/newsfirstlive-kannada/media/post_attachments/wp-content/uploads/2025/01/MahaKumbh2025.jpg)
ಪ್ರಯಾಗ್‌ರಾಜ್: ಮಕರ ಸಂಕ್ರಾಂತಿಯದ್ದೇ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಜಾತ್ರೆಯಲ್ಲಿ ಸೇರಿಕೊಂಡಿದ್ದಾರೆ ಕೋಟ್ಯಂತರ ಭಕ್ತರು. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ಮಹಾ ಕುಂಭಮೇಳ ಅದ್ದೂರಿಯಾಗಿ ನೆರವೇರುತ್ತಿದೆ. ಈಗಾಗಲೇ ಮಹಾ ಕುಂಭವೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಈ ವೇಳೆ ಮಹಾ ಕುಂಭ ಮೇಳದಲ್ಲಿ ಬಾಬ ಒಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!
ರಮೇಶ್ ಕುಮಾರ್ ಮಾಂಝಿ ಅಲಿಯಾಸ್ ಕಾಂತೆ ವಾಲೆ ಬಾಬಾ ಅವರು ಮುಳ್ಳಿನ ಮೇಲೆ ಮಲಗಿ, ಮುಳ್ಳನ್ನು ತನ್ನ ಮೇಲೆ ಹೊದಿಕೆಯಂತೆ ಹಾಕಿಕೊಳ್ಳುವ ಮೂಲಕ ಅಪಾರ ಸಂಖ್ಯೆಯ ಭಕ್ತರ ಗಮನ ಸೆಳೆದಿದ್ದಾರೆ. ಮಾಹಿತಿ ಪ್ರಕಾರ, ಈ ಸಂತ ಸುಮಾರು 40 ವರ್ಷಗಳಿಂದ ಮುಳ್ಳಿನ ಗಿಡಗಳ ಮೇಲೆಯೇ ಮಲಗುತ್ತಿದ್ದು 'ಕಾಂತೆ ವಾಲೆ ಬಾಬಾ' ಎಂದೇ ಪ್ರಖ್ಯಾತರಾಗಿದ್ದಾರೆ.
ನಾನು ಇದನ್ನು ಕಳೆದ 40-50 ವರ್ಷಗಳಿಂದ ಪ್ರತಿ ವರ್ಷ ಮಾಡುತ್ತಿದ್ದೇನೆ. ಇದಕ್ಕೆ ದೇವರ ಆಶೀರ್ವಾದವೇ ಕಾರಣ, ಅದು ನನ್ನ ದೇಹಕ್ಕೆ ಪ್ರಯೋಜನ ನೀಡುತ್ತದೆ. ನನಗೆ ಯಾವತ್ತೂ ನೋವಾಗಿಲ್ಲ. ನನಗೆ ಸಿಗುವ ದಕ್ಷಿಣೆಯ ಅರ್ಧದಷ್ಟು ಭಾಗವನ್ನು ದಾನ ಮಾಡುತ್ತೇನೆ. ಉಳಿದಿದ್ದನ್ನು ನನ್ನ ಖರ್ಚಿಗೆ ಬಳಸುತ್ತೇನೆ ಎಂದು ಸಂತರು ಹೇಳಿದ್ದಾರೆ. ಈ ರಮೇಶ್ ಕುಮಾರ್ ಮಾಂಝಿ ಅಲಿಯಾಸ್ ಕಾಂತೆ ವಾಲೆ ಬಾಬಾ ಮುಳ್ಳಿನ ಮೇಲೆ ಮಲಗಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ. ಈ ಮಹಾಕುಂಭ ಮೇಳದಿಂದ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯ ಅಂದಾಜಿದೆ. 2025ರ ಮಹಾ ಕುಂಭಮೇಳಕ್ಕೆ ಜನವರಿ 13ಕ್ಕೆ ಚಾಲನೆ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ