 2024, ಡಿಸೆಂಬರ್ 22 ಮತ್ತು ಜನವರಿ 10, 2025ರಲ್ಲಿ ತೆಗೆದ ಫೋಟೋ ಕೂಡ ಇದೆ.

publive-image

ಉಪಗ್ರಹ ಚಿತ್ರಗಳು ಭಾರತದ ಪಗೋಡಾ ಪಾರ್ಕ್‌ ತೋರಿಸುತ್ತವೆ. ಅದು ಬರೋಬ್ಬರಿ 12 ಎಕರೆ ಜಾಗದಲ್ಲಿ ಟೆಂಟ್ ವಿನ್ಯಾಸಗೊಳಿಸಲಾಗಿದೆ. ಭಾರತದ ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳು ಮತ್ತು ಹಗಲು ರಾತ್ರಿ ವೀಕ್ಷಿಸುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್ ಬಳಸಿ ಈ ಫೋಟೋಗಳನ್ನು ತೆಗೆಯಲಾಗಿದೆ.

Advertisment

publive-image

ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಮಹಾ ಕುಂಭಮೇಳದ ಚಿತ್ರಗಳ ಸರಣಿಯನ್ನು ಉಪಗ್ರಹದಿಂದ ರಿಸೀವ್‌ ಮಾಡಿಕೊಂಡಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಕುಂಭಮೇಳದಲ್ಲಿ ವಿಪತ್ತು ಮತ್ತು ಕಾಲ್ತುಳಿತಗಳನ್ನು ತಗ್ಗಿಸಲು ಈ ಚಿತ್ರಗಳನ್ನು ಬಳಸುತ್ತಿದೆ.

ಇದನ್ನೂ ಓದಿ: ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment